ಸ್ಟಾರ್ ನಟಿ ನಿತ್ಯಾ ಮಿನನ್ ಗೆ ಸ್ಟಾರ್ ಹಿರೋ ಯಿಂದ ಕಿರುಕುಳವಂತೆ, ಈ ಬಗ್ಗೆ ನಿತ್ಯಾ ಮಿನನ್ ಹೇಳಿದ್ದು ಹೀಗೆ….!

ಸಿನಿಮಾ ಸೆಲೆಬ್ರೆಟಿಗಳ ಬಗ್ಗೆ ಆಗಾಗ ಕೆಲವೊಂದು ರೂಮರ್‍ ಗಳು ಕೇಳಿಬರುತ್ತಿರುತ್ತವೆ. ಅದು ಸತ್ಯನಾ ಅಥವಾ ಸುಳ್ಳಾ ಎಂಬುದನ್ನು ತಿಳಿದುಕೊಳ್ಳದೇ ಅನೇಕರು ಅದು ನಿಜ ಎಂದೂ ಸಹ ನಂಬಿ ಎಲ್ಲಾ ಕಡೆ ಶೇರ್‍ ಮಾಡುತ್ತಿರುತ್ತಾರೆ. ಅದೇ ಮಾದರಿಯಲ್ಲಿ ಇದೀಗ ಸ್ಟಾರ್‍ ನಟಿ ನಿತ್ಯಾ ಮಿನನ್ ಗೆ ಓರ್ವ ಸ್ಟಾರ್‍ ಹಿರೋ ಕಿರುಕುಳ ಕೊಟ್ಟಿದ್ದ ಎಂದು ಆಕೆಯೇ ಹೇಳಿದ್ದಾರೆ ಎಂಬ ರೂಮರ್‍ ಒಂದು ವೈರಲ್ ಆಗುತ್ತಿದ್ದು, ಈ ಬಗ್ಗೆ ನಿತ್ಯಾ ಮಿನನ್ ಸಹ ರಿಯಾಕ್ಟ್ ಆಗಿದ್ದಾರೆ.

ಸ್ಟಾರ್‍ ನಟಿ ನಿತ್ಯಾ ಮಿನನ್ ಓರ್ವ ಸ್ಟಾರ್‍ ನಟ ಕಿರುಕುಳ ನೀಡುತ್ತಿದ್ದಾನೆ, ತಮಿಳು ನಟ ನನಗೆ ಕಿರುಕುಳ ನೀಡುತ್ತಿದ್ದಾನೆ. ಆತನಿಂದ ಕಾಲಿವುಡ್ ನಲ್ಲಿ ನಾನು ತುಂಬಾ ಸಮಸ್ಯೆಗಳನ್ನು ಎದುರಿಸಿದೆ ಎಂದು ನಿತ್ಯಾ ಮಿನನ್ ಹೇಳಿದ್ದಾರೆ ಎಂದು ಕೆಲವೊಂದು ರೂಮರ್‍ ಗಳು ಕೇಳಿಬಂದವು. ಈ ಸುದ್ದಿ ಕಡಿಮೆ ಸಮಯದಲ್ಲೇ ಕಾಲಿವುಡ್ ಅಂಗಳದಲ್ಲಿ ಸಂಚಲನವನ್ನು ಸೃಷ್ಟಿಸಿತ್ತು. ಇನ್ನೂ ಆ ಸ್ಟಾರ್‍ ಹಿರೋ ಯಾರು ಎಂಬ ಚರ್ಚೆಗಳೂ ಸಹ ಶುರುವಾದವು. ಇದೀಗ ಈ ಬಗ್ಗೆ ನಿತ್ಯಾ ಮಿನನ್ ರವರೇ ರಿಯಾಕ್ಟ್ ಆಗಿದ್ದು, ಹರಿದಾಡುತ್ತಿರುವ ರೂಮರ್‍ ಗಳ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ.

ಇನ್ನೂ ಈ ಬಗ್ಗೆ ವರದಿಗಾರರೊಬ್ಬರು ನಿತ್ಯಾಮಿನನ್ ಜೊತೆಗೆ ಚಿಟ್ ಚಾಟ್ ಮಾಡುವಾಗ ನಿತ್ಯಾಮಿನನ್ ಈ ಬಗ್ಗೆ ರಿಯಾಕ್ಟ್ ಆಗಿದ್ದಾರೆ. ತಮಿಳು ಹಿರೋ ಕಾರಣದಿಂದ ನಾನು ಕಿರುಕುಳ ಅನುಭವಿಸಿದ್ದೆ, ಕಾಲಿವುಡ್ ನಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿದ್ದೆ ಎಂದು ಹರಿದಾಡುತ್ತಿರುವ ಸುದ್ದಿಗಳಲ್ಲಿ ಕಿಂಚಿತ್ತು ಸತ್ಯಾಂಶವಿಲ್ಲ. ಎಲ್ಲವೂ ನಿರಾಧಾರವಾದ ಕಥೆಗಳು ಎಂದು ಆಕೆ ರೂಮರ್‍ ಗಳನ್ನು ತಳ್ಳಿಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಆ ರೂಮರ್‍ ಗೆ ತೆರೆ ಬಿದಿದ್ದೆ. ಇನ್ನೂ ಈ ಹಿಂದೆ ಸಹ ನಿತ್ಯಾ ಮಿನನ್ ಬಗ್ಗೆ ಅನೇಕ ರೂಮರ್‍ ಗಳು ಕೇಳಿಬಂದವು. ಈ ಹಿಂದೆ ಆಕೆ ಮದುವೆಯಾಗಲಿದ್ದಾರೆ  ಎಂಬ ರೂಮರ್‍ ಸಹ ಕೇಳಿಬಂತು. ಆತ ಆಕೆಯ ಬಾಲ್ಯದ ಸ್ನೇಹಿತ ಇಬ್ಬರ ಕುಟುಂಬಗಳ ನಡುವೆ ಒಳ್ಳೆಯ ಸಂಬಂಧವಿದೆ ಎಂದು ರೂಮರ್‍ ಗಳು ಹರಿದಾಡಿತ್ತು. ಎಲ್ಲವೂ ರೂಮರ್‍ ಗಳಾಗಿಯೇ ಉಳಿದಿದೆ.

ಇನ್ನೂ ನಿತ್ಯಾಮಿನನ್ ಕುಮಾರಿ ಶ್ರೀಮತಿ ಎಂಬ ವೆಬ್ ಸಿರೀಸ್ ನಲ್ಲಿ ನಟಿಸಿದ್ದು, ಈ ಸಿರೀಸ್ ಇದೇ ಸೆ.28 ರಿಂದ ಅಮೇಜಾನ್ ಪ್ರೈಂ ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈ ಸಿರೀಸ್ ನಲ್ಲಿ ನಿತ್ಯಾಮಿನನ್ ವಿಭಿನ್ನವಾದ ಪಾತ್ರದಲ್ಲಿ ನಟಿಸಿದ್ದಾರೆ. ಕೊನೆಯದಾಗಿ ಆಕೆ ಧನುಷ್ ಜೊತೆಗೆ ಸರ್‍ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾ ಸಹ ಒಳ್ಳೆಯ ಸಕ್ಸಸ್ ಕಂಡಿತ್ತು.