ಸ್ಟಾರ್ ನಟಿಯರನ್ನೂ ಮೀರಿಸುವಂತೆ ಕಾಣಿಸಿಕೊಂಡ ಬನ್ನಿ ವೈಫ್ ಸ್ನೇಹಾರೆಡ್ಡಿ, ಕ್ರೇಜಿ ಕಾಮೆಂಟ್ಸ್ ಮಾಡಿದ ನೆಟ್ಟಿಗರು…..!

ಸಿನಿರಂಗದ ಸ್ಟಾರ್‍ ಗಳ ಪತ್ನಿಯರೂ ಸಹ ಅವರಂತೆ ಭಾರಿ ಕ್ರೇಜ್ ಪಡೆದುಕೊಂಡಿರುತ್ತಾರೆ. ಈ ಹಾದಿಯಲ್ಲೇ ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಸಹ ತುಂಭಾನೆ ಫೇಂ ಪಡೆದುಕೊಂಡಿದ್ದಾರೆ. ಅಲ್ಲು ಅರ್ಜುನ್ ರವರನ್ನು ಐಕಾನ್ ಸ್ಟಾರ್‍ ಎಂದು ಕರೆದರೇ ಸ್ನೇಹಾ ರೆಡ್ಡಿಯವರನ್ನು ಫ್ಯಾಷನ್ ಐಕಾನ್ ಎಂದು ಕರೆಯುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವಂತಹ ಸ್ನೇಹಾರೆಡ್ಡಿ ಆಗಾಗ ಸ್ಟಾರ್‍ ನಟಿಯರನ್ನೂ ಮೀರಿಸುವಂತೆ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಭಾರಿ ಸೌಂಡ್ ಮಾಡುತ್ತಿವೆ.

ತೆಲುಗು ಸಿನಿರಂಗದಲ್ಲಿ ಲವ್ಲಿ ಕಪಲ್ಸ್ ಎಂದೇ ಕರೆಯಲಾಗುವ ಅಲ್ಲು ಅರ್ಜುನ್ ಹಾಗೂ ಸ್ನೇಹಾರೆಡ್ಡಿ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಹೈಪ್ ಕ್ರಿಯೇಟ್ ಮಾಡುತ್ತಿದ್ದಾರೆ. ಆಕೆ ಫಿಟ್ ನೆಸ್ ಗಾಗಿ ತುಂಬಾನೆ ಶ್ರದ್ದೆಯನ್ನು ವಹಿಸುತ್ತಾರೆ. ಆರೋಗ್ಯ, ಫಿಟ್ ನೆಸ್ ಗಾಗಿ ಆಕೆ ಪ್ರತಿನಿತ್ಯ ವ್ಯಾಯಾಮ, ಆಹಾರ, ಯೋಗ ಮಾಡುತ್ತಿರುತ್ತಾರೆ. ಆಕೆ ಸಹ ಯಾವುದೇ ಸ್ಟಾರ್‍ ನಟಿಯರಿಂತ ಕಡಿಮೆಯಿಲ್ಲ ಎಂದು ಹೇಳಲಾಗುತ್ತದೆ. ಆಕೆಗೆ ಮದುವೆಯಾಗಿ ಇಬ್ಬರು ಮಕ್ಕಳು ಎಂದರೇ ಯಾರೂ ಸಹ ನಂಬಲಾರರು ಎಂದೇ ಹೇಳಬಹುದು. ಇನ್ನೂ ಸ್ನೇಹಾರೆಡ್ಡಿ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಇನ್ನೂ ಅಲ್ಲು ಅರ್ಜುನ್ ಪತ್ನಿ ಸ್ನೇಹಾರೆಡ್ಡಿ ಅಲ್ಟ್ರಾ ಸ್ಟೈಲಿಷ್ ಆಗಿ ಲುಕ್ಸ್ ಕೊಟ್ಟಿದ್ದಾರೆ. ಟ್ರೆಂಡಿ ಡ್ರೆಸ್ ನಲ್ಲಿ ಆಕೆ ಸ್ಟಾರ್‍ ನಟಿಯರಿಗೆ ಸವಾಲ್ ಎಸೆಯುವಂತೆ ಹಾಟ್ ಲುಕ್ಸ್ ಕೊಟ್ಟಿದ್ದಾರೆ. ಇನ್ನೂ ಆಕೆ ಹಂಚಿಕೊಂಡ ಪೊಟೋಗಳು ಕಡಿಮೆ ಸಮಯದಲ್ಲೇ ಸೋಷಿಯಲ್ ಮಿಡಿಯಾ ತುಂಬಾ ಹರಿದಾಡುತ್ತಿವೆ. ಆಕೆಯ ಫಾಲೋವರ್ಸ್, ಅಭಿಮಾನಿಗಳು, ನೆಟ್ಟಿಗರು ಹಾಗೂ ಅಲ್ಲು ಫ್ಯಾನ್ಸ್ ಸಹ ಕ್ರೇಜಿ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕಳೆದ 2011 ರಲ್ಲಿ ಅಲ್ಲು ಅರ್ಜುನ್ ಹಾಗೂ ಸ್ನೇಹಾರೆಡ್ಡಿ ಮದುವೆ ನಡೆಯಿತು. ಇಬ್ಬರದ್ದೂ ಪ್ರೇಮ ವಿವಾಹವಾಗಿದೆ. ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ ಅಲ್ಲು ಅಯಾನ್ ಹಾಗೂ ಅಲ್ಲು ಅರ್ಹಾ. ಈಗಾಗಲೇ ಅಲ್ಲು ಅರ್ಹಾ ಶಾಕುಂಲಂ ಸಿನೆಮಾದ ಮೂಲಕ ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.