News

ತಂದೆಯಿಂದಲೇ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ, ಎರಡೂವರೆ ಲಕ್ಷಕ್ಕೆ ಮಾರಾಟ ಮಾಡಿದ ಪಾಪಿ ತಂದೆ……!

ದೇಶದಲ್ಲಿ ಕಠಿಣ ಕಾನೂನು ಜಾರಿಯಿದ್ದರೂ ಸಹ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಮಾತ್ರ ಕಡಿಮೆಯಾಗುತ್ತಿಲ್ಲ. ಅಪ್ರಾಪ್ತ ಮಗಳ ಮೇಲೆ ಸ್ವಂತ ತಂದೆಯೇ ಎರಡು ವರ್ಷಗಳ ಕಾಲ ಅತ್ಯಾಚಾರ ನಡೆಸಿದ್ದು ಸಾಲದು ಎಂಬಂತೆ ಮದುವೆಯ ಹೆಸರಿನಲ್ಲಿ 2.5 ಲಕ್ಷಕ್ಕೆ ಮಾರಾಟ ಮಾಡಿದ ನೀಚ ಪ್ರಕರಣವೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಅಜಂಗಢ ಜಿಲ್ಲೆಯ ತರ್ವಾನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ನೀಚ ಕೃತ್ಯ ನಡೆದಿದೆ ಎನ್ನಲಾಗಿದೆ. ಸ್ವಂತ ತಂದೆಯೇ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಅತ್ಯಾಚಾರವೆಸಗಿದ್ದಾನೆ. ಸುಮಾರು 2 ವರ್ಷಗಳ ಕಾಲ ಅತ್ಯಾಚಾರ ವೆಸಗಿದ್ದಾನೆ. ಬಳಿಕ 2.5 ಲಕ್ಷಕ್ಕೆ ಮದುವೆಯ ಹೆಸರಿನಲ್ಲಿ ಮಾರಾಟ ಮಾಡಿದ್ದಾನೆ. ಬಳಿಕ ಆಕೆಯನ್ನು ಮದುವೆಯಾದ ಪತಿ ಸಹ ವೇಶ್ಯಾವಾಟಿಕೆಗೆ ತಳ್ಳಲು ಒತ್ತಾಯ ಮಾಡಿದ್ದಾನೆ. ಬಳಿಕ ಬಾಲಕಿ ಗರ್ಭಿಣಿಯಾದಾಗ ಪತಿ ಆಕೆಯನ್ನು ಬಿಟ್ಟು ಓಡಿ ಹೋಗಿದ್ದಾನೆ. ತಂದೆ ಸಹ ಆಕೆಯನ್ನು ಮನೆಗೆ ಸೇರಿಸಿಕೊಳ್ಳಲು ನಿರಾಕರಿಸಿದ್ದಾನೆ ಎನ್ನಲಾಗಿದೆ. ಈ ಕಾರಣದಿಂದ  ಬಾಲಕಿ ನ್ಯಾಯಕ್ಕಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೊರೆ ಹೋಗಿದ್ದಾಳೆ ಎಂದು ತಿಳಿದುಬಂದಿದೆ.

ಈ ಕುರಿತು ಅಪ್ರಾಪ್ತ ಬಾಲಕಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರೆ. ತನ್ನ ತಂದೆ ನನ್ನನ್ನು ಬಲವಂತವಾಗಿ ಇಟ್ಟುಕೊಂಡಿದ್ದ. 10ನೇ ತರಗತಿಯಲ್ಲಿ ಓದುತ್ತಿದ್ದಾಗ ಆತ ನನಗೆ ಕೆಲವೊಂದು ಔಷಧಿಯನ್ನು ನೀಡಲು ಪ್ರಾರಂಭಿಸಿದ್ದ. ಇದೇ ಸಮಯದಲ್ಲಿ ನನ್ನ ಮೇಲೆ ಅತ್ಯಾಚಾರ ಮಾಡಲು ಆರಂಭಿಸಿದ್ದ. ಸುಮಾರು ಎರಡು ವರ್ಷಗಳ ಕಾಲ ನನಗೆ ದೈಹಿಕ ಹಿಂಸೆ ನೀಡಿದ್ದ. ಬಳಿಕ ಕಳೆದ 2022 ರಲ್ಲಿ ಗಾಜಿಪುರ ಜಿಲ್ಲೆಯ ನಿವಾಸಿಯೊಬ್ಬರೊಂದಿಗೆ ವಿವಾಹ ಮಾಡಿಸಿದ. ನಂತರ ನನ್ನ ಪತಿ ಸಹ ವೇಶ್ಯಾವಾಟಿಕೆಗೆ ದೂಡಲು ಒತ್ತಾಯ ಮಾಡಿದ. ನಾನು ಗರ್ಭಿಣಿಯಾದಾಗ ಗರ್ಭನಿರೋಧಕ ಮಾತ್ರೆಗಳನ್ನು ಕೊಟ್ಟ ಆದರೂ ಸಹ ಗರ್ಭಪಾತವಾಗಿರಲಿಲ್ಲ. ಇದಾದ ಬಳಿಕ ನನ್ನ ತಂದೆಗೆ ಕರೆ ಮಾಡಿ ಮದುವೆ ಸಮಯದಲ್ಲಿ ನೀಡಿದ 2.5 ಲಕ್ಷ ವಾಪಸ್ಸು ನೀಡಲು ಕೇಳಿದ್ದ. ನನ್ನ ತಂದೆ ಹಣ ನೀಡಲು ಒಪ್ಪದಿದ್ದಾಗ, ನನ್ನನ್ನು ರಾಯ್ ಪುರ್‍ ಮಾರುಕಟ್ಟೆಯಲ್ಲಿ ಬಿಟ್ಟು ಹೋಗಿದ್ದಾನೆ. ಹಾಗೋ ಹೀಗೋ ಅಪ್ಪನ ಮನೆಗೆ ಹೋದೆ ಆಗ ತಂದೆ ಸಹ ಮನೆಗೆ ಕರೆದುಕೊಳ್ಳಲು ನಿರಾಕಸಿದ್ದಾನೆ.

ಇನ್ನೂ ಈ ಬಗ್ಗೆ ಸಂತ್ರಸ್ತೆ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಗೆ ಪತ್ರ ಬರೆದು ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ. ಈ ಪ್ರಕರಣವನ್ನು ಅವರು ಮಹಿಳಾ ಪೊಲೀಸ್ ಠಾನೆಯ ಉಸ್ತುವಾರಿಗೆ ಒಪ್ಪಿಸಿದ್ದು, ಪ್ರಕರಣ ದಾಖಲಿಸಿ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

Most Popular

To Top