ಪೂಜಾ ಹೆಗ್ಡೆ ಆತ್ಮಹತ್ಯೆಗೆ ಯತ್ನ ಎಂದ ಕ್ರಿಟಿಕ್ ಗೆ ಲೀಗಲ್ ನೊಟೀಸ್ ಕಳುಹಿಸಿದ ಪೂಜಾ ಹೆಗ್ಡೆ….!

Follow Us :

ತನ್ನನ್ನು ತಾನು ದೊಡ್ಡ ಕ್ರಿಟಕ್ ಎಂದೇ ಬಿಂಬಿಸಿಕೊಳ್ಳುವ ಉಮೈರ್‍ ಸಂಧು ವಿವಾದಾತ್ಮಕ ಹೇಳಿಕೆಗಳನ್ನು ಪೋಸ್ಟ್ ಮಾಡುವ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಆತ ದುಬೈ ಸೆನ್ಸಾರ್‍ ಬೋರ್ಡ್ ಮೆಂಬರ್‍ ಎಂದು ಸಿನೆಮಾಗಳ ರಿವ್ಯೂ ಹೇಳುವುದಕ್ಕೂ ಮುಂಚೆಯೇ ಸೋಷಿಯಲ್ ಮಿಡಿಯಾದಲ್ಲಿ ಶತ್ರುಗಳನ್ನು ಪಡೆದುಕೊಂಡಿದ್ದಾರೆ. ಭಾರತ ದೇಶದ ದೊಡ್ಡ ದೊಡ್ಡ ಸ್ಟಾರ್‍ ಗಳ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ದೊಡ್ಡ ಮಟ್ಟದ ಹೆಸರು ಗಳಿಸಿಕೊಳ್ಳಲು ಮುಂದಾಗಿದ್ದಾರೆ. ಇದೀಗ ಪೂಜಾ ಹೆಗ್ಡೆ ಬಗ್ಗೆ ಸಹ ಟ್ವೀಟ್ ಒಂದನ್ನು ಮಾಡಿದ್ದು, ಅದಕ್ಕೆ ಪೂಜಾ ಲೀಗಲ್ ನೊಟೀಸ್ ಸಹ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಉಮೈರ್‍ ಸಂಧು ಸದಾ ನಟ-ನಟಿಯರ ಮೇಲೆ ಇಲ್ಲಸಲ್ಲದ ವಿಚಾರಗಳನ್ನು ಅವರ ವೈಯುಕ್ತಿಕ ವಿಚಾರಗಳ ಬಗ್ಗೆ ಇಲ್ಲದ್ದನ್ನು ಟ್ವಿಟರ್‍ ನಲ್ಲಿ ಪೋಸ್ಟ್ ಮಾಡುತ್ತಾ ವಿವಾದ ಸೃಷ್ಟಿಸುತ್ತಿರುತ್ತಾರೆ. ಕೆಲವು ದಿನಗಳ ಹಿಂದೆಯಷ್ಟೆ ಪೂಜಾ ಹೆಗ್ಡೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎಂದು ಉಮೈರ್‍ ಸಂಧು ಟ್ವಿಟ್ ಮಾಡಿದ್ದರು. ಪೂಜಾ ಹೆಗ್ಡೆ ಕೆಲವು ದಿನಗಳ ಕಾಲದಿಂದ ತೀವ್ರವಾದ ಡಿಪ್ರೆಷನ್ ಗೆ ಗುರಿಯಾಗಿದ್ದರು. ಈ ಕಾರಣದಿಂಲೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬಳಿಕ ಆಕೆಯ ಕುಟುಂಬಸ್ಥರು ಗಮನಿಸಿ ಆಕೆಯನ್ನು ಕಾಪಾಡಿದರು ಎಂದು ಉಮೈರ್‍ ಸಂಧು ತನ್ನ ಟ್ವೀಟರ್‍ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.  ಈ ಪೋಸ್ಟ್ ಕಂಡ ಪೂಜಾ ಅಭಿಮಾನಿಗಳು ಆತನ ವಿರುದ್ದ ಕಿಡಿಕಾರಿದ್ದರು. ನಿನಗೆ ಮಾಡೋಕೆ ಕೆಲಸ ಇಲ್ವಾ. ಸುಳ್ಳು ಪ್ರಚಾರ ಮಾಡಿ ಪ್ರಚಾರಿ ಗಿಟ್ಟಿಸಿಕೊಳ್ಳುವ ಕೀಳು ಮಟ್ಟಕ್ಕೆ ತಲುಪಿದ್ದೀರಾ ಎಂದು ಆತನ ವಿರುದ್ದ ಆಕ್ರೋಷ ಹೊರಹಾಕಿದರು.

ಇನ್ನೂ ಈ ಬಗ್ಗೆ ಪೂಜಾ ಹೆಗ್ಡೆ ಸಹ ಗಂಭೀರವಾಗಿ ತೆಗೆದುಕೊಂಡು ತನ್ನ ಟೀಂ ಮೂಲಕ ಆತನಿಗೆ ಲೀಗಲ್ ನೊಟೀಸ್ ಕಳುಹಿಸಿದ್ದಾರಂತೆ. ಉಮೈರ್‍ ಸಂಧುಗೆ ಇಂತಹ ಲೀಗಲ್ ನೊಟೀಸ್ ಗಳು ತುಂಬಾನೆ ಪಡೆದುಕೊಂಡಿದ್ದಾರೆ. ಆದರೂ ಸಹ ಅವರು ತಮ್ಮ ಚಾಳಿಯನ್ನು ಬಿಟ್ಟಿಲ್ಲ. ಕೆಲವು ದಿನಗಳ ಹಿಂದೆ ಅಕ್ಕಿನೇನಿ ಅಖಿಲ್ ಊರ್ವಶಿ ರೌಟೆಲಾ ಗೆ ಕಿರುಕುಳ ಕೊಟ್ಟರು ಎಂದು ಸೋಷಿಯಲ್ ಮಿಡಿಯಾದಲ್ಲಿ ಸಂಚಲನಾತ್ಮಕ ಟ್ವೀಟ್ ಮಾಡಿದ್ದರು. ಏಜೆಂಟ್ ಸಿನೆಮಾದಲ್ಲಿನ ಐಟಂ ಸಾಂಗ್ ಶೂಟಿಂಗ್ ವೇಳೆ ಊರ್ವಶಿಯನ್ನು ಅಳಸಿದ್ದಾರೆ, ಆಕೆಯೊಂದಿಗೆ ಮಿಸ್ ಬಿಹೇವ್ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಸಹ ವೈರಲ್ ಆಗಿತ್ತು.

ಈ ಬಗ್ಗೆ ಊರ್ವಶಿ ಸಹ ಆಕ್ರೋಷಗೊಂಡು ಆಕೆ ಲೀಗಲ್ ನೊಟೀಸ್ ಕಳುಹಿಸಿದ್ದರಂತೆ. ಇನ್ನೂ ಈ ಬಗ್ಗೆ ಊರ್ವಶಿ ತನ್ನ ಸೋಷಿಯಲ್ ಮಿಡಿಯಾದಲ್ಲಿ ಸಹ ಹೇಳಿಕೊಂಡಿದ್ದರು. ಆತನಿಗೆ ನನ್ನ ಲೀಗಲ್ ಟೀಂ ಮೂಲಕ ನೊಟೀಸ್ ಕಳುಹಿಸುತ್ತಿದ್ದೇನೆ. ನೀನು ಯಾರು ನನ್ನ ಬಗ್ಗೆ ಮಾತನಾಡಲು. ನೀನು ಮೆಚ್ಯುರಿಟಿ ಇಲ್ಲದ ಜರ್ನಲಿಸ್ಟ್ ಎಂದು ಆತನ ವಿರುದ್ದ ಕಿಡಿಕಾರಿದ್ದರು. ಇನ್ನಾದರೂ ಉಮೈರ್‍ ಸಂಧು ಅಂತಹ ವಿವಾದಾತ್ಮಕ ಹೇಳಿಕೆಗಳನ್ನು ಪೋಸ್ಟ್ ಮಾಡುವುದು ಬಿಡುತ್ತಾರಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.