News

ನಡು ರಸ್ತೆಯಲ್ಲೇ ಯುವತಿಯ ಕಿಡ್ನಾಪ್, ಹಾಡಹಗಲೇ ಬೈಕ್ ನಲ್ಲಿ ಕಿಡ್ನಾಪ್ ಮಾಡಿದ ದುಷ್ಕರ್ಮಿಗಳು, ವೈರಲ್ ಆದ ವಿಡಿಯೋ….!

ಪೆಟ್ರೋಲ್ ಬಂಕ್ ಬಳಿ ತನ್ನ ಅಣ್ಣನಿಗಾಗಿ ಕಾಯುತ್ತಿದ್ದ ಯುವತಿಯೊಬ್ಬಳನ್ನು ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಕಿಡ್ನಾಪ್ ಮಾಡಿ ಪರಾರಿಯಾಗಿದ್ದಾರೆ. ಇಬ್ಬರು ದುಷ್ಕರ್ಮಿಗಳು ಹಾಡಗಲೇ ಜನರು ನೋಡುತ್ತಿದ್ದಂತೆಯೇ ಯುವತಿಯನ್ನು ಕಿಡ್ನಾಪ್ ಮಾಡಿದ್ದಾರೆ. ಈ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‍ ನಲ್ಲಿ ನಡೆದಿದ್ದು ಈ ಘಟನೆಯ ದೃಶ್ಯಗಳು ಪೆಟ್ರೋಲ್ ಬಂಕ್ ನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಈ ಘಟನೆ ಕಳೆದ ಸೋಮವಾರ ನಡೆದಿದೆ ಎನ್ನಲಾಗಿದೆ. 19 ವರ್ಷದ ಯುವತಿ ಕೆಸ ಮುಗಿಸಿ ಬಸ್ ನಿಂದ ಇಳಿದು ಪೆಟ್ರೋಲ್ ಬಂಕ್ ಬಳಿ ತನ್ನ ಸಹೋದರನಿಗಾಗಿ ಕಾಯುತ್ತಿದ್ದಳು. ಈ ವೇಳೆ ಇಬ್ಬರು ಅಪರಿಚತರು ಅಲ್ಲಿಗೆ ಬಂದಿದ್ದಾರೆ. ಒಬ್ಬರು ಹೆಲ್ಮೇಟ್ ಧರಿಸಿ ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿದ್ದಾನೆ. ಮತ್ತೋರ್ವ ಬಂಕ್ ಬಳಿಯಿದ್ದ ಯುವತಿಯನ್ನು ಬಲವಂತವಾಗಿ ಎತ್ತಿಕೊಂಡು ಬೈಕ್ ಮೇಲೆ ಕೂರಿಸಿದ್ದಾನೆ. ಆಕೆಯನ್ನು ಬೈಕ್ ನಲ್ಲಿ ಕೂರಿಸಿಕೊಂಡ ಬಳಿ ಮುಖ್ಯರಸ್ತೆಯ ಕಡೆ ಹೋಗಿದ್ದಾನೆ. ರಸ್ತೆಗೆ ಹೋದ ಬಳಿ ಮತ್ತೋರ್ವ ವ್ಯಕ್ತಿಯೂ ಬೈಕ್ ನಲ್ಲಿ ಕುಳಿತು ಯುವತಿಯನ್ನು ಕಿಡ್ನಾಪ್ ಮಾಡಿಕೊಂಡು ಪರಾರಿಯಾಗಿದ್ದಾರೆ. ಈ ದೃಶ್ಯಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಇನ್ನೂ ಈ ಕೃತ್ಯಕ್ಕೆ ಹಳೇ ವೈಷಮ್ಯ ಕಾರಣ ಎಂದು ಹೇಳಲಾಗುತ್ತಿದೆ. ಎಲ್ಲರೂ ನೋಡುತ್ತಿರುವಾಗಲೇ ಈ ಘಟನೆ ನಡೆದಿರುವುದು ಎಲ್ಲರನ್ಣೂ ಶಾಕ್ ಆಗುವಂತೆ ಮಾಡಿದೆ. ಸಂತ್ರಸ್ತೆ ಯುವತಿ ಭಿಂಡ್ ಪ್ರದೇಶದ ನಿವಾಸಿ ಎನ್ನಲಾಗಿದೆ. ಈ ಹಿಂದೆ ಎರಡು ಗುಂಪುಗಳ ನಡುವೆ ನಡೆದ ಜಗಳದಿಂದಾಗಿ ಯುವತಿಯನ್ನು ಅಪಹರಿಸಿದ್ದಾರೆ ಎಂದು ಸ್ಥಳೀಯ ಪೊಲೀಸ್ ಮೂಲಗಳಿಂದ ತಿಳಿದುಬಂದಿದ್ದು, ಕುಟುಂಬಸ್ಥರು ಈ ಬಗ್ಗೆ ದೂರು ನೀಡಿದ್ದು, ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ. ಇನ್ನೂ ಆರೋಪಿಗಳಲ್ಲಿ ಓರ್ವ ಯುವತಿಯ ಊರಿನವನೇ ಎಂದು ತಿಳಿದುಬಂದಿದ್ದು, ಈ ಹಿಂದೆ ಸಹ ಅದೇ ಊರಿನ ಯುವತಿಯನ್ನು ಕಿಡ್ನಾಪ್ ಮಾಡಲು ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Most Popular

To Top