News

ಅಪ್ರಾಪ್ತೆಯ ಮೇಲೆ ಅತ್ಯಾಚಾರ, ಮಗುವಿಗೆ ಜನ್ಮ ನೀಡಿದ ಬಳಿಕ ಮತ್ತೆ ಸಾಮೂಹಿಕ ಅತ್ಯಾಚಾರ, ರಾಜಸ್ಥಾನದಲ್ಲಿ ಮನಕಲಕುವ ಘಟನೆ..!

ನಾಗರೀಕತೆ ಹೆಚ್ಚಾಗುತ್ತಿದ್ದಂತೆ ಸಮಾಜದಲ್ಲಿ ಮಾನವೀಯತೆ ಇಲ್ಲಂದತಹ ಅನೇಕ ಕೃತ್ಯಗಳು ನಡೆಯುತ್ತಲೇ ಇದೆ. ಅದರಲ್ಲೂ ಅಪ್ರಾಪ್ತ ಬಾಲಕೀಯರ ಮೇಲಿನ ಅತ್ಯಾಚಾರಗಳು, ಹಲ್ಲೆ ಗಳು ಹೆಚ್ಚಾಗುತ್ತಲೇ ಇದೆ. ಈ ಹಾದಿಯಲ್ಲೇ ಅಪ್ರಾಪ್ತ ಬಾಲಕಿಯೊಬ್ಬರ ಮೇಲೆ ಅತ್ಯಾಚಾರ ವೆಸಗಿದ ಕಾಮುಖರು ವಿಚಾರ ಹೊರಹಾಕಿದರೇ ಇಡೀ ಕುಟುಂಬವನ್ನು ಹತ್ಯೆ ಮಾಡುವುದಾಗಿ ಬೆದರಿಸಿದ್ದಾರೆ. ಬಳಿಕ ಆಕೆ ಗರ್ಭಿಣಿಯಾಗಿದ್ದು ಮಗುವಿಗೆ ಜನ್ಮ ನೀಡಿದ್ದಾಳೆ. ಮಗುವಿಗೆ ಜನ್ಮ ನೀಡಿದ ಮರುದಿನವೇ ಆಕೆಯ ಮೇಲೆ ಮತ್ತೆ ಸಾಮೂಹಿಕ ಅತ್ಯಚಾರವೆಸಗಲಾಗಿದೆ. ಈ ಮನಕಲುಕವ ಘಟನೆ ರಾಜಸ್ತಾನದಲ್ಲಿ ನಡೆದಿದೆ.

ರಾಜಸ್ಥಾನದಲ್ಲಿ ಅಪ್ರಾಪ್ತ ಬಾಲಕಿಯೊಬ್ಬರ ಮೇಲೆ ಸಾಮೂಹಿಕ ಅತ್ಯಚಾರ ನಡೆದಿದೆ. ಅತ್ಯಾಚಾರ ವೆಸಗಿದ ಕಾಮುಖರು ಈ ವಿಚಾರ ಹೊರಹಾಕಿದರೇ ತಮ್ಮ ಇಡೀ ಕುಟುಂಬ ಹತ್ಯೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಈ ಕಾರಣದಿಂದ ಆಕೆ ಈ ಬಗ್ಗೆ ಯಾರಿಗೂ ಹೇಳಿಲ್ಲ. ಇನ್ನೂ ಆ ಬಾಲಕಿ ಗರ್ಭಿಣಿಯಾಗಿದ್ದಾರೆ. ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡ ಕಾರಣ ಆಕೆಯನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಬಳಿಕ ಆಕೆ ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಮಗುವಿಗೆ ಜನ್ಮ ಕೊಟ್ಟ ಮರುದಿನವೇ ಆ ಬಾಲಕಿಯ ಮೇಲೆ ಕಾಮುಖರು ಮತ್ತೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.

ಸಂತ್ರಸ್ತೆ ಬಾಲಕಿ ಮಗುವಿಗೆ ಜನ್ಮ ನೀಡುವುದಕ್ಕೂ ಮುಂಚೆ ಹೊಟ್ಟೆ ನೋವು ಎಂಬ ಕಾರಣದಿಂದ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಆಗ ಬಾಲಕಿ ಗರ್ಭಿಣಿಯಾದ ವಿಚಾರ ವೈದ್ಯರಿಗೆ ತಿಳಿದಿದೆ. ಆಕೆ ಅಪ್ರಾಪ್ತೆಯಾದ ಕಾರಣದಿಂದ ವಿಚಾರ ಪೊಲೀಸರಿಗೆ ತಲುಪಿದೆ. ಆದರೆ ಬಾಲಕಿಯ ಪೋಷಕರು ದೂರು ನೀಡಲು ನಿರಾಕರಿಸಿದ್ದಾರೆ. ಇನ್ನೂ ಬಾಲಕಿ ಸಹ ಆರೋಪಿಗಳ ಹೆಸರು ಹೇಳಲು ನಿರಾಕರಿಸಿದ್ದಳು. ಪೊಲೀಸರು ಎಷ್ಟೇ ಮನವಿ ಮಾಡಿದರೂ ಸಮಾಜದಲ್ಲಿ ಅವಮಾನ ಆಗುತ್ತದೆ ಎಂಬ ದೃಷ್ಟಿಯಿಂದ ದೂರು ನೀಡಿರಲಿಲ್ಲ.

ಇನ್ನೂ ಬಾಲಕಿ ಮಗುವಿಗೆ ಜನ್ಮ ನೀಡಿದ ಬಳಿಕ ತಾಯಿ ದಾಖಲೆ, ಔಷಧಿಗಳಿಗಾಗಿ ಆಸ್ಪತ್ರೆಯ ಕಚೇರಿಗೆ ಹೋಗಿದ್ದಾರೆ. ಈ ವೇಳೆ ಆ ಅಪ್ರಾಪ್ತೆಯನ್ನು ನೋಡಲು ಆಪ್ತರಂತೆ ಬಂದ ಕಾಮುಖರು ಬಾಲಕಿಯ ಕೋಣೆ ಪ್ರವೇಶಿಸಿದ್ದಾರೆ. ಮತ್ತೆ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಈ ಘಟನೆಯಿಂದ ಆಕೆಯ ಕುಟುಂಬ ಮತ್ತಷ್ಟು ನೋವಿಗೆ ತಳ್ಳಿದ್ದು, ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಇನ್ನೂ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಮೂರು ಮಂದಿ ಆಸ್ಪತ್ರೆಯ ಪಾರ್ಕಿಂಗ್ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರೆನ್ನಲಾಗಿದೆ. ಸಂತ್ರಸ್ತೆ ವಾಸಿಸುವ ಸ್ಥಳದಲ್ಲೇ ಅವರು ಸಹ ವಾಸ ಮಾಡುತ್ತಿದ್ದಾರಂತೆ. ಈ ಕಾಮುಕರೇ ಆಕೆಯ ಮೇಲೆ ಅನೇಕ ಬಾರಿ ಅತ್ಯಾಚಾರ ಎಸಗಿದ್ದಾಗಿ ತನಿಖೆಯಲ್ಲಿ ಬಯಲಾಗಿದೆ. ಇನ್ನೂ ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

Most Popular

To Top