ನಾನು ಸೂಪರ್ ಸ್ಟಾರ್ ಆಗಲು, ಲೆಜೆಂಡ್ ಆಗಲು ಅದೇ ಕಾರಣ, ಪವಾಡಗಳು ಸಂಭವಿಸುತ್ತವೆ ಎಂದ ಸೂಪರ್ ಸ್ಟಾರ್ ರಜನಿ……!

ಸೂಪರ್‍ ಸ್ಟಾರ್‍ ಆಗಿ ಸಾಗುತ್ತಿರುವ ನಟ ರಜನಿಕಾಂತ್ ಬಸ್ ಕಂಡಕ್ಟರ್‍ ಆಗಿದ್ದು ಹಂತ ಹಂತವಾಗಿ ಕಠಿಣ ಪರಿಶ್ರಮದಿಂದ ಇದೀಗ ಸ್ಟಾರ್‍ ನಟರಾಗಿದ್ದಾರೆ. ಮರಾಠಿ ಕುಟುಂಬದಲ್ಲಿ ಜನಿಸಿದ ಈತ ಬೆಂಗಳೂರಿನ ಬಿಟಿಎಸ್ ಬಸ್ ಕಂಡಕ್ಟರ್‍ ಆಗಿ…

ಸೂಪರ್‍ ಸ್ಟಾರ್‍ ಆಗಿ ಸಾಗುತ್ತಿರುವ ನಟ ರಜನಿಕಾಂತ್ ಬಸ್ ಕಂಡಕ್ಟರ್‍ ಆಗಿದ್ದು ಹಂತ ಹಂತವಾಗಿ ಕಠಿಣ ಪರಿಶ್ರಮದಿಂದ ಇದೀಗ ಸ್ಟಾರ್‍ ನಟರಾಗಿದ್ದಾರೆ. ಮರಾಠಿ ಕುಟುಂಬದಲ್ಲಿ ಜನಿಸಿದ ಈತ ಬೆಂಗಳೂರಿನ ಬಿಟಿಎಸ್ ಬಸ್ ಕಂಡಕ್ಟರ್‍ ಆಗಿ ಕೆಲಸ ಪ್ರಾರಂಭಿಸಿ ಇದೀಗ ಸಿನಿರಂಗದಲ್ಲಿ ಮೇರು ನಟನಾಗಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಪಡೆದುಕೊಂಡು ವಯಸ್ಸಾದರೂ ಸಹ ಅನೇಕ ಸಿನೆಮಾಗಳ ಮೂಲಕ ರಂಜಿಸುತ್ತಿದ್ದಾರೆ. ಇದೀಗ ಅವರು ಜೀವನದಲ್ಲಿ ಸಂಭವಿಸುವಂತಹ ಪವಾಡಗಳ ಬಗ್ಗೆ ಮಾತನಾಡಿದ್ದಾರೆ.

ದೇಶದ ಸೂಪರ್‍ ಸ್ಟಾರ್‍ ನಟ ರಜನಿಕಾಂತ್ ರವರು ವೇದಿಕೆಯೊಂದರಲ್ಲಿ ಮಾತನಾಡಿದ್ದು, ಜೀವನದಲ್ಲಿ ಸಂಭವಿಸುವಂತಹ ಪವಾಡಗಳ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ. ಜೀವನದಲ್ಲಿ ಮಿರಾಕಲ್ ಗಳು ಸಂಭವಿಸುತ್ತವೆ ಎಂದಿದ್ದಾರೆ. ಅದಕ್ಕೆ ಅವರು ಒಂದು ಉದಾಹರಣೆಯನ್ನು ಕೊಟ್ಟಿದ್ದಾರೆ. ಸಾಮಾನ್ಯ ಬಸ್ ಕಂಡಕ್ಟರ್‍ ಒಬ್ಬರು ಇದೀಗ ಲೆಜೆಂಡ್ ಗಳ ಸಾಲಿಗೆ ಸೇರಿಕೊಂಡಿರುವುದು ದೊಡ್ಡ ಪವಾಡವೇ ಆಗಿದೆ. ನನ್ನ ಯಶಸ್ಸನ್ನು, ನನಗೆ ಬಂದ ಬಹುಮಾನಗಳನ್ನು ನಾನು ನನ್ನ ಸಹೋದರ, ಅಪ್ಪ, ಅಮ್ಮ ಹಾಗೂ ತಮಿಳುನಾಡಿನ ಜನತೆಗೆ ಡೆಡಿಕೇಟ್ ಮಾಡುತ್ತೇನೆ. ತಮಿಳು ಜನರ ಪ್ರೀತಿ ವಿಶ್ವಾಸ ಬೆಂಬಲ ಇಲ್ಲದಿದ್ದರೇ ನಾನು ಈ ಹಂತಕ್ಕೆ ಬೆಳೆಯಲು ಸಾಧ್ಯವೇ ಇರಲಿಲ್ಲ. ಇದೀಗ ನಾನು ಈ ಮಟ್ಟಿಗೆ ಸಾಧನೆ ಮಾಡಿದ್ದೇನೆ, ಇಂತಹ ದೊಡ್ಡ ವೇದಿಕೆಗಳಲ್ಲಿ ನಿಂತಿರಲು ಅವರೆಲ್ಲರ ಬೆಂಬಲದಿಂದ ಸಾಧ್ಯವಾಗಿದೆ ಎಂದು ಹೇಳಿದ್ದಾರೆ.

ಇನ್ನೂ ರಜನಿಕಾಂತ್ ರವರ ಸಾಧನೆ ಕಂಡರೇ ಅದು ಪವಾಡವೇ ಸರಿ ಎನ್ನಬಹುದಾಗಿದೆ. ಸಾಮಾನ್ಯ ಕಂಡಕ್ಟರ್‍ ಆಗಿದ್ದಂತಹ ರಜನಿಕಾಂತ್ ಇದೀಗ ವಿಶ್ವದಾಧ್ಯಂತ ಅಭಿಮಾನಿ ಬಳಗ, ಹೆಸರು, ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ರಜನಿಕಾಂತ್ ರವರು ಅಷ್ಟೊಂದು ದೊಡ್ಡ ಸಾಧನೆ ಮಾಡಿದರೂ ಸಹ ಸಾಮಾನ್ಯರಂತೆ, ಸರಳತೆಯ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಅವರ ಸಾಮಾಜಿಕ ಕಳಕಳಿ ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಬಹುದಾಗಿದೆ. ಇನ್ನೂ ರಜನಿಕಾಂತ್ ಕೊನೆಯದಾಗಿ ಜೈಲರ್‍ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಇದೀಗ ತಲೈವರ್‍170 ಸಿನೆಮಾದ ಶೂಟಿಂಗ್ ನಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಈ ಸಿನೆಮಾದಲ್ಲಿ ದೊಡ್ಡ ತಾರಾಬಳಗವೇ ಇದೆ ಎನ್ನಲಾಗಿದೆ. ಬಾಲಿವುಡ್ ಬಿಗ್ ಬಿ ಅಮಿತಾಭ್, ಟಾಲಿವುಡ್ ಸ್ಟಾರ್‍ ರಾಣಾ ದಗ್ಗುಬಾಟಿ ಸೇರಿದಂತೆ ಮಲಯಾಳಂ ಸ್ಟಾರ್‍ ನಟಿ ಮಂಜು ವಾರಿಯರ್‍ ನಟಿಸುತ್ತಿದ್ದಾರೆ. ಈ ಸಿನೆಮಾದ ಶೂಟೀಂಗ್ ಭರದಿಂದ ಸಾಗುತ್ತಿದ್ದು, ಮುಂದಿನ ವರ್ಷ ಈ ಸಿನೆಮಾ ತೆರೆಗೆ ಬರಲಿದೆ ಎನ್ನಲಾಗಿದೆ.