ಆ ಕಾರಣದಿಂದಲೇ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ನಡುವೆ ಬ್ರೇಕಪ್ ಆಯ್ತಾ, ಹೊಸ ರೂಮರ್ ಸೋಷಿಯಲ್ ಮಿಡಿಯಾದಲ್ಲಿ ಚಕ್ಕರ್…!

ತೆಲುಗು ಸಿನಿರಂಗದಲ್ಲಿ ಅನೇಕ ವರ್ಷಗಳಿಂದ ಅನುಷ್ಕಾ ಹಾಗೂ ಪ್ರಭಾಸ್ ಮದುವೆ ಕುರಿತಂತೆ ಅನೇಕ ಚರ್ಚೆಗಳು ನಡೆಯುತ್ತಲೇ ಇದೆ. ಇದೀಗ ಮತ್ತೊಮ್ಮೆ ಅವರ ಮದುವೆ ವಿಚಾರ ಸದ್ದು ಮಾಡುತ್ತಿದೆ. ಅನೇಕ ಬಾರಿ ಈ ಜೋಡಿಯ ಮದುವೆಯ ವಿಚಾರ ಮುನ್ನೆಲೆಗೆ ಬಂದಿತ್ತು. ಇನ್ನೇನು ಮದುವೆಯಾಗಿಬಿಡುತ್ತಾರೆ ಎಂಬ ಸುದ್ದಿಗಳು ಕೇಳಿಬಂದಿತ್ತು. ಈ ಬಗ್ಗೆ ಅನೇಕ ಬಾರಿ ಈ ಜೋಡಿ ಈ ಸುದ್ದಿಗಳನ್ನು ತಳ್ಳಿಹಾಕಿದರು. ಇದೀಗ ಮತ್ತೊಂದು ರೂಮರ್‍ ಇಂಟರ್‍ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿಸಿದೆ.

ನಟಿ ಪ್ರಭಾಸ್ ಹಾಗೂ ಅನುಷ್ಕಾ ಸದ್ಯ ಮೂರು ಸಿನೆಮಾಗಳಲ್ಲಿ ನಟಿಸಿದ್ದಾರೆ. ಬಿಲ್ಲಾ ಸಿನೆಮಾದಲ್ಲಿ ಮೊದಲ ಬಾರಿಗೆ ಇಬ್ಬರೂ ನಟಿಸಿದ್ದರು. ಈ ಸಿನೆಮಾದ ಬಳಿಕ ಮಿರ್ಚಿ, ಬಾಹುಬಲಿ ಸಿನೆಮಾಗಳಲ್ಲಿ ನಟಿಸಿದ್ದರು. ಅದರಲ್ಲೂ ಮಿರ್ಚಿ ಸಿನೆಮಾದ ಬಳಿಕ ಬೆಸ್ಟ್ ಜೋಡಿ ಎಂಬ ಖ್ಯಾತಿಗೂ ಸಹ ಗುರಿಯಾದರು. ಬಾಹುಬಲಿ ಬಳಿಕವಂತೂ ಅವರಿಬ್ಬರ ರಿಲೇಷನ್ ಶಿಪ್ ಬಗ್ಗೆ ಮತಷ್ಟು ಸುದ್ದಿಗಳು ಹರಿದಾಡಿದವು. ಇಬ್ಬರೂ ಡೇಟಿಂಗ್ ನಲ್ಲಿದ್ದಾರೆ. ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬಂದವು. ಕೆಲವೊಂದು ಫಂಕ್ಷನ್ ಗಳಲ್ಲೂ ಸಹ ಇಬ್ಬರೂ ಕಾಣಿಸಿಕೊಂಡಿದ್ದರು. ಕೆಲವು ದಿನಗಳ ಹಿಂದೆ ಈ ಜೋಡಿಯ ಮದುವೆ ನಡೆಯಲಿದೆ ಎಂಬ ಸುದ್ದಿ ಸಹ ಕೇಳಿಬಂತು. ಆದರೆ ಈ ಸುದ್ದಿಯಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಅವರ ಕುಟುಂಬಸ್ಥರು ಸಹ ತಳ್ಳಿಹಾಕಿದರು. ನಾವಿಬ್ಬರೂ ಒಳ್ಳೆಯ ಸ್ನೇಹಿತರು ಬೇರೆ ಯಾವುದೇ ಸಂಬಂಧವಿಲ್ಲ ಎಂದು ಪ್ರಭಾಸ್ ಹಾಗೂ ಅನುಷ್ಕಾ ಸಹ ಹೇಳಿಕೊಂಡೆ ಬರುತ್ತಿದ್ದಾರೆ. ಆದರೂ ಸಹ ರೂಮರ್‍ ಗಳು ಮಾತ್ರ ಹರಿದಾಡುತ್ತಲೇ ಇದೆ.

ಇದೀಗ ಈ ಜೋಡಿಯ ಬಗ್ಗೆ ಮತ್ತೊಂದು ಸುದ್ದಿ ಇಂಟರ್‍ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿಸುತ್ತಿದೆ. ಅನುಷ್ಕಾ ನಡತೆ ನೋಡಿ ಪ್ರಭಾಸ್ ಹರ್ಟ್ ಆಗಿದ್ದಾರಂತೆ. ಆಕೆ ಸೀನಿಯರ್‍ ನಟನೊಂದಿಗೆ ತುಂಬಾ ಕ್ಲೋಜ್ ಆಗಿದ್ದಾರೆ. ಇಬ್ಬರ ನಡುವೆ ಅಫೈರ್‍ ಸಹ ನಡೆಯುತ್ತಿದೆ ಎಂಬ ಸುದ್ದಿಯಿಂದ ಪ್ರಭಾಸ್ ಅನುಷ್ಕಾ ರಿಂದ ಬೇರೆಯಾಗಿದ್ದಾರಂತೆ. ಈ ವಿಚಾರ ತಿಳಿದಾಗಿನಿಂದ ಅನುಷ್ಕಾ ರಿಂದ ಪ್ರಭಾಸ್ ದೂರವಾಗಿಯೇ ಇದ್ದಾರಂತೆ ಎಂಬ ರೂಮರ್‍ ಇದೀಗ ಜೋರಾಗಿ ಹರಿದಾಡುತ್ತಿದೆ. ಆದರೆ ಆ ಸೀನಿಯರ್‍ ನಟ ಯಾರೂ ಎಂಬುದೇ ಇಲ್ಲಿನ ದೊಡ್ಡ ಪ್ರಶ್ನೆಯಾಗಿದೆ. ನಟಿ ಅನುಷ್ಕಾ ಕೊನೆಯದಾಗಿ ಸೈಲೆಂಟ್ ಹಾಗೂ ಭಾಗಮತಿ ಸಿನೆಮಾದಲ್ಲಿ ಮಾತ್ರ ನಟಿಸಿದ್ದರು. ಆದರೆ ಈಗ ಹರಿದಾಡುತ್ತಿರುವ ರೂಮರ್‍ ಪ್ರಕಾರ ಆ ಸೀನಿಯರ್‍ ನಟ ಯಾರು ಎಂಬುದರ ಬಗ್ಗೆ ಸಹ ದೊಡ್ಡ ಮಟ್ಟದ ಚರ್ಚೆಗಳು ಶುರುವಾಗಿದೆ.

ಇನ್ನೂ ಈ ಸುದ್ದಿಯಲ್ಲಿ ಎಷ್ಟರ ಮಟ್ಟಿಗೆ ನಿಜ, ಎಷ್ಟರ ಮಟ್ಟಿಗೆ ಸುಳ್ಳು ಎಂಬುದು ಪಕ್ಕಕ್ಕಿಟ್ಟರೇ ಸುದ್ದಿ ಮಾತ್ರ ಬಿರುಗಾಳಿಯಂತೆ ಹರಿದಾಡುತ್ತಿದೆ. ಸದ್ಯ ಪ್ರಭಾಸ್ ಆದಿಪುರುಷ್, ಸಲಾರ್‍, ಪ್ರಾಜೆಕ್ಟ್-K ಹಾಗೂ ರಾಜಾ ಡಿಲಕ್ಸ್ ಎಂಬ ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಒಂದೇ ಸಮಯದಲ್ಲಿ ಮೂರು ಸಿನೆಮಾಗಳ ಶೂಟಿಂಗ್ ಗಳಲ್ಲಿ ಪ್ರಭಾಸ್ ಬ್ಯುಸಿಯಾಗಿದ್ದಾರೆ. ಸುಮಾರು ವರ್ಷಗಳ ಗ್ಯಾಪ್ ಬಳಿಕ ಅನುಷ್ಕಾ ಶೆಟ್ಟಿ ಯಂಗ್ ಹಿರೋ ನವೀನ್ ಪೊಲಿಶೆಟ್ಟಿ ಜೊತೆಗೆ ಮಿಸ್ ಶೆಟ್ಟಿ, ಮಿಸ್ಟರ್‍ ಪೊಲಿಶೆಟ್ಟಿ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಸದ್ಯ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿಯವರ ಬ್ರೇಕಪ್ ಬಗ್ಗೆ ಇಂಟರ್‍ ನೆಟ್ ನಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ.