Film News

ಯಂಗ್ ಬ್ಯೂಟಿಯರನ್ನೂ ನಾಚಿಸುವಂತಹ ಹಾಟ್ ಲುಕ್ಸ್ ಕೊಟ್ಟ ಪ್ರಿಯಾಮಣಿ, ವಯಸ್ಸು ಹೆಚ್ಚಾಗುತ್ತಿದ್ದಂತೆ ಗ್ಲಾಮರ್ ಸಹ ಏರುತ್ತಿದೆ ಎಂದ ಫ್ಯಾನ್ಸ್……!

ಬಣ್ಣದ ಲೋಕದಲ್ಲಿ ಅನೇಕ ನಟಿಯರು ಸಿನೆಮಾಗಳಲ್ಲಿ ಜೋರು ಸದ್ದು ಮಾಡಿ, ವಯಸ್ಸಾದ ಬಳಿಕ ಸಿನಿರಂಗದಿಂದ ದೂರವುಳಿಯುತ್ತಾರೆ. ಆದರೆ ಕೆಲವು ನಟಿಯರು ಮಾತ್ರ ವಯಸ್ಸಾದರೂ ಸಹ ಅನೇಕ ಸಿನೆಮಾಗಳ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡುತ್ತಾರೆ. ಈ ಸಾಲಿಗೆ ನಟಿ ಪ್ರಿಯಮಣಿ ಸಹ ಸೇರುತ್ತಾರೆ. ಆಕೆಗೆ ನಲವತ್ತರ ವಯಸ್ಸಾದರೂ ಸಹ ಯಂಗ್ ನಟಿಯಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಪೊಟೋಗಳನ್ನು ನೋಡಿದ ಫ್ಯಾನ್ಸ್ ಆಕೆಯ ವಯಸ್ಸು ಹೆಚ್ಚಾಗುತ್ತಿದ್ದರೂ ಗ್ಲಾಮರ್‍ ಮತಷ್ಟು ಏರುತ್ತಿದೆ ಎಂದು ಕ್ರೇಜಿ ಕಾಮೆಂಟ್ಸ್ ಹರಿಬಿಡುತ್ತಿದ್ದಾರೆ.

ಬೆಂಗಳೂರು ಮೂಲದ ನಟಿ ಪ್ರಿಯಮಣಿ ಕಳೆದ 2003 ರಲ್ಲೇ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಎವರೇ ಅತಗಾಡು ಎಂಬ ಸಿನೆಮಾದ ಮೂಲಕ ನಟಿಯಾಗಿ ಎಂಟ್ರಿ ಕೊಟ್ಟರು. ಈ ಸಿನೆಮಾ ಅಷ್ಟೊಂದು ಸಕ್ಸಸ್ ಕಾಣಲಿಲ್ಲ. ಬಳಿಕ ಪೆಳ್ಳೈನ ಕೊತ್ತಲೋ ಎಂಬ ತೆಲುಗು ಸಿನೆಮಾದ ಮೂಲಕ ಕ್ರೇಜ್ ಪಡೆದುಕೊಂಡರು. ಈ ಸಿನೆಮಾಗಾಗಿ ಆಕೆ ರಾಷ್ಟ್ರೀಯ ಉತ್ತಮ ನಟಿ ಅವಾರ್ಡ್ ಸಹ ಪಡೆದುಕೊಂಡರು. ಈ ಸಿನೆಮಾದ ಬಳಿಕ ಜೂನಿಯರ್‍ ಎನ್.ಟಿ.ಆರ್‍ ರವರ ಯಮದೊಂಗ ಸಿನೆಮಾದಲ್ಲಿ ಸಹ ಪ್ರಿಯಾಮಣಿ ನಟಿಸಿದ್ದರು. ಈ ಸಿನೆಮಾ ಸಹ ಆಕೆಗೆ ಒಳ್ಳೆಯ ಸಕ್ಸಸ್ ತಂದುಕೊಟ್ಟಿತ್ತು. ಆದರೆ ಸ್ಟಾರ್‍ ನಟರ ಜೊತೆಗೆ ನಟಿಸುವ ಅವಕಾಶ ಆಕೆಗೆ ಒಲಿಯಲಿಲ್ಲ. ಆದರೂ ಸಹ ಕೆಲವೊಂದು ಹಿಟ್ ಸಿನೆಮಾಗಳನ್ನು ಸಹ ತೆಕ್ಕೆಗೆ ಹಾಕಿಕೊಂಡರು.

ಇನ್ನೂ ನಟಿ ಪ್ರಿಯಮಣಿ ವಯಸ್ಸಾದರೂ ಸಹ ದಿನೇ ದಿನೇ ಯಂಗ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.. ಇತ್ತೀಚಿಗೆ ಆಕೆ ಯಂಗ್ ನಟಿಯರನ್ನೂ ನಾಚಿಸುವಂತೆ ಪೋಸ್ ಕೊಟ್ಟಿದ್ದಾರೆ. ಮೈಂಡ್ ಬ್ಲಾಕ್ ಆಗುವಂತಹ ಔಟ್ ಫಿಟ್ ನಲ್ಲಿ ಪೊಟೋಶೂಟ್ ಮೂಲಕ ಸಂಚಲನ ಸೃಷ್ಟಿ ಮಾಡುತ್ತಿದ್ದಾರೆ. ನಲವತ್ತರ ವಯಸ್ಸಿನಲ್ಲೂ ಸಹ ಪ್ರಿಯಮಣಿ ತುಂಬಾ ಯಂಗ್ ಆಗಿ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಆಕೆ ಹಂಚಿಕೊಳ್ಳುವ ಪೊಟೋಗಳು ಯಂಗ್ ನಟಿಯರನ್ನೂ ಸಹ ನಾಚಿಸುವಂತಿದೆ ಎಂದು ಹೇಳಬಹುದಾಗಿದೆ. ಈ ಹಾದಿಯಲ್ಲೇ ಆಕೆ ಸ್ಲೀವ್ ಲೆಸ್ ಟ್ರೆಂಡಿ ವೇರ್‍ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ. ಆಕೆಯ ಪೊಟೋಗಳನ್ನು ನೋಡಿದರೇ ಯಂಗ್ ನಟಿಯರನ್ನೂ ಮೀರಿಸುವಂತಹ ದೇಹದ ಮೈಮಾಟ ಹೊಂದಿದ್ದಾರೆ ಎನ್ನಬಹುದಾಗಿದೆ. ಆಕೆಯ ಈ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಸಂಚಲನ ಸೃಷ್ಟಿಸಿದೆ ಎನ್ನಲಾಗುತ್ತಿದೆ.

ಇನ್ನೂ ಪ್ರಿಯಾಮಣಿ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ವೈರಲ್ ಆಗುತ್ತಿದ್ದು, ವಿವಿಧ ರೀತಿಯ ಕಾಮೆಂಟ್ ಗಳು ಸಹ ಹರಿದು ಬರುತ್ತಿವೆ. ಸದ್ಯ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿರುವ ಪ್ರಿಯಾಮಣಿ ಕೊನೆಯದಾಗಿ ಜವಾನ್ ಸಿನೆಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದರು. ಮತಷ್ಟು ಸಿನೆಮಾಗಳಲ್ಲಿ ಆಕೆ ನಟಿಸುತ್ತಿದ್ದಾರೆ ಎನ್ನಲಾಗಿದೆ.

Most Popular

To Top