ತಿರುಪತಿಗೆ ತೆರಳುವ ಕನ್ನಡಿಗರಿಗೆ ಗುಡ್ ನ್ಯೂಸ್, ಇನ್ಮುಂದೆ ವಸತಿ ಸಮಸ್ಯೆ ಇರೊಲ್ಲವಂತೆ….!

Follow Us :

ಇಡೀ ದೇಶದಲ್ಲೇ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ತಿರುಮಲ ತಿರುಪತಿ ದೇವಾಸ್ಥಾನಕ್ಕೆ ಪ್ರತಿನಿತ್ಯ ಸಾವಿರಾರು ಕಿ.ಮೀ ಗಳ ದೂರದಿಂದ ಲಕ್ಷಾಂತರ ಭಕ್ತಾಧಿಗಳು ಆಗಮಿಸುತ್ತಿರುತ್ತಾರೆ. ಕರ್ನಾಟಕದಿಂದಲೂ ಅತೀ ಹೆಚ್ಚು ಭಕ್ತರು ತೆರಳುತ್ತಾರೆ. ತಿರುಮಲದಲ್ಲಿ ತಂಗಲು ಅತಿಥಿಗೃಹಗಳ ಸಮಸ್ಯೆ ಕೆಲವೊಮ್ಮೆ ಹೆಚ್ಚಾಗುತ್ತದೆ. ಇದೀಗ ಆ ಸಮಸ್ಯೆಯಿಂದ ಕನ್ನಡಿಗರಿಗೆ ಪರಿಹಾರ ಸಿಗಲಿದೆ ಎಂದು ಹೇಳಲಾಗುತ್ತಿದೆ.

ತಿರುಮಲದಲ್ಲಿ ನೆಲೆಸಿರುವ ತಿಮ್ಮಪ್ಪನ ದರ್ಶನಕ್ಕೆ ಪ್ರತಿನಿತ್ಯ ನೂರಾರು ಸಂಖ್ಯೆಯ ಭಕ್ತಾಧಿಗಳು ಆಗಮಿಸುತ್ತಿರುತ್ತಾರೆ. ಕರ್ನಾಟಕದಿಂದಲೂ ಲಕ್ಷಾಂತರ ಮಂದಿ ತಿಮ್ಮಪ್ಪ ದರ್ಶನ ಪಡೆಯಲು ಹೋಗುತ್ತಿರುತ್ತಾರೆ. ಈ ವೇಳೆ ಅತಿಥಿ ಗೃಹ ಸೇರಿದಂತೆ ಅನೇಕ ಸಮಸ್ಯೆಗಳನ್ನು ಭಕ್ತರು ಎದುರಿಸುತ್ತಿರುತ್ತಾರೆ. ಈ ಕಾರಣದಿಂದ ಕರ್ನಾಟಕ ಸರ್ಕಾರ ತಿರುಪತಿಯಲ್ಲಿ ಕನ್ನಡಿಗರಿಗಾಗಿ ನೂರಾರು ಕೋಟಿ ರುಪಾಯಿಗಳ ವೆಚ್ಚದಲ್ಲಿ ಅತಿಥಿ ಗೃಹ ನಿರ್ಮಾಣ ಮಾಡಲಾಗುತ್ತಿದ್ದು, ಅದಕ್ಕೆ ಕನಕ ಭವನ ಎಂದು ಹೆಸರಡಿಲಾಗಿದೆ. ಇನ್ನೂ ಈ ಕಾಮಗಾರಿ ಪೂರ್ಣಗೊಂಡರೇ ಕರ್ನಾಟಕದಿಂದ ತಿರುಪತಿಗೆ ಹೋಗುವ ಭಕ್ತರಿಗೆ ವಸತಿ ಸಮಸ್ಯೆ ತಪ್ಪಲಿದೆ.

ಈ ಬಗ್ಗೆ ಸಚಿ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದು, ಸದ್ಯ ಕನಕ ಭವನದ ಕಾಮಗಾರಿ ಶೇ.70 ರಷ್ಟು ಪೂರ್ಣಗೊಂಡಿದೆ. ಮುಂದಿನ ವರ್ಷ ಜನವರಿ ಮಾಹೆಯ ವೇಳೆಗೆ ಕನಕ ಭವನ ಸಾರ್ವಜನಿಕರ ಬಳಕೆಗೆ ಸಿಗಲಿದೆ. ಈ ಭವನದ ನಿರ್ಮಾಣದಿಂದ ರಾಜ್ಯದ ಭಕ್ತರಿಗೆ ಹೆಚ್ಚು ಅನುಕೂಲವಾಗಲಿದೆ. ಅದೇ ಮಾದರಿಯಲ್ಲಿ ಶ್ರೀಶೈಲಂ ಹಾಗೂ ಅಯೋಧ್ಯೆಗೆ ತೆರಳುವಂತಹ ರಾಜ್ಯದ ಭಕ್ತರಿಗೂ ಸಹ ಅತಿಥಿ ಗೃಹ ನಿರ್ಮಾಣ ಮಾಡಲು ಸರ್ಕಾರ ತೀರ್ಮಾನ ತೆಗೆದುಕೊಂಡಿದ್ದು, ಈ ಸಂಬಂಧ ಆಯಾ ರಾಜ್ಯದ ಸರ್ಕಾರಕ್ಕೆ ಅನುಮತಿಗಾಗಿ ಪತ್ರ ಸಹ ಬರೆಯಲಾಗಿದೆ ಎಂದು ತಿಳಿಸಿದ್ದಾರೆ.