ನಟನೆಗೆ ಗುಡ್ ಬೈ ಹೇಳ್ತಾರಾ ಗೋವಾ ಬ್ಯೂಟಿ, ಪತಿ ಹಾಗೂ ಮಗನೊಂದಿಗೆ ದೇಶ ಬಿಟ್ಟು ಹೋಗುತ್ತಿದ್ದಾರಂತೆ ಇಲಿಯಾನಾ?

Follow Us :

ಗೋವಾ ಬ್ಯೂಟಿ ಇಲಿಯಾನಾ ಸಿನೆಮಾಗಳಿಂದ ದೂರವಾಗಿ ಅನೇಕ ವರ್ಷಗಳು ಕಳೆದರೂ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳಿಗೆ ಟಚ್ ನಲ್ಲೆ ಇದ್ದರು. ಸದಾ ಬಿಕಿನಿಯಲ್ಲಿ ಕಾಣಿಸಿಕೊಳ್ಳುತ್ತಾ ಅಭಿಮಾನಿಗಳಿಗೆ ಹಾಟ್ ಟ್ರೀಟ್ ನೀಡುತ್ತಿದ್ದರು. ಆದರೆ ಕೆಲವು ದಿನಗಳ ಹಿಂದೆಯಷ್ಟೆ ಆಕೆ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದರು. ಇತ್ತೀಚಿಗೆ ಹೆಚ್ಚಾಗಿ ಇಲಿಯಾನಾ ವೈಯುಕ್ತಿಕ ಕಾರಣಗಳಿಂದಲೇ ಸುದ್ದಿಯಾಗುತ್ತಿದ್ದರು. ಇದೀಗ ಆಕೆಯ ಬಗ್ಗೆ ಮತ್ತೊಂದು ಸುದ್ದಿ ಕೇಳಿಬರುತ್ತಿದ್ದು, ಅದರಂತೆ ಆಕೆ ನಟನೆಗೆ ಗುಡ್ ಬೈ ಹೇಳಿ ಪತಿ ಹಾಗೂ ಮಗನೊಂದಿಗೆ ದೇಶ ಬಿಟ್ಟು ಹೋಗಲಿದ್ದಾರೆ ಎಂಬ ಸುದ್ದಿಯೊಂದು ವೈರಲ್ ಆಗುತ್ತಿದೆ.

ತೆಲುಗಿನ ದೇವದಾಸು ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಇಲಿಯಾನ ಮೊದಲನೇ ಸಿನೆಮಾದ ಮೂಲಕ ಒಳ್ಳೆಯ ಕ್ರೇಜ್ ಪಡೆದುಕೊಂಡರು. ಬಳಿಕ ಮಹೇಶ್ ಬಾಬು ರವರ ಪೋಕಿರಿ ಸಿನೆಮಾದ ಮೂಲಕ ಓವರ್‍ ನೈಟ್ ಸ್ಟಾರ್‍ ಆದರು. ಬಳಿಕ ಸ್ಟಾರ್‍ ನಟಿಯಾಗಿ ಅನೇಕ ಸೂಪರ್‍ ಹಿಟ್ ಸಿನೆಮಾಗಳಲ್ಲಿ ನಟಿಸಿ ಫೇಂ ಪಡೆದುಕೊಂಡರು. ಸ್ಟಾರ್‍ ನಟರಿಂದ ಯಂಗ್ ಹಿರೋಗಳ ಜೊತೆಗೆ ನಟಿಸಿದ್ದ ಈಕೆ ತೆಗೆದುಕೊಂಡ ಕೆಲವೊಂದು ತಪ್ಪು ನಿರ್ಣಯಗಳ ಕಾರಣದಿಂದ ಆಕೆ ಸಿನಿರಂಗದಿಂದ ದೂರ ಉಳಿಯಬೇಕಾಯಿತು. ಬಾಲಿವುಡ್ ಸಿನೆಮಾಗಳ ಮೇಲಿನ ಮೋಜಿನಿಂದ ಆಕೆ ಟಾಲಿವುಡ್ ಬಿಟ್ಟು ಬಾಲಿವುಡ್ ಗೆ ಹಾರಿದರು. ಆದರೆ ಬಾಲಿವುಡ್ ನಲ್ಲಿ ಆಕೆ ಅಂದುಕೊಂಡಷ್ಟು ಸಕ್ಸಸ್ ಕಾಣಲಿಲ್ಲ. ಆಕೆ ಕೆಲವೊಂದು ವೈಯುಕ್ತಿಕ ಕಾರಣಗಳಿಂದ ಸಿನೆಮಾಗಳಿಂದ ದೂರವೇ ಉಳಿದರು.

ನಟಿ ಇಲಿಯಾನಾ ಮದುವೆಗೂ ಮುಂಚೆಯೇ ಗರ್ಭಿಣಿಯಾಗುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದರು. ಈ ಕಾರಣದಿಂದ ಆಕೆ ತುಂಬಾನೆ ಸುದ್ದಿಯಾಗಿದ್ದರು. ಬಳಿಕ ಆ.1 ರಂದು ಇಲಿಯಾನಾ ಗಂಡು ಮಗುವಿಗೆ ಜನ್ಮ ಕೊಟ್ಟರು. ಇಲಿಯಾನಾ ಮಗುವಿಗೆ ತಂದೆ ಯಾರು, ಆತ ಯಾರು ಎಂಬ ಸುದ್ದಿ ಜೊರಾಗಿಯೇ ಕೇಳಿಬಂತು. ಅದಕ್ಕೆ ಆಕೆ ತನ್ನ ಪತಿ ಮಿಚಲ್ ಡೊಲೋನ್ ರನ್ನು ಸೋಷಿಯಲ್ ಮಿಡಿಯಾ ಮೂಲಕ ಪರಿಚಯಿಸಿದ್ದರು. ಇಲಿಯಾನಾ ಗರ್ಭಿಣಿಯಾಗುವುದಕ್ಕೂ ಮುಂಚೆಯೇ ವಿವಾಹವಾಗಿದ್ದರಂತೆ. ಆದರೆ ಆಕೆಯ ಮದುವೆ ಎಲ್ಲಿ, ಯಾವಾಗ ನಡೆಯಿತು ಎಂಬ ಪ್ರಶ್ನೆಗಳು ಮಾತ್ರ ಹಾಗೆಯೇ ಉಳಿದಿದೆ. ಇದೀಗ ಇಲಿಯಾನಾ ನಟನೆಗೆ ಗುಡ್ ಬೈ ಹೇಳಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.

ನಟಿ ಇಲಿಯಾನಾ ಇದೀಗ ತನ್ನ ಕೆರಿಯರ್‍ ಹಾಗೂ ಜೀವನದ ಬಗ್ಗೆ ಸಂಚಲನಾತ್ಮಕ ನಿರ್ಣಯವೊಂದನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇಲಿಯಾನಾ ತನ್ನ ಪತಿ ಮಗನೊಂದಿಗೆ ಇಂಡಿಯಾ ಬಿಟ್ಟು ಯುಎಸ್ ನಲ್ಲಿ ಸೆಟಲ್ ಆಗಲು ಪ್ಲಾನ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಆಕೆಗೆ ನಟನೆಯ ಬಗ್ಗೆ ಆಸಕ್ತಿ ಇಲ್ಲವಂತೆ, ಇದರ ಜೊತೆಗೆ ಆಕೆ ಅವಕಾಶಗಳೂ ಸಹ ಬರುತ್ತಿಲ್ಲ. ಈ ಎಲ್ಲಾ ಕಾರಣಗಳಿಂದ ಆಕೆ ಪತಿಯೊಂದಿಗೆ ಯುಎಸ್ ನಲ್ಲಿ ಸೆಟಲ್ ಆಗಲು ಪ್ಲಾನ್ ಮಾಡುತ್ತಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದ್ದು, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಮಾತ್ರ ಇಲ್ಲ. ಆದರೆ ಸುದ್ದಿ ಮಾತ್ರ ವೈರಲ್ ಆಗುತ್ತಿದೆ.