Film News

ಅಯೋಧ್ಯೆಗೆ ಕುಟುಂಬದೊಂದಿಗೆ ಭೇಟಿ ಕೊಟ್ಟ ಗ್ಲೋಬಲ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ, ಪತಿ ಹಾಗೂ ಮಗಳೊಂದಿಗೆ ವಿಶೇಷ ಪೂಜೆ…..!

ಬಾಲಿವುಡ್ ಸಿನೆಮಾಗಳ ಮೂಲಕ ಹಾಲಿವುಡ್ ನಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಂಡ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಸಿನೆಮಾಗಳಲ್ಲಿ ಜೋರು ತಗ್ಗಿಸಿ ಕುಟುಂಬದ ಜೊತೆಗೆ ಸಮಯ ಕಳೆಯುತ್ತಿದ್ದಾಳೆ. ಸದ್ಯ ಅಮೆರಿಕಾದಲ್ಲೇ ಸೆಟಲ್ ಆಗಿರುವ ಪ್ರಿಯಾಂಕಾ ಚೋಪ್ರಾ ಆಗಾಗ ಭಾರತಕ್ಕೂ ಭೇಟಿ ನೀಡುತ್ತಿರುತ್ತಾರೆ. ಇದೀಗ ಅಮೇರಿಕಾದಿಂದ ಪ್ರಿಯಾಂಕಾ ತನ್ನ ಕುಟುಂಬದೊಂದಿಗೆ ಉತ್ತರ ಪ್ರದೇಶದಲ್ಲಿರುವ ಅಯೋಧ್ಯೆಗೆ ಬಂದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಸಂಬಂಧ ಕೆಲವೊಂದು ಪೊಟೋಗಳು ಹಾಗೂ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಕಳೆದ ಜನವರಿ ತಿಂಗಳಲ್ಲಿ ಭಾರತದ ಉತ್ತರ ಪ್ರದೇಶದ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮ ಲಲ್ಲಾ ಪ್ರಾಣಪ್ರತಿಷ್ಟಾಪನೆ ನಡೆದಿದೆ. ಈ ಸಮಾರಂಭದಲ್ಲಿ ಬಾಲಿವುಡ್ ಹಾಗೂ ಸೌತ್ ಸಿನಿರಂಗದ ಅನೇಕ ಸೆಲೆಬ್ರೆಟಿಗಳು ಭಾಗಿಯಾಗಿದ್ದರು. ಅಮಿತಾಬ್ ಬಚ್ಚನ್, ರಜನಿಕಾಂತ್, ಮೆಗಾಸ್ಟಾರ್‍ ಚಿರಂಜೀವಿ, ರಣಬೀರ್‍ ಕಪೂರ್‍, ರಾಮ್ ಚರಣ್, ಆಲಿಯಾ ಭಟ್, ಕತ್ರಿನಾ ಕೈಫ್, ವಿಕ್ಕಿ ಕೌಶಲ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಆದರೆ ಜನವರಿ ಮಾಹೆಯಲ್ಲಿ ಪ್ರಿಯಾಂಕಾ ಭಾರತದಲ್ಲಿರಲಿಲ್ಲವಂತೆ. ಈ ಕಾರಣದಿಂದ ಇದೀಗ ಆಕೆ ತನ್ನ ಪತಿ ನಿಕ್ ಜೋನಸ್ ಹಾಗೂ ಪುತ್ರಿ ಮಾಲ್ತಿ ಮೇರಿ ಜೊತೆಗೆ ಅಯೋಧ್ಯೆಗೆ ಭೇಟಿ ನೀಡಿದ್ದಾರೆ. ಶ್ರೀರಾಮ ಲಲ್ಲಾನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಸಂಬಂಧ ಪೊಟೋಗಳು ಹಾಗೂ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಕಳೆದ ವರ್ಷ ಪ್ರಿಯಾಂಕಾ ಚೋಪ್ರಾ ತಮ್ಮ ಸಹೋಧರಿ ಪರಿಣಿತಿ ಚೋಪ್ರಾ ಎಂಗೇಜ್ ಮೆಂಟ್ ಗಾಗಿ ಭಾರತಕ್ಕೆ ಬಂದಿದ್ದರು.

ಸುಮಾರು ಎರಡು ದಶಕಗಳ ಕಾಲ ಪ್ರಿಯಾಂಕಾ ಚೋಪ್ರಾ ಸಿನಿರಂಗದಲ್ಲಿ ಬ್ಯುಸಿಯಾಗಿದ್ದಾರೆ. ಹಾಲಿವುಡ್ ನಲ್ಲೂ ಸಹ ತನ್ನದೇ ಆದ ಕ್ರೇಜ್ ಪಡೆದುಕೊಂಡು ಅಲ್ಲೂ ಸಹ ಬ್ಯುಸಿಯಾಗಿದ್ದಾರೆ. ಇನ್ನೂ ಆಕೆಯ ಸೌಂದರ್ಯದ ಬಗ್ಗೆ ಎಷ್ಟರ ಮಟ್ಟಿಗೆ ವರ್ಣಿಸಿದರೂ ಕಡಿಮೆ ಎಂತಲೇ ಹೇಳಬಹುದು. ಬಾಲಿವುಡ್ ಸಿನೆಮಾಗಳ ಮೂಲಕ ಭಾರಿ ಕ್ರೇಜ್ ಪಡೆದುಕೊಂಡ ಈಕೆ ಇದೀಗ ಹಾಲಿವುಡ್ ನಲ್ಲೂ ಸಹ ಅಲ್ಲಿನ ನಟಿಯರಿಗೆ ಪೈಪೋಟಿ ನೀಡುತ್ತಿದ್ದಾರೆ. ಆಕೆ ಹಾಲಿವುಡ್ ಮೂಲದ ನಿಕ್ ಜೋನಸ್ ಎಂಬಾತನೊಂದಿಗೆ ಡೇಟಿಂಗ್ ಶುರು ಮಾಡಿ ಮದುವೆಯಾದ ಬಳಿಕ ಆಕೆಯ ಕೆರಿಯರ್‍ ಸಹ ಬದಲಾಯಿತು. ಆತನೊಂದಿಗೆ ಡೇಟಿಂಗ್ ಶುರು ಮಾಡಿದ ಬಳಿಕ ಆಕೆಗೆ ಹಾಲಿವುಡ್ ನಲ್ಲಿ ಅವಕಾಶಗಳು ಬರಲಾರಂಭಿಸಿದೆ. ಇದೀಗ ಪ್ರಿಯಾಂಕಾ ಚೋಪ್ರಾ ಕೆರಿಯರ್‍ ತುಂಬಾ ಜೋರಾಗಿಯೇ ಸಾಗುತ್ತಿದೆ. ವೆಬ್ ಸಿರೀಸ್ ಗಳು, ಹಾಲಿವುಡ್ ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ.

Most Popular

To Top