ಮೇಕಪ್ ಲೆಸ್ ಆಗಿ ಕಾಣಿಸಿಕೊಂಡ ಅನಸೂಯ, ಹ್ಯಾಂಗ್ ಓವರ್ ಇನ್ನೂ ಇಳಿದಿಲ್ವಾ ಎಂದ ನೆಟ್ಟಿಗರು….!

ತೆಲುಗು ಸಿನಿರಂಗದ ಸ್ಟಾರ್‍ ಬ್ಯೂಟಿ ಅನಸೂಯ ಭಾರದ್ವಾಜ್ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಆಕೆ ಹಂಚಿಕೊಳ್ಳುವ ಪೊಟೋಗಳು ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿರುತ್ತವೆ. ಸದಾ ಒಂದಲ್ಲ ಒಂದು ಪೋಸ್ಟ್ ಮೂಲಕ ಸದ್ದು ಮಾಡುತ್ತಲೇ ಇರುವಂತಹ ಇದೀಗ ಮೇಕಪ್ ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ. ಆಕೆಯನ್ನು ನೋಡಿದ ಅನೇಕರು ಇನ್ನೂ ಹ್ಯಾಂಗ್ ಓವರ್‍ ಇಳಿದಿಲ್ವಾ ಎಂದು ಕಾಮೆಂಟ್ಸ್ ಮಾಡಿದ್ದಾರೆ.

ತೆಲುಗು ಸಿನಿರಂಗದಲ್ಲಿ ಕಿರುತೆರೆಯ ಮೂಲಕ ಫೇಂ ಪಡೆದುಕೊಂಡ ನಟಿಯರ ಸಾಲಿಗೆ ಅನಸೂಯ ಭಾರದ್ವಾಜ್ ಸಹ ಸೇರುತ್ತಾರೆ. ಜಬರ್ದಸ್ತ್ ಶೋ ಮೂಲಕ ಫೇಂ ಪಡೆದುಕೊಂಡ ಅನಸೂಯ ಇದೀಗ ಕಿರುತೆರೆಯಿಂದ ದೂರವುಳಿದಿದ್ದಾರೆ. ಆದರೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಪುಲ್ ಆಕ್ಟೀವ್ ಆಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಪುಲ್ ಬ್ಯುಸಿಯಾಗಿದ್ದಾರೆ. ಇನ್ನೂ ಸಿನೆಮಾಗಳಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಸಹ ಅನಸೂಯ ಪ್ರತಿನಿತ್ಯ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಪ್ರತಿಯೊಂದು ವಿಚಾರವನ್ನು ಸೋಷಿಯಲ್ ಮಿಡಿಯಾ ಮೂಲಕ ಹಂಚಿಕೊಳ್ಳುತ್ತಲೇ ಇರುತ್ತಾರೆ. ತನಗೇ ಅನಿಸಿದ್ದನ್ನು ನೇರವಾಗಿ ಹೇಳುವ ವ್ಯಕ್ತಿತ್ವ ಹೊಂದಿದ್ದಾರೆ.  ಜೊತೆಗೆ ಆಕೆಯ ಬಗ್ಗೆ ಬರುವ ಟ್ರೋಲ್ಸ್ ಗಳಿಗೂ ಸಹ ಅದೇ ಮಾದರಿಯಲ್ಲಿ ಕೌಂಟರ್‍ ಕೊಡುತ್ತಿರುತ್ತಾರೆ. ಜೊತೆಗೆ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುತ್ತಿರುತ್ತಾರೆ.

ಇದೀಗ ಅನಸೂಯ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಮೇಕಪ್ ಲೆಸ್ ಆಗಿ ಕಾಫಿ ಕಪ್ ಹಿಡಿದುಕೊಂಡು ಪೋಸ್ ಕೊಟ್ಟಿದ್ದಾರೆ. ಈ ಪೊಟೋ ಇದೀಗ ವೈರಲ್ ಆಗುತ್ತಿದೆ. ಈ ಪೊಟೋದಲ್ಲಿ ಆಕೆ ಮೇಕಪ್ ಲೆಸ್ ಗಾಗಿ ತನ್ನ ಅಸಲೀ ಸೌಂದರ್ಯವನ್ನು ಶೋ ಮಾಡುತ್ತಾ, ಕೊಂಚ ಭಯದಿಂದ, ಕೊಂಚ ಬೇಸರವಾಗಿ ಕಾಣಿಸಿಕೊಂಡಿದ್ದಾರೆ. ಈ ಪೊಟೋ ನೋಡಿದರೇ ಆಕೆಯ ಮೂಡ್ ಸರಿಯಿಲ್ಲ ಎಂದು ಹೇಳಬಹುದಾಗಿದೆ. ಇನ್ನೂ ಈ ಪೊಟೋಗೆ ಅನೇಕರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಅನೇಕರು ನೆಗೆಟೀವ್ ಕಾಮೆಂಟ್ ಗಳ ಮೂಲಕ ಜೋರು ಏರಿಸಿದ್ದಾರೆ. ಕೆಲವರು ಅನಸೂಯ ಹ್ಯಾಂಗ್ ಓವರ್‍ ನಲ್ಲಿದ್ದೀರಾ, ಮತ್ತೆ ಕೆಲವರು ರಾತ್ರಿ ಕುಡಿದಿದ್ದು ಇನ್ನೂ ಇಳಿದಿಲ್ಲವೇ ಎಂದು ಕಾಮೆಂಟ್ಸ್ ಹರಿಬಿಡುತ್ತಿದ್ದಾರೆ.

ಮತ್ತೆ ಕೆಲವರು ಅನಸೂಯ ತಂಗಿಯಂತೆ ಇದ್ದೀಯಾ, ಏನೋ ಮತ್ತಿನಲ್ಲಿ ಇರುವಂತಿದೆ ಎಂದು ಹೇಳಿದರೇ ಆಕೆಯ ಅಭಿಮಾನಿಗಳು ಮಾತ್ರ ಮೆಚ್ಚುಗೆಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಇನ್ನೂ ಅನಸೂಯ ಸಿನೆಮಾಗಳಲ್ಲಿ ಒಳ್ಳೆಯ ಕ್ರೇಜ್ ಪಡೆದುಕೊಂಡ ಹಿನ್ನೆಲೆಯಲ್ಲಿ ಕಿರುತೆರೆಯಿಂದ ಸಂಪೂರ್ಣವಾಗಿ ದೂರವಾಗಿದ್ದಾರೆ. ಸದ್ಯ ಆಕೆ ಪುಷ್ಪಾ-2 ಸಿನೆಮಾದಲ್ಲಿ ನಟಿಸುತ್ತಿದ್ದು, ಈ ಸಿನೆಮಾದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎನ್ನಲಾಗುತ್ತಿದೆ.