ರೋಮ್ ಬೀದಿಯಲ್ಲಿ ಸಾರ್ವಜನಿಕವಾಗಿಯೇ ಲಿಪ್ ಲಾಕ್ ಮಾಡಿಕೊಂಡ ನಿಕ್ ಅಂಡ್ ಪ್ರಿಯಾಂಕಾ, ವೈರಲ್ ಆದ ವಿಡಿಯೋ….!

Follow Us :

ಅಂತರಾಷ್ಟ್ರೀಯ ಮಟ್ಟದಲ್ಲಿ ಫೇಂ ಸಂಪಾದಿಸಿಕೊಂಡ ಪ್ರಿಯಾಂಕಾ ಚೋಪ್ರಾ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ. ಸಿನೆಮಾಗಳ ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದು, ಆಗಾಗ ವೆಕೇಷನ್ ಗೆ ಸಹ ಹಾರುತ್ತಾ ಸದ್ದು ಮಾಡುತ್ತಿರುತ್ತಾರೆ. ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರಿ ಅಲ್ಲಿ ಬಹುಬೇಡಿಕೆಯುಳ್ಳ ನಟಿಯಾಗಿ ಫೇಂ ಪಡೆದುಕೊಂಡ ಪ್ರಿಯಾಂಕಾ ಚೋಪ್ರಾ ಹಾಗೂ ಆಕೆಯ ಪತಿ ನಿಕ್ ಜೋನಸ್ ರವರ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಗ್ಲೋಬಲ್ ಸ್ಟಾರ್‍ ಪ್ರಿಯಾಂಕಾ ಚೋಪ್ರಾ ತನಗಿಂತ ಚಿಕ್ಕವನಾದ ನಿಕ್ ಜೋನಸ್ ಎಂಬಾತನನ್ನು ಪ್ರೀತಿಸಿ ವಿವಾಹವಾದರು. ಮದುವೆಯಾದ ಬಳಿಕ ಇಬ್ಬರೂ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ. ಇನ್ನೂ ಸೆರಗೋಸಿ ಪದ್ದತಿಯ ಮೂಲಕ ಈ ಜೋಡಿ ಹೆಣ್ಣು ಮಗುವನ್ನು ಪಡೆದುಕೊಂಡರು. ಇದೀಗ ಆಕೆ ಪತಿಯೊಂದಿಗೆ ರೋಮ್ ನಗರಕ್ಕೆ ವೆಕೇಷನ್ ಗೆ ಹಾರಿದ್ದಾರೆ. ರೋಮ್ ಬೀದಿಗಳಲ್ಲಿ ಈ ಜೋಡಿ ತುಂಬಾ ಎಂಜಾಯ್ ಮಾಡಿದ್ದಾರೆ. ರೋಮ್ ಬೀದಿಗಳಲ್ಲಿ ಸುತ್ತಾಡುತ್ತಾ ರೊಮ್ಯಾಂಟಿಕ್ ವಿಡಿಯೋ ಒಂದನ್ನು ಮಾಡಿದ್ದಾರೆ. ಈ ವಿಡಿಯೋವನ್ನು ನಿಕ್ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ಆ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಪ್ರಿಯಾಂಕಾ ಹಾಗೂ ನಿಕ್ ಜೋಡಿ ರೋಮ್ ಬೀದಿಗಳಲ್ಲಿ ಸಂತೋಷದಿಂ ಸುತ್ತಾಡುತ್ತಿದ್ದಾರೆ. ಐಸ್ ಕ್ರೀಂ ತಿನ್ನುತ್ತಾ, ರಸ್ತೆಯಲ್ಲೇ ಪ್ರಿಯಾಂಕಾ ಚೋಪ್ರಾ ಗೆ ಲಿಪ್ ಕಿಸ್ ಕೊಟ್ಟಿದ್ದಾರೆ. ಇನ್ನೂ ಈ ರೊಮ್ಯಾಂಟಿಕ್ ವಿಡಿಯೋವನ್ನು ನಿಕ್ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಇನ್ನೂ ಈ ವಿಡಿಯೋಗೆ ಅಭಿಮಾನಿಗಳಿಂದ ವಿವಿಧ ರೀತಿಯ ಕಾಮೆಂಟ್ ಗಳೂ ಸಹ ಹರಿದು ಬರುತ್ತಿವೆ. ಈ ವಿಡಿಯೋ ಹಂಚಿಕೊಂಡ ಕೆಲವೇ ನಿಮಿಷಗಳಲ್ಲಿ ಲೈಕ್ಸ್ ಹಾಗೂ ಕಾಮೆಂಟ್ ಗಳ ಸುರಿಮಳೆಯಾಗುತ್ತಿದೆ. ಇನ್ನೂ ನಿಕ್ ಹಾಗೂ ಪ್ರಿಯಾಂಕಾ ಚೋಪ್ರಾ ರವರ ನಡುವೆ ಸುಮಾರು 10 ವರ್ಷ ವಯಸ್ಸಿನ ಅಂತರವಿದೆ. ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದಾರೆ. ಸದ್ಯ ಈ ಜೋಡಿ ಸಂತೋಷದಿಂದ ಜೀವನ ಸಾಗಿಸುತ್ತಿದೆ. ಇನ್ನೂ ಈ ಜೋಡಿ ಸೆರಗೋಸಿ ಪದ್ದತಿಯ ಮೂಲಕ ಹೆಣ್ಣು ಮಗುವನ್ನು ಪಡೆದುಕೊಂಡಿದ್ದು, ಆ ಮಗುವಿಗೆ ಮಾಲ್ತಿ ಮೇರಿ ಎಂದು ಹೆಸರನ್ನಿಟ್ಟಿದ್ದಾರೆ.

ಸದ್ಯ ಪ್ರಿಯಾಂಕಾ ಚೋಪ್ರಾ ಹಾಲಿವುಡ್ ನಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಕ್ರೇಜಿ ನಟಿಯಾಗಿ ಸಾಗುತ್ತಿದ್ದಾರೆ. ಇನ್ನೂ ಆಕೆ ಸಿಟಾಡೆಲ್ ಎಂಬ ವೆಬ್ ಸಿರೀಸ್ ನಲ್ಲಿ ನಟಿಸಿದ್ದು, ಈ ಸಿರೀಸ್ ಏ.28 ರಿಂದ ಅಮೇಜಾನ್ ಪ್ರೈಂ ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈ ಸೀರಿಸ್ ನ ಟ್ರೈಲರ್‍ ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದು, ಟ್ರೈಲರ್‍ ಬಳಿಕ ಸಿರೀಸ್ ಮೇಲೆ ಮತಷ್ಟು ನಿರೀಕ್ಷೆ ಹುಟ್ಟಿದೆ.