Film News

ಸಾರ್ವಜನಿಕವಾಗಿ ಗರ್ಲ್ ಫ್ರೆಂಡ್ ಗೆ ಲಿಪ್ ಕಿಸ್ ಕೊಟ್ಟ ಹೃತಿಕ್, ವೈರಲ್ ಆದ ವಿಡಿಯೋ…!

ಬಾಲಿವುಡ್ ನಲ್ಲಿ ಖ್ಯಾತ ಸ್ಟಾರ್‍ ನಟ ಹೃತಿಕ್ ರೋಷನ್ ತಮ್ಮ ಹೊಸ ಪ್ರೇಯಸಿ ಸಬಾ ಆಜಾದ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಈ ಜೋಡಿ ಫ್ರಾನ್ಸ್ ನಲ್ಲಿ ಸಖತ್ ಎಂಜಾಯ್ ಮಾಡಿತ್ತು. ಸದ್ಯ ಈ ಜೋಡಿ ಶೀಘ್ರದಲ್ಲೇ ಮದುವೆಯಾಗಲಿದೆ ಎಂಬ ಸುದ್ದಿ ಸಹ ಹರಿದಾಡಿತ್ತು. ಹೃತಿಕ್ ರೋಷನ್ ತನ್ನ ಮೊದಲ ಪತ್ನಿಗೆ ವಿಚ್ಚೇದನ ನೀಡಿ ಅನೇಕ ವರ್ಷಗಳು ಕಳೆದಿದ್ದು, ಇದೀಗ ಗಾಯಕಿ ಸಬಾ ಜೊತೆಗೆ ಡೇಟಿಂಗ್ ನಲ್ಲಿದ್ದಾರೆ.  ಇದೀಗ ಈ ಜೋಡಿ ಸಾರ್ವಜನಿಕವಾಗಿಯೇ ಲಿಪ್ ಕಿಸ್ ಮಾಡಿಕೊಂಡಿದ್ದು, ಈ ಸಂಬಂಧ ವಿಡಿಯೋ ಒಂದು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಬಾಲಿವುಡ್ ನಲ್ಲಿ ಹೃತಿಕ್ ರೋಷನ್ ಹಾಗೂ ಸಬಾ ಆಜಾದ್ ಲವ್ ಸ್ಟೋರಿ ಹಾಟ್ ಟಾಪಿಕ್ ಆಗಿ ಹರಿದಾಡುತ್ತಲೇ ಇದೆ. ಇನ್ನೂ ಈಗಾಗಲೇ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಅವರ ಪೊಟೋಗಳೂ ಸಹ ಸಖತ್ ವೈರಲ್ ಆಗಿದೆ. ಇನ್ನೂ ಈ ಹಿಂದೆ ಹುಟ್ಟುಹಬ್ಬದ ಆಚರಣೆ ಪೊಟೋಗಳು, ಕ್ಲೋಜ್ ಆಗಿ ಓಡಾಡುವ ಪೊಟೋಗಳು ಸಖತ್ ವೈರಲ್ ಆಗಿವೆ. ಮೊದಲಿಗೆ ಈ ಜೋಡಿ ರೆಸ್ಟೋರೆಂಟ್ ಒಂದರಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿಂಗ್ ಸದಾ ಒಟ್ಟಿಗೆ ಓಡಾಡುವ ಮೂಲಕ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ. ಇನ್ನೂ ಶೀಘ್ರದಲ್ಲೇ ಈ ಜೋಡಿಯ ಮದುವೆ ಸಹ ನೆರವೇರಲಿದೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ. ಇದೀಗ ಈ ಜೋಡಿಯ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ.

ವಿಮಾನ ನಿಲ್ದಾಣದಲ್ಲಿ ಹೃತಿಕ್ ಹಾಗೂ ಸಭಾ ಕಾರಿನಲ್ಲಿ ಲಿಪ್ ಲಾಕ್ ಮಾಡಿಕೊಂಡ ವಿಡಿಯೋ ಒಂದು ವೈರಲ್ ಆಗಿದೆ. ಹೃತಿಕ್ ರನ್ನು ಬೀಳ್ಕೊಡಲು ಕಾರಿನಲ್ಲಿ ಸಭಾ ಸಹ ಬಂದಿದ್ದರು. ಈ ವೇಳೆ ಹೃತಿಕ್ ಗೆ ಕಿಸ್ ಮಾಡಿ ಕಾರಿನಿಂದ ಇಳಿದಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಇನ್ನೂ ಈ ವಿಡಿಯೋಗೆ ಸೋಷಿಯಲ್ ಮಿಡಿಯಾದಲ್ಲಿ ವಿವಿಧ ಕಾಮೆಂಟ್ ಗಳು ಹರಿದಾಡುತ್ತಿದೆ. ಅನೇಕರು ಬೇಗ ಮದುವೆಯಾಗಿ ಎಂದು ಸಹ ಕಾಮೆಂಟ್ ಮೂಲಕ ತಿಳಿಸುತ್ತಿದ್ದಾರೆ. ಇನ್ನೂ ಇಬ್ಬರೂ ಹೊಸ ಮನೆಯೊಂದನ್ನು ಖರೀದಿ ಮಾಡಿದ್ದು, ಈಶೀಘ್ರದಲ್ಲೇ ಈ ಪ್ಲಾಟ್ ಗೆ ಈ ಜೋಡಿ ಶಿಫ್ಟ್ ಆಗಲಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ. ಮೂರು ಅಂತಸ್ಥಿನ ಈ ಪ್ಲಾಟ್ ಬರೊಬ್ಬರಿ 100 ಕೋಟಿ ಬೆಲೆಬಾಳುತ್ತದೆ ಎಂದು ಹೇಳಲಾಗಿದೆ.

Most Popular

To Top