Film News

ಅಂತಹ ಪಾತ್ರಗಳಲ್ಲಿ ನಟಿಸಬೇಕೆಂಬ ಮನದಾಳದ ಮಾತನ್ನು ಹೊರಹಾಕಿದ ಸೀನಿಯರ್ ನಟಿ ಪ್ರಿಯಾಮಣಿ…..!

ಬಣ್ಣದ ಲೋಕದಲ್ಲಿ ಕೆಲ ನಟಿಯರು ಸಿನೆಮಾಗಳಲ್ಲಿ ಜೋರು ಸದ್ದು ಮಾಡಿ, ವಯಸ್ಸಾದ ಬಳಿಕ ಸಿನಿರಂಗದಿಂದ ದೂರವುಳಿಯುತ್ತಾರೆ. ಆದರೆ ಕೆಲವು ನಟಿಯರು ಮಾತ್ರ ವಯಸ್ಸಾದರೂ ಸಹ ಅನೇಕ ಸಿನೆಮಾಗಳ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡುತ್ತಾರೆ. ಈ ಸಾಲಿಗೆ ನಟಿ ಪ್ರಿಯಮಣಿ ಸಹ ಸೇರುತ್ತಾರೆ. ಆಕೆಗೆ ನಲವತ್ತರ ವಯಸ್ಸಾದರೂ ಸಹ ಯಂಗ್ ನಟಿಯಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಸೆಕೆಂಡ್ ಇನ್ನಿಂಗ್ಸ್ ನಲ್ಲೂ ಸಹ ಆಕೆ ಒಳ್ಳೆಯ ಸಿನೆಮಾಗಳ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಇದೀಗ ಆಕೆ ಅಂತಹ ಪಾತ್ರದಲ್ಲಿ ನಟಿಸಬೇಕೆಂಬ ಮನದಾಳದ ಮಾತನ್ನು ಹೊರಹಾಕಿದ್ದಾರೆ. ಅಷ್ಟಕ್ಕೂ ಪ್ರಿಯಾಮಣಿ ಯಾವ ಪಾತ್ರದಲ್ಲಿ ನಟಿಸಲು ಬಯಸುತ್ತಿದ್ದಾರೆ ಎಂಬ ವಿಚಾರಕ್ಕೆ ಬಂದರೇ,

ಸೌತ್ ಸಿನಿರಂಗದಲ್ಲಿ ಅನೇಕ ಸ್ಟಾರ್‍ ಗಳ ಜೊತೆಗೆ ಬಣ್ಣ ಹಚ್ಚಿ ಬಹುಬೇಡಿಕೆ ಪಡೆದುಕೊಂಡ ನಟಿಯರಲ್ಲಿ ಪ್ರಿಯಾಮಣಿ ಸಹ ಒಬ್ಬರಾಗಿದ್ದಾರೆ. ನಾಗಾರ್ಜುನ್, ಎನ್.ಟಿ.ಆರ್‍, ಜಗಪತಿ ಬಾಬು, ನಿತಿನ್ ಮೊದಲಾದ ಹಿರೋಗಳ ಜೊತೆಗೆ ನಟಿಸಿ ಫೇಂ ಪಡೆದುಕೊಂಡರು. ತೆಲುಗಿನಲ್ಲಿ ಆಕೆ ನಟಿಸಿದ್ದು ಕೆಲವೇ ಸಿನೆಮಾಗಳಲ್ಲಾದರೂ ಸಹ ಒಳ್ಳೆಯ ಕ್ರೇಜ್ ಪಡೆದುಕೊಂಡರು. ಸದ್ಯ ಆಕೆ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದು, ಕ್ರೇಜಿ ಪ್ರಾಜೆಕ್ಟ್ ಗಳಲ್ಲಿ ನಟಿಸುತ್ತಾ ಸಕ್ಸಸ್ ಪುಲ್ ಆಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಜೊತೆಗೆ ಆಕೆ ಲೇಡಿ ಓರಿಯೆಂಟೆಡ್ ಸಿನೆಮಾಗಳಲ್ಲೂ ಸಹ ನಟಿಸುತ್ತಿದ್ದಾರೆ. ಸದ್ಯ ಆಕೆ ಹಿಂದಿಯಲ್ಲಿ ಆರ್ಟಿಕಲ್ 360 ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈ ಸಿನೆಮಾದ ಪ್ರಮೋಷನ್ ಸಹ ಭರದಿಂದ ಸಾಗುತ್ತಿದ್ದು, ಪ್ರಮೋಷನ್ ನಿಮಿತ್ತ ಆಕೆ ಭಾಗಿಯಾಗಿದ್ದ ಸಂದರ್ಶನದಲ್ಲಿ  ಕೆಲವೊಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.

ಸಂದರ್ಶನದಲ್ಲಿ ಭಾಗಿಯಾಗಿದ್ದ ಪ್ರಿಯಾಮಣಿ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದಾರೆ. ಈ ವೇಳೆ ಆಕೆ ತನ್ನ ಮನದಾಳದ ಮಾತುಗಳನ್ನು ಹೊರಹಾಕಿದ್ದಾರೆ. ತನ್ನ ಡ್ರೀಮ್ ಪಾತ್ರದ ಬಗ್ಗೆ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ತನಗೆ ಇಷ್ಟವಾದ ಪಾತ್ರಗಳಲ್ಲಿ ನಟಿಸುವಂತಹ ಪಾತ್ರಕ್ಕಾಗಿ ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ತನಗೆ ಕಾಮಿಡಿ, ಎಂಟರ್‍ ಟ್ರೈನ್ ಮೆಂಟ್ ಹಾಗೂ ವಿಲನ್ ಪಾತ್ರದಲ್ಲಿ ನಟಿಸಬೇಕೆಂಬ ಬಯಕೆಯಂತೆ. ಆ ಪಾತ್ರಗಳಲ್ಲಿ ನಟಿಸೋಕೆ ಕಾಯುತ್ತಿದ್ದಾರಂತೆ. ಈಗಾಗಲೇ ನಟಿ ಪ್ರಿಯಾಮಣಿ ವಿರಾಟಪರ್ವಂ ಸಿನೆಮಾದಲ್ಲಿ ನಕ್ಸಲೈಟ್ ಆಗಿ ನಟಿಸಿ ಕೆಲವೊಂದು ಆಕ್ಷನ್ ದೃಶ್ಯಗಳಲ್ಲೂ ಸಹ ಕಾಣಿಸಿಕೊಂಡಿದ್ದರು. ಜವಾನ್ ಸಿನೆಮಾದಲ್ಲೂ ಸಹ ಪ್ರಿಯಾಮಣಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

ಇನ್ನೂ ಪ್ರಿಯಾಮಣಿ ಸೋಷಿಯಲ್ ಮಿಡಿಯಾದಲ್ಲಿ ಸಹ ಪುಲ್ ಬ್ಯುಸಿಯಾಗಿರುತ್ತಾರೆ. ಯಂಗ್ ಬ್ಯೂಟಿಯರನ್ನೂ ನಾಚಿಸುವಂತಹ ಲುಕ್ಸ್ ಕೊಡುತ್ತಾ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿರುತ್ತಾರೆ. ಸದ್ಯ ಆಕೆ ಭಾಮಾ ಕಲಾಪಂ 2, ಕೊಟೇಷನ್ ಗ್ಯಾಂಗ್, ಖೈಮಾರ, ಮೈದಾನ್ ಮೊದಲಾದ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Most Popular

To Top