News

ತಿರುಮಲದಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ, ಕಾಲ್ಮಡಿಗೆಯಲ್ಲಿ ಹೋಗುವ ಭಕ್ತರಿಗೆ ಅಲರ್ಟ್….!

ಕೆಲವು ತಿಂಗಳುಗಳ ಹಿಂದೆಯಷ್ಟೆ ತಿರುಮಲದಲ್ಲಿ ಚಿರತೆ ದಾಳಿಗೆ ಬಾಲಕಿಯೊಬ್ಬರು ಮೃತಪಟ್ಟಿದ್ದರು. ಈ ಘಟನೆಯ ಬಳಿಕ ಟಿಟಿಡಿ ಕಾಲ್ನಡಿಗೆಯ ಮೂಲಕ ತಿಮ್ಮಪ್ಪನ ದರ್ಶನಕ್ಕೆ ಹೋಗುವಂತಹ ಭಕ್ತರಿಗೆ ಕೆಲವೊಂದು ನಿಯಮಗಳನ್ನು ಸಹ ಜಾರಿ ಮಾಡಿತ್ತು. ಜೊತೆಗೆ ಮೆಟ್ಟಿಲುಗಳ ಮಾರ್ಗದಲ್ಲಿ ಹೆಚ್ಚಿನ ಭದ್ರತೆಯನ್ನು ಸಹ ಒದಗಿಸಲಾಗಿತ್ತು. ಇದೀಗ ಮತ್ತೆ ಚಿರತೆ ಕಾಣಿಸಿಕೊಂಡಿದ್ದು, ಭಕ್ತರಲ್ಲಿ ಆತಂಕ ಮನೆಮಾಡಿದೆ.

ತಿರುಮಲದಲ್ಲಿ ನೆಲೆಸಿರುವಂತಹ ತಿಮ್ಮಪ್ಪನ ದರ್ಶನಕ್ಕೆ ಪ್ರತಿನಿತ್ಯ ಸಾವಿರಾರು ಮಂದಿ ಹೋಗುತ್ತಿರುತ್ತಾರೆ. ಅದರಲ್ಲಿ ಕಾಲ್ನಡಿಗೆ ಮೂಲಕವೂ ಸಹ ಅನೇಕ ಭಕ್ತರು ದರ್ಶನಕ್ಕಾಗಿ ಹೋಗುತ್ತಿರುತ್ತಾರೆ. ಕೆಲವು ತಿಂಗಳುಗಳ ಹಿಂದೆಯಷ್ಟೆ ತಿರುಮಲಕ್ಕೆ ಕಾಲ್ನಡಿಗೆ ಮೂಲಕ ಹೋಗುತ್ತಿದ್ದ ಬಾಲಕಿಯೊಬ್ಬರ ಮೇಲೆ ಚಿರತೆ ದಾಳಿ ನಡೆಸಿದ್ದು, ಬಾಲಕಿ ಮೃತಪಟ್ಟಿದ್ದಳು. ಇದೀಗ ಮತ್ತೆ ಚಿರತೆ ಕಾಣಿಸಿದೆ. ಪುಲಿವೆಂದುಲದ ಕೆಲ ಭಕ್ತರು ಚಿರತೆಯನ್ನು ಕಂಡು ಬೆಚ್ಚಿಬಿದ್ದಿದ್ದರು. ಕೂಡಲೇ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಬಳಿಕ ಟಿಟಿಡಿ ಸಹ ಕಾಲ್ನಡಿಗೆಯ ಮೂಲಕ ಬರುವಂತಹ ಭಕ್ತರಿಗೆ ಎಚ್ಚರಿಕೆ ಸಹ ನೀಡಿದೆ. ವಾಟರ್‍ ಹೌಸ್ ಬಳಿಯಿಂದ ಭಕ್ತರನ್ನು ಗುಂಪು ಗುಂಪಾಗಿ ಕಳುಹಿಸಲಾಗುತ್ತಿದೆ. ಜನಸಂದಣಿಯಿಂದ ಯಾರೂ ದೂರ ಹೋಗಬಾರದು ಎಂದು ಎಚ್ಚರಿಕೆಯ ಸಂದೇಶಗಳನ್ನು ಸಹ ನೀಡುತ್ತಿದ್ದಾರೆ.

ಇನ್ನೂ ಈಗಾಗಲೇ ಚಿರುತೆಗಳನ್ನು ಸೆರೆ ಹಿಡಿಯಲು ಟಿಟಿಡಿ ಆಪರೇಷನ್ ಲೇಪಾರ್ಡ್ ಸಹ ಆಯೋಜಿಸಿದೆ. ಕಳೆದ ಆಗಸ್ಟ್ ಹಾಗೂ ಸೆಪ್ಟೆಂಬರ್‍ ನಲ್ಲಿ 6 ಚಿರತೆಗಳನ್ನು ಸೆರೆಹಿಡಿದು ಮೃಗಾಲಯಕ್ಕೆ ಕಳುಹಿಸಲಾಗಿತ್ತು. ಬಳಿಕ  ಭಕ್ತರು ನಿಟ್ಟುಸಿರು ಬಿಟ್ಟಿದ್ದರು. ಇದೀಗ ಮತ್ತೆ ಚಿರತೆ ಕಾಣಿಸಿಕೊಳ್ಳುತ್ತಿದೆ. ಕಾಲ್ನಡಿಗೆಯಲ್ಲಿ ಸಾಗುವ ಭಕ್ತರು ಜಿಂಕೆಗಳಿಗೆ ಆಹಾರ ನೀಡುತ್ತಿರುತ್ತಾರೆ. ಜಿಂಕೆಗಳನ್ನು ಭೇಟೆಯಾಡಲು ಚಿರತೆಗಳು ಬರುತ್ತದೆ ಎಂದು ಹೇಳಲಾಗಿದೆ. ಇದೀಗ ಟಿಟಿಡಿಯಿಂದ ಪಾದಚಾರಿ ಮಾರ್ಗದಲ್ಲಿ ಬರುವಂತಹ ಭಕ್ತರಿಗೆ ಹೆಚ್ಚಿನ ಭದ್ರತೆ ನೀಡಲಾಗಿದೆ. ರಕ್ಷಣೆಗಾಗಿ ಕೋಲುಗಳನ್ನು ವಿತರಣೆ ಮಾಡುತ್ತಿದ್ದಾರೆ. ಜೊತೆಗೆ 12 ವರ್ಷದೊಳಗಿನ ಮಕ್ಕಳೊಂದಿಗೆ ಪಾದಾಚಾರಿ ಮಾರ್ಗದಲ್ಲಿ ಪೋಷಕರೊಂದಿಗೆ ಹೋಗಲು ಬೆಳಿಗ್ಗೆ 5 ರಿಂದ ಮದ್ಯಾಹ್ನ 2 ಗಂಟೆಯವರೆಗೆ ಮಾತ್ರ ಅನುಮತಿ ನೀಡಲಾಗುತ್ತಿದೆ.

Most Popular

To Top