ನನ್ನ ತಂದೆಯ ಹೆಸರು ಹೇಳಿಕೊಂಡು ಒಂದು ಅವಕಾಶವನ್ನು ಸಹ ಪಡೆದುಕೊಳ್ಳಲಿಲ್ಲ ಎಂದ ಲೇಡಿ ವಿಲನ್ ವರಲಕ್ಷ್ಮಿ…!

ಸಿನಿರಂಗದಲ್ಲಿ ಅನೇಕರು ಸ್ಟಾರ್‍ ಗಳ ಮಕ್ಕಳು ತಮ್ಮ ಪೋಷಕರ ಹೆಸರುಗಳನ್ನು ಹೇಳಿಕೊಂಡು ಸಿನಿರಂಗಕ್ಕೆ ಎಂಟ್ರಿ ಕೊಡುತ್ತಾರೆ ಎಂಬ ಮಾತುಗಳು ಸಿನಿರಂಗದಲ್ಲಿ ಕೇಳಿಬರುತ್ತಲೇ ಇರುತ್ತದೆ. ಈ ಬಗ್ಗೆ ಅನೇಕ ವಿಮರ್ಶೆಗಳೂ ಸಹ ಎದುರಾಗುತ್ತಿರುತ್ತವೆ ಇರುತ್ತದೆ. ಇದೀಗ…

ಸಿನಿರಂಗದಲ್ಲಿ ಅನೇಕರು ಸ್ಟಾರ್‍ ಗಳ ಮಕ್ಕಳು ತಮ್ಮ ಪೋಷಕರ ಹೆಸರುಗಳನ್ನು ಹೇಳಿಕೊಂಡು ಸಿನಿರಂಗಕ್ಕೆ ಎಂಟ್ರಿ ಕೊಡುತ್ತಾರೆ ಎಂಬ ಮಾತುಗಳು ಸಿನಿರಂಗದಲ್ಲಿ ಕೇಳಿಬರುತ್ತಲೇ ಇರುತ್ತದೆ. ಈ ಬಗ್ಗೆ ಅನೇಕ ವಿಮರ್ಶೆಗಳೂ ಸಹ ಎದುರಾಗುತ್ತಿರುತ್ತವೆ ಇರುತ್ತದೆ. ಇದೀಗ ನಟಿ ವರಲಕ್ಷ್ಮೀ ಶರತ್ ಕುಮಾರ್‍ ತಾನು ಸ್ವಂತ ಪ್ರತಿಭೆಯಿಂದ ಸಿನಿಮಾಗಳಲ್ಲಿ ಅವಕಾಶ ಪಡೆದುಕೊಂಡಿದ್ದಾಗಿ, ಅವಕಾಶಗಳಿಗಾಗಿ ತನ್ನ ತಂದೆಯ ಹೆಸರನ್ನು ಎಲ್ಲೂ ಬಳಸಿಕೊಂಡಿಲ್ಲ ಎಂದು ಆಕೆ ಹೇಳಿದ್ದಾರೆ.

ಸೌತ್ ಸಿನಿರಂಗದ ಸ್ಟಾರ್‍ ನಟ ಶರತ್ ಕುಮಾರ್‍ ರವರ ಪುತ್ರಿ ವರಲಕ್ಷ್ಮೀ ಶರತ್ ಕುಮಾರ್‍ ಬಣ್ಣದ ಲೋಕಕ್ಕೆ ಕಾಲಿಟ್ಟು ಅನೇಕ ವರ್ಷಗಳು ಕಳೆದಿದ್ದು, ಅನೇಕ ಸಿನೆಮಾಗಳಲ್ಲಿ ಆಕೆ ಲೇಡಿ ವಿಲನ್ ಆಗಿಯೇ ಕಾಣಿಸಿಕೊಂಡು ಫೇಂ ಸಂಪಾದಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಸಿನಿರಂಗದಲ್ಲಿ ಕ್ರೇಜ್ ಸಂಪಾದಿಸಿಕೊಳ್ಳುವುದು ಅಷ್ಟೊಂದು ಸುಲಭದ ಮಾತಲ್ಲ. ಒಂದು ವೇಳೆ ಸ್ಟಾರ್‍ ಕ್ರೇಜ್ ಸಂಪಾದಿಸಿಕೊಂಡರೂ ಅದನ್ನೂ ಕಾಪಾಡಿಕೊಳ್ಳುವುದು ಸಹ ಕಷ್ಟದ ಕೆಲಸ ಎನ್ನಬಹುದಾಗಿದೆ. ಅನೇಕರು ಸ್ಟಾರ್‍ ಗಳಾಗಿ ಕಡಿಮೆ ಸಮಯದಲ್ಲೇ ಸಿನಿರಂಗದಿಂದ ದೂರವಾದವರೂ ಸಹ ಇದ್ದಾರೆ. ಇನ್ನೂ ಶರತ್ ಕುಮಾರ್‍ ಪುತ್ರಿ ವರಲಕ್ಷ್ಮೀ ಈ ಬಗ್ಗೆ ಮಾತನಾಡಿದ್ದಾರೆ.  ತಾನೂ ಸಿನೆಮಾಗಳಲ್ಲಿ ತನ್ನ  ತಂದೆಯ ಹೆಸರನ್ನು ಹೇಳಿಕೊಂಡು ಬಂದಿಲ್ಲ ಎಂದಿದ್ದಾರೆ ಈ ಸ್ಟಾರ್‍ ಕಿಡ್.

ಇನ್ನೂ ವರಲಕ್ಷ್ಮೀ ಸಿನಿರಂಗಕ್ಕೆ ಎಂಟ್ರಿ ಕೊಟ್ಟು ಅನೇಕ ಸಿನೆಮಾಗಳಲ್ಲಿ ನಟಿಸುವ ಮೂಲಕ ಫೇಂ ಸಂಪಾದಿಸಿಕೊಂಡಿದ್ದಾರೆ. ಮೊದಲಿಗೆ ನಟಿಯಾಗಿ ಕಾಣಿಸಿಕೊಂಡ ಈಕೆ ಅನೇಕ ಸಿನೆಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಆಕೆಗೆ ನೆಗೇಟೀವ್ ಪಾತ್ರ ಮಾತ್ರ ತುಂಬಾನೆ ಫೇಂ ತಂದುಕೊಟ್ಟಿದೆ. ಕ್ರಾಕ್ ಸಿನೆಮಾದಲ್ಲಿ ಆಕೆ ಜಯಮ್ಮ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾದ ಬಳಿಕ ಆಕೆಯ ಕ್ರೇಜ್ ಮತಷ್ಟು ಹೆಚ್ಚಿತ್ತು. ಬಳಿಕ ಆಕೆ ಯಶೋಧ, ಬಾಲಕೃಷ್ಣ ಅಭಿನಯದ ವೀರಸಿಂಹಾರೆಡ್ಡಿ ಸಿನೆಮಾದಲ್ಲೂ ಸಹ ನೆಗೆಟೀವ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚಿಗೆ ಆಕೆ ನಾನು ನೆಗಟೀವ್ ಶೇಡ್ಸ್ ಇರುವ ಪಾತ್ರಗಳಲ್ಲೆ ನಟಿಸುತ್ತೇನೆ ಎಂದಿದ್ದಾರೆ. ಇನ್ನು ಮುಂದೆ ಗ್ಲಾಮರ್‍ ರೋಲ್  ನಲ್ಲಿ ನಟಿಸುವುದಿಲ್ಲ, ಗ್ಲಾಮರಸ್ ಪಾತ್ರಗಳು ನನಗೆ ಸ್ಯೂಟ್ ಆಗುವುದಿಲ್ಲ. ಗ್ಲಾಮರ್‍ ಪಾತ್ರಗಳನ್ನು ಮಾಡಲು ಅನೇಕ ನಟಿಯರಿದ್ದಾರೆ ಎಂದೂ ಸಹ ಹೇಳಿದ್ದರು.

ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಅಭಿಮಾನಿಗಳೊಂದಿಗೆ ಚಿಟ್ ಚಾಟ್ ನಡೆಸಿದ ಈಕೆ  ನನಗೆ ಮುಂದಿನಿಂದಲೂ ಸಿನೆಮಾಗಳಲ್ಲಿ ತುಂಬಾನೆ ಆಸಕ್ತಿಯಿತ್ತು. ಅದರಿಂದ ನಾನು ಸಿನೆಮಾಗಳಲ್ಲಿ ನಟಿಸುತ್ತೇನೆ ಎಂದು ನನ್ನ ತಂದೆಗೆ ಹೇಳಿದ್ದೆ. ಸಿನಿರಂಗದಲ್ಲಿ ಸಕ್ಸಸ್ ಆಗುವುದು ತುಂಬಾನೆ ಕಷ್ಟ ಎಂದು ತಂದೆ ಹೇಳಿದ್ದರು.  ನಾನೇ ಬಲವಂತದಿಂದ ಒಪ್ಪಿಸಿದೆ. ಬಳಿಕ ನಾನು ಎಂದಿಗೂ ಸಹ ನನ್ನ ತಂದೆಗೆ ಆ ಸಿನೆಮಾದಲ್ಲಿ ಅವಕಾಶ ಕೊಡಿಸಿ ಎಂದು ಕೇಳಿರಲಿಲ್ಲ. ಶರತ್ ಕುಮಾರ್‍ ಮಗಳಾಗಿ ನನಗೆ ಯಾವುದೇ ಅವಕಾಶಗಳು ಬರಲಿಲ್ಲ. ವರಲಕ್ಷ್ಮೀ ಯಾಗಿ ನನಗೆ ಅವಕಾಶಗಳು ಬಂದಿದೆ. ನಾನು ಎಲ್ಲೂ ಸಹ ನನ್ನ ತಂದೆಯ ಹೆಸರನ್ನು ಬಳಸಿಕೊಂಡಿಲ್ಲ ಎಂದು ವರಲಕ್ಷ್ಮೀ ತಿಳಿಸಿದ್ದಾರೆ.