News

ಚುನಾವಣಾ ನೀತಿ ಸಂಹಿತೆ ಹಿನ್ನೆಲೆ, ಮದುವೆ, ಜಾತ್ರೆ ಸಮಾರಂಭಗಳಿಗೆ ಅನುಮತಿ ಕಡ್ಡಾಯ…..!

ಸದ್ಯ ದೇಶದಾದ್ಯಂತ ಲೋಕಸಭಾ ಚುನಾವಣೆಯ ಆರ್ಭಟ ಜೋರಾಗಿ ನಡೆಯುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೆ ಚುನಾವಣೆಯ ನಿಮಿತ್ತ ಅಧಿಸೂಚನೆ ಸಹ ಹೊರಡಿಸಿದ್ದು, ಚುನಾವಣಾ ನೀತಿ ಸಂಹಿತೆ ಸಹ ಜಾರಿಯಲ್ಲಿದೆ. ಚುನಾವಣಾ ಅಕ್ರಮಗಳನ್ನು ತಡೆಯಲು ಪ್ರಮುಖ ಸ್ಥಳಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಸಹ ಹಾಕಲಾಗಿದೆ. ಇನ್ನೂ ನೀತಿ ಸಂಹಿತೆ ಕೇವಲ ರಾಜಕಾರಣಿಗಳು ಹಾಗೂ ಅಧಿಕಾರಿಗಳಿಗೆ ಮಾತ್ರವಲ್ಲದೇ ಜನಸಾಮಾನ್ಯರಿಗೂ ಸಹ ಅನ್ವಯವಾಗುತ್ತದೆ.

ಹೌದು ಚುನಾವಣಾ ನೀತಿ ಸಂಹಿತೆ ಕೇವಲ ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಮಾತ್ರವಲ್ಲ ಬದಲಿಗೆ ಜನಸಾಮಾನ್ಯರಿಗೂ ಸಹ ಅನ್ವಯವಾಗುತ್ತದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣದಿಂದ ತಮ್ಮ ವ್ಯಾಪ್ತಿಯಲ್ಲಿ ಸಭೆ-ಸಮಾರಂಭಗಳು, ಜಾತ್ರೆಗಳು, ಧಾರ್ಮಿಕ ಕಾರ್ಯಕ್ರಮಗಳು, ಮದುವೆ ಕಾರ್ಯಕ್ರಮಗಳು ನಡೆಸಬೇಕಾದರೇ ಸರ್ಕಾರದಿಂದ ಅನುಮತಿ ಪಡೆಯೋದು ಕಡ್ಡಾಯವಾಗಿದೆ. ಈ ಕುರಿತು ಮುಖ್ಯಮಂತ್ರಿ ಕಾರ್ಯಾಲಯ ಟ್ವೀಟರ್‍ ಮೂಲಕ ಮಾಹಿತಿ ತಿಳಿಸಿದೆ. ಮದುವೆ, ಜಾತ್ರೆ, ಸಮಾರಂಭ ನಡೆಸಲು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕಿದೆ. ಕಾರ್ಯಕ್ರಮಗಳಲ್ಲಿ ಚುನಾವಣಾ ಪ್ರಚಾರ, ಭಾವುಟಗಳ ಪ್ರದರ್ಶನ, ಮತಯಾಚನೆ ಕಾನೂನು ಬಾಹಿರವಾಗಿದೆ. ಜೊತೆಗೆ ಮತದಾರರಿಗೆ ಭರವಸೆ ಹಾಗೂ ಆಮಿಷ ಒಡ್ಡುವ ಕುರಿತು ದೂರು ಬಂದೇ ಅಂತಹವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ.

ಚುನಾವಣೆಯಲ್ಲಿ ಸ್ಫರ್ಧೆ ಮಾಡಲಿರುವ ಅಭ್ಯರ್ಥಿಗಳಿಗಾಗಿ ಸುವಿಧಾ ಆಪ್ ರೂಪಿಸಲಾಗಿದೆ. ಈ ಆಪ್ ಮೂಲಕ ಅಭ್ಯರ್ಥಿಗಳು ಸಭೆ, ಸಮಾರಂಭ ಹಾಗೂ ಮೆರವಣಿಗೆಗಳಿಗೆ ಅನುಮತಿ ಕೋರುಲು ಅರ್ಜಿಗಳನ್ನು ಸಲ್ಲಿಸಬಹುದು. ನಾಮಪತ್ರ ಹಾಗೂ ಅಫಿಡವಿಟ್ ಗಳನ್ನು ಸಹ ಆಪ್ ಮೂಲಕವೇ ಸಲ್ಲಿಸಲು ಅವಕಾಶವಿದೆ. ಚುನಾವಣಾ ಸಂಬಂಧಿ ದೂರು ನೀಡಲು ಸಿ-ವಿಜಿಲ್ ಆಪ್ ಸಹ ಇದ್ದು, ಈ ಆಪ್ ಯಾರು ಬೇಕಾದರೂ ದೂರು ನೀಡಬಹುದು. ದೂರು ನೀಡಿದ ತಕ್ಷಣವೇ ಚುನಾವಣಾಧಿಕಾರಿಗಳು ಕ್ರಮ ಜರುಗಿಸಲಿದ್ದಾರೆ.

Most Popular

To Top