ಚಾಮುಂಡೇಶ್ವರಿ ದರ್ಶನ ಪಡೆದ ಮೆಗಾ ಪವರ್ ಸ್ಟಾರ್ ರಾಮ್ ಚರಣ್, ವೈರಲ್ ಆದ ಪೊಟೋಸ್……!

Follow Us :

ಗ್ಲೋಬಲ್ ಸ್ಟಾರ್‍ ಮೆಗಾ ಪವರ್‍ ಸ್ಟಾರ್‍ ರಾಮ್ ಚರಣ್ RRR ಸಿನೆಮಾದ ಮೂಲಕ ಗ್ಲೋಬಲ್ ಲೆವೆಲ್ ನಲ್ಲಿ ಫೇಂ ಪಡೆದುಕೊಂಡು. ಸದ್ಯ ಅವರು ಸ್ಟಾರ್‍ ನಿರ್ದೇಶಕ ಶಂಕರ್‍ ನಿರ್ದೇಶನದಲ್ಲಿ ಸೆಟ್ಟೇರಿದ ಗೇಂ ಚೇಂಜರ್‍ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾ  ಶೂಟಿಂಗ್ ಸದ್ಯ ಕರ್ನಾಟಕದಲ್ಲಿ ನಡೆಯುತ್ತಿದೆ. ಮೈಸೂರಿನ ಪ್ರಸಿದ್ದ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದುಕೊಂಡಿರುವ ರಾಮ್ ಚರಣ್ ಪೊಟೋಗಳು ಇದೀಗ ವೈರಲ್ ಆಗುತ್ತಿವೆ.

ನಟ ರಾಮ್ ಚರಣ್ ಗೇಂ ಚೇಂಜರ್‍ ಸಿನೆಮಾ ಶೂಟಿಂಗ್ ನಿಮಿತ್ತ ಕರ್ನಾಟಕದಲ್ಲಿದ್ದಾರೆ. ಈ ಸಿನೆಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. RRR ಸಿನೆಮಾದ ಬಳಿಕ ರಾಮ್ ಚರಣ್ ನಟಿಸುತ್ತಿರುವ ಈ ಸಿನೆಮಾದ ಮೇಲೆ ಭಾರಿ ನಿರೀಕ್ಷೆ ಸಹ ಇದೆ. ಆದಷ್ಟೂ ಶೀಘ್ರವಾಗಿ ಈ ಸಿನೆಮಾ ಪೂರ್ಣಗೊಳಿಸಿ, ಬಳಿಕ ಬುಚ್ಚಿಬಾಬು ನಿರ್ದೇಶನದ ಸಿನೆಮಾದಲ್ಲಿ ನಟಿಸಲು ಪ್ಲಾನ್ ಮಾಡಿಕೊಂಡಿದ್ದಾರೆ. ಇನ್ನೂ ರಾಮ್ ಚರಣ್ ರವರಿಗೆ ದೈವ ಭಕ್ತಿ ಹೆಚ್ಚು ಎಂದೇ ಹೇಳಬಹುದಾಗಿದೆ. ಕಳೆದ ವರ್ಷ ಅಯ್ಯಪ್ಪನ ಮಾಲೆ ಧರಿಸಿ ದೇವಾಲಯಗಳನ್ನು ದರ್ಶನ ಮಾಡಿದ್ದರು. ಇದೀಗ ಮೈಸೂರಿನ ಶಕ್ತಿ ದೇವತೆ ಚಾಮುಂಡೇಶ್ವರಿ ದೇವಿಯನ್ನು ದರ್ಶನ ಮಾಡಿದ್ದಾರೆ. ದೇವಿಗೆ ವಿಶೇಷ ಪೂಜೆಗಳನ್ನು ನಿರ್ವಹಿಸಿದ್ದಾರೆ. ಇನ್ನೂ ಚರಣ್ ದೇವಾಯಲಕ್ಕೆ ಎಂಟ್ರಿ ಕೊಟ್ಟ ಹಿನ್ನೆಲೆಯಲ್ಲಿ ಕೊಂಚ ಕಾಲ ಕೋಲಾಹಲ ಏರ್ಪಟಿತ್ತು.

ಇನ್ನೂ ರಾಮ್ ಚರಣ್ ನಟಿಸುತ್ತಿರುವ ಗೇಂ ಚೇಂಜರ್‍ ಸಿನೆಮಾದ ಶೂಟಿಂಗ್ ಸದ್ಯ ಮೈಸೂರಿನಲ್ಲಿ ನಡೆಯುತ್ತಿದೆ. ಈ ಕಾರಣದಿಂದ ಅವರು ಮೈಸೂರಿನಲ್ಲಿದ್ದಾರೆ. ಈ ಹಾದಿಯಲ್ಲೇ ಸಿನೆಮಾ ತಂಡದೊಂದಿಗೆ ಆತ ಚಾಮುಂಡೇಶ್ವರಿಯ ದರ್ಶನ ಪಡೆದುಕೊಂಡಿದ್ದಾರೆ. ರಾಮ್ ಚರಣ್ ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದು, ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. RRR ಸಿನೆಮಾದ ಬಳಿಕ ರಾಮ್ ಚರಣ್ ನಟಿಸುತ್ತಿರುವ ಗೇಂ ಚೇಂಜರ್‍ ಸಿನೆಮಾದ ಮೇಲೆ ಈಗಾಗಲೇ ಭಾರಿ ಹೈಪ್ ಕ್ರಿಯೇಟ್ ಸೃಷ್ಟಿಯಾಗಿದೆ. ಈ ಸಿಎನಮಾಗಾಗಿ ಸೌತ್ ಸಿನಿಮಾ ಪ್ರೇಕ್ಷಕರು ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡು ಕಾಯುತ್ತಿದ್ದಾರೆ.