ವಿಚಿತ್ರ ಬಟ್ಟೆ ಧರಿಸಿ ಸುದ್ದಿಯಾಗುತ್ತಿದ್ದ ಉರ್ಫಿ ಜಾವೇದ್ ರನ್ನು ಅರೆಸ್ಟ್ ಮಾಡಿದ ಪೊಲೀಸರು, ವೈರಲ್ ಆದ ವಿಡಿಯೋ…..!

ವಿಚಿತ್ರ ಬಟ್ಟೆಗಳನ್ನು ಧರಿಸಿ ಸದಾ ಒಂದಲ್ಲ ಒಂದು ಕಾರಣದಿಂದ ವಿವಾದಕ್ಕೆ ಗುರಿಯಾಗುವಂತಹ ಕಿರುತೆರೆ ನಟಿ ಉರ್ಫಿ ಜಾವೇದ್ ಇದೀಗ ಮತ್ತೊಂದು ಕಾರಣದಿಂದ ಸುದ್ದಿಯಾಗಿದ್ದಾರೆ. ಬಿಗ್ ಬಾಸ್ ಒಟಿಟಿ ಹಿಂದಿ ಸೀಸನ್-1 ರಲ್ಲೂ ಸಹ ಆಕೆ…

ವಿಚಿತ್ರ ಬಟ್ಟೆಗಳನ್ನು ಧರಿಸಿ ಸದಾ ಒಂದಲ್ಲ ಒಂದು ಕಾರಣದಿಂದ ವಿವಾದಕ್ಕೆ ಗುರಿಯಾಗುವಂತಹ ಕಿರುತೆರೆ ನಟಿ ಉರ್ಫಿ ಜಾವೇದ್ ಇದೀಗ ಮತ್ತೊಂದು ಕಾರಣದಿಂದ ಸುದ್ದಿಯಾಗಿದ್ದಾರೆ. ಬಿಗ್ ಬಾಸ್ ಒಟಿಟಿ ಹಿಂದಿ ಸೀಸನ್-1 ರಲ್ಲೂ ಸಹ ಆಕೆ ಅಭ್ಯರ್ಥಿಯಾಗಿ ಮತಷ್ಟು ಫೇಂ ಪಡೆದುಕೊಂಡರು. ವಿಚಿತ್ರ ಬಟ್ಟೆಗಳನ್ನು ಧರಿಸಿ ಸುದ್ದಿಯಾಗುತ್ತಿದ್ದ ಈಕೆಯನ್ನು ಇದೀಗ ಪೊಲೀಸರು ಆಕೆಯನ್ನು ಅರೆಸ್ಟ್ ಮಾಡಿದ್ದು, ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಸಿನಿ ಪ್ರಪಂಚದಲ್ಲಿ ಹಾಲಿವುಡ್ ತಾರೆಯರೂ ಸಹ ಧರಿಸಿದಂತಹ ಬಟ್ಟೆಗಳನ್ನು ಧರಿಸುವ ಏಕೈಕ ನಟಿ ಎಂದರೇ ಅದನ್ನು ಉರ್ಫಿ ಜಾವೇದ್ ಎನ್ನಬಹುದು. ಸದಾ ವಿಚಿತ್ರವಾದ ಅವತಾರಗಳಲ್ಲಿ ಆಕೆ ಕಾಣಿಸಿಕೊಳ್ಳುತ್ತಾ ಸದಾ ಸುದ್ದಿಯಲ್ಲೇ ಇರುತ್ತಾರೆ. ಪ್ರತಿನಿತ್ಯ ಒಂದಲ್ಲ ಒಂದು ರೀತಿಯ ಬಟ್ಟೆಗಳನ್ನು ಧರಿಸಿ ಎಲ್ಲರ ಕಣ್ಣಿಗೆ ಬೀಳುತ್ತಾರೆ. ಅದರಲ್ಲೂ ಆಕೆ ಬೋಲ್ಡ್ ಆಗಿರುವ ಬಟ್ಟೆಗಳನ್ನು ಧರಿಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಕೆಲವು ದಿನಗಳ ಹಿಂದೆಯಷ್ಟೆ ಆಕೆ ಧರಿಸಿದ್ದ ಬಟ್ಟೆಯ ಕಾರಣದಿಂದ ತನಗೆ ರೇಪ್, ಕೊಲೆ ಮಾಡುವ ಬೆದರಿಕೆಗಳು ಬಂದಿದೆ ಎಂದು ಸೋಷಿಯಲ್ ಮಿಡಿಯಾದಲ್ಲಿ ಆಕೆ ಹೇಳಿಕೊಂಡಿದ್ದರು.

ಇನ್ನೂ ಉರ್ಫಿ ಧರಿಸುವ ಬಟ್ಟೆಗಳ ಕಾರಣದಿಂದ ಅನೇಕ ಟ್ರೋಲ್ ಗಳು ಎದುರಾದರೂ ಸಹ ಆಕೆ ಮಾತ್ರ ತನ್ನ ವರಸೆಯನ್ನು ಬದಲಿಸುತ್ತಿಲ್ಲ. ಸದಾ ವಿಚಿತ್ರ ಬಟ್ಟೆಯನ್ನು ಧರಿಸುತ್ತಲೇ ಇರುತ್ತಾರೆ. ಕೆಲವು ದಿನಗಳ ಹಿಂದೆ ಬಂದ್ರಾ ಪೊಲೀಸ್ ಠಾಣೆಯಲ್ಲಿ ಆಕೆ ಧರಿಸುವ ಬಟ್ಟೆಗಳ ಕಾರಣದಿಂದ ಕೇಸ್ ದಾಖಲಾಗಿತ್ತು. ಆಗ ಆಕೆ ಪೊಲೀಸ್ ಠಾಣೆಗೆ ಹೋಗಿದ್ದರು. ಇದೀಗ ಮತ್ತೆ ಮುಂಬೈ ಪೊಲೀಸರು ಆಕೆಯನ್ನು ಅರೆಸ್ಟ್ ಮಾಡಿದ್ದಾರೆ ಎನ್ನಲಾಗುತ್ತಿದೆ. ನ.3 ರಂದು ಬೆಳಿಗ್ಗೆ ಉರ್ಫಿ ಜಾವೇದ್ ಕಾಫಿ ಕುಡಿಯಲು ಹೊರಗೆ ಬಂದಿದ್ದರು. ರೆಡ್ ಕಲರ್‍ ಬ್ಯಾಕ್ ಲೆಸ್ ಟಾಪ್, ಡೆನಿಮ್ ಜೀನ್ಸ್ ಧರಿಸಿದ್ದರು. ಈ ವೇಳೆ ಅಲ್ಲಿಗೆ ಎಂಟ್ರಿ ಕೊಟ್ಟ ಪೊಲೀಸರು ಆಕೆಯನ್ನು ಅರೆಸ್ಟ್ ಮಾಡಿದ್ದಾರೆ.

ಈ ವೇಳೆ ಮಹಿಳಾ ಪೊಲೀಸರು ಆಕೆಯನ್ನು ಪೊಲೀಸ್ ಸ್ಟೇಷನ್ ಗೆ ಬರಬೇಕೆಂದು ಆದೇಶ ಮಾಡುತ್ತಾರೆ. ಆದರೆ ಉರ್ಫಿ ಕಾರಣ ಏನು ಎಂದು ಪ್ರಶ್ನೆ ಮಾಡುತ್ತಾರೆ. ಕೊನೆಗೆ ಪೊಲೀಸರೊಂದಿಗೆ ಉರ್ಫಿ ಹೋಗಲು ಒಪ್ಪುತ್ತಾರೆ. ಇನ್ನೂ ಉರ್ಫಿಯನ್ನು ಪೊಲೀಸರು ಬಂಧಿಸಿದ್ದಾದರೂ ಏಕೆ ಎಂಬ ಅನುಮಾನಗಳು ಹುಟ್ಟಿಕೊಂಡಿದೆ. ಮತ್ತೆ ಕೆಲವರು ಇದೊಂದು ಫ್ರಾಂಕ್ ಆಗಿರಬಹುದು ಎಂದು ಅಭಿಪ್ರಾಯಪಡುತ್ತಿದ್ದಾರೆ.