ಸಮಂತಾ ಮಾದರಿಯಲ್ಲಿ ಅಂತಹ ಸಾಂಗ್ಸ್ ಮಾಡೋಲ್ಲ ಎಂದ ಯಂಗ್ ಬ್ಯೂಟಿ ಕೃತಿ ಶೆಟ್ಟಿ, ವೈರಲ್ ಆದ ಕಾಮೆಂಟ್ಸ್…….!

ಸೌತ್ ಸಿನಿರಂಗದಲ್ಲಿ ಕನ್ನಡ ಮೂಲದ ನಟಿಯರ ಹವಾ ಜೋರಾಗಿಯೇ ನಡೆಯುತ್ತಿದೆ. ಈ ಸಾಲಿಗೆ ಯಂಗ್ ನಟಿ ಕೃತಿ ಶೆಟ್ಟಿ ಸಹ ಸೇರುತ್ತಾರೆ. ಕಡಿಮೆ ಸಮಯದಲ್ಲೇ ಸ್ಟಾರ್‍ ನಟಿಯಾಗಿ ಕ್ರೇಜ್ ಪಡೆದುಕೊಂಡ ಈಕೆ ದೊಡ್ಡ ಮಟ್ಟದ ಫ್ಯಾನ್ ಫಾಲೋಯಿಂಗ್ ಸಹ ಬೆಳೆಸಿಕೊಂಡಿದ್ದಾರೆ.  ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಬ್ಯುಸಿಯಾಗಿರುತ್ತಾರೆ. ಇದೀಗ ಆಕೆ ಸಮಂತಾ ರವರಂತೆ ಅಂತಹ ಸಾಂಗ್ಸ್ ಮಾಡೋಲ್ಲ ಎಂದು ಕಾಮೆಂಟ್ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಆಕೆಯ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ.

ನಟಿ ಕೃತಿ ಶೆಟ್ಟಿ ಅಕ್ಕಿನೇನಿ ನಾಗಚೈತನ್ಯ ಜೊತೆಗೆ ಕಸ್ಟಡಿ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾದ ಪ್ರಮೋಷನ್ ಕಾರ್ಯಕ್ರಮದ ನಿಮಿತ್ತ ಆಕೆ ಅನೇಕ ಸಂದರ್ಶನಗಳಲ್ಲಿ ಭಾಗಿಯಾಗಿದ್ದರು. ಈ ಹಾದಿಯಲ್ಲೇ ನಡೆದ ಸಂದರ್ಶನವೊಂದರಲ್ಲಿ ಕೃತಿ ಶೆಟ್ಟಿ ಅನೇಕ ಹೇಳಿಕೆಗಳನ್ನು ನೀಡಿದ್ದಾರೆ. ಸಮಂತಾ ಬ್ಲಾಕ್ ಬ್ಲಸ್ಟರ್‍ ಹಿಟ್ ಹೊಡೆದ ಪುಷ್ಪಾ ಸಿನೆಮಾದಲ್ಲಿ ಹೂ ಅಂಟಾವಾ ಮಾಮ ಎಂಬ ಹಾಡಿಗೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದರು. ಈ ಹಾಡು ಭಾರಿ ಸಕ್ಸಸ್ ಕಂಡಿತ್ತು. ಈ ಹಾಡಿನಲ್ಲಿ ಸಮಂತಾ ಶಾರ್ಟ್ ಫ್ರಾಕ್ ಧರಿಸಿ ಭಾರಿ ಬೋಲ್ಡ್ ಆಗಿ ನೃತ್ಯ ಮಾಡಿ ಪ್ರೇಕ್ಷಕರನ್ನು ಫಿದಾ ಮಾಡಿದ್ದರು. ಅಂತಹ ಸಾಂಗ್ ನಲ್ಲಿ ನಟಿಸುವ ಅವಕಾಶ ಸಿಕ್ಕರೇಮಾಡುತ್ತಿರಾ ಎಂದು ಕೃತಿ ಶೆಟ್ಟಿಗೆ ಪ್ರಶ್ನೆ ಎದುರಾಗಿದ್ದು, ಅದಕ್ಕೆ ಆಕೆ ಶಾಕಿಂಗ್ ಕಾಮೆಂಟ್ ಮಾಡಿದ್ದಾರೆ.

ಸಂದರ್ಶನದಲ್ಲಿ ಕೃತಿ ಶೆಟ್ಟಿಗೆ ಸಮಂತಾ ರವರ ಮಾದರಿಯಲ್ಲಿ ಹೂ ಅಂಟವಾ ಮಾಮ ಹಾಡಿನ ಆಫರ್‍ ನಿಮಗೆ ಬಂದರೇ ಮಾಡುತ್ತೀರಾ ಎಂದು ಪ್ರಶ್ನೆ ಎದುರಾಗಿದೆ. ಈ ಪ್ರಶ್ನೆಗೆ ಕೃತಿ ಶೆಟ್ಟಿ ಉತ್ತರಿಸಿ, ಸದ್ಯ ನನಗೆ ಅಂತಹ ಸಾಂಗ್ ಮಾಡುವಂತಹ ಆಲೋಚನೆಯಿಲ್ಲ. ಅಂತಹ ಹಾಡುಗಳ ಬಗ್ಗೆ ನನಗೆ ಅವಗಾಹನೆ ಇಲ್ಲ. ಎಂದೂ ಸಹ ಆಲೋಚನೆ ಮಾಡಿಯೂ ಇಲ್ಲ. ಇಷ್ಟು ವರ್ಷಗಳ ನನ್ನ ಕೆರಿಯರ್‍ ನಲ್ಲಿ ನಮಗೆ ಅನುಕೂಲ ಇಲ್ಲದೇ ಇದ್ದಾಗ ಅಂತಹ ಕೆಲಸ ಮಾಡಲು ಹೋಗದೇ ಇರುವುದು ಒಳ್ಳೆಯದು. ಆದರೆ ಸಮಂತಾ ಫೈರ್‍ ಇದ್ದಂತೆ. ಆ ಹಾಡಿಗೆ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ ಎಂದು ಸಮಂತಾ ರವರನ್ನು ಹೊಗಳಿದ್ದಾರೆ. ಇನ್ನೂ ಶ್ಯಾಮಸಿಂಗರಾಯ್ ಸಿನೆಮಾದಲ್ಲೂ ಸಹ ಕೆಲವೊಂದು ಬೋಲ್ಡ್ ದೃಶ್ಯಗಳಿದ್ದು, ಮನಸ್ಪೂರ್ತಿಯಾಗಿ ನಟಿಸಲು ಆಗಲಿಲ್ಲ. ಬೋಲ್ಡ್ ಸೀನ್ ಗಳಲ್ಲಿ ನಟಿಸಲು ತುಂಬಾ ಸಮಸ್ಯೆ ಅನುಭವಿಸಿದ್ದೆ ಎಂದು ಕೃತಿ ಶೆಟ್ಟಿ ಹೇಳಿದ್ದಾರೆ.

ಇನ್ನೂ ಮೊದಲನೇ ಸಿನೆಮಾದ ಮೂಲಕ ಭಾರಿ ಕ್ರೇಜ್ ಪಡೆದುಕೊಂಡ ಕೃತಿ ಶೆಟ್ಟಿಗೆ ಬ್ಯಾಕ್ ಟು ಬ್ಯಾಕ್ ಸೋಲುಗಳು ಎದುರಾಗುತ್ತಿದೆ. ಇದೀಗ ಆಕೆ ಅಭಿನಯದ ಕಸ್ಟಡಿ ಸಿನೆಮಾ ಸಹ ಅಂದುಕೊಂಡಷ್ಟು ಸಕ್ಸಸ್ ಕಾಣಲಿಲ್ಲ. ದಿ ವಾರಿಯರ್‍, ಮಾಚರ್ಲ ನಿಯೋಜಕವರ್ಗಂ, ಆ ಅಮ್ಮಾಯಿ ಗುರಿಂಚಿ ಮೀಕು ಚೆಪ್ಪಾಲಿ ಸಿನೆಮಾಗಳ ಜೊತೆಗೆ ಇದೀಗ ಬಿಡುಗಡೆಯಾದ ಕಸ್ಟಡಿ ಸಿನೆಮಾ ಸಹ ಫ್ಲಾಪ್ ಆಗಿದೆ. ಸದ್ಯ ಆಕೆ ತಮಿಳು ಹಾಗೂ ಮಲಯಾಳಂ ಸಿನೆಮಾದಲ್ಲಿ ನಟಿಸುತ್ತಿದ್ದಾರೆ.