News

ಪಾಕ್ ಪರ ಘೋಷಣೆ ಪ್ರಕರಣ FSL ರಿಪೋರ್ಟ್ ನಲ್ಲಿದ್ದ ಸ್ಪೋಟಕ ಮಾಹಿತಿ ಬಹಿರಂಗ?

ಕೆಲವು ದಿನಗಳ ಹಿಂದೆಯಷ್ಟೆ ಸೈಯದ್ ನಾಸೀರ್‍ ಅಹ್ಮದ್ ರಾಜ್ಯಸಭಾ ಸದಸ್ಯನಾಗಿ ಆಯ್ಕೆಯಾದ ವೇಳೆಯಲ್ಲಿ ವಿಧಾನಸೌಧದಲ್ಲಿ ಪಾಕ್ ಪರ ಕೆಲವರು ಘೋಷಣೆ ಕೂಗಲಾಗಿತ್ತು. ಈ ಪ್ರಕರಣ ರಾಜ್ಯದಲ್ಲಿ ಭಾರಿ ಸದ್ದು ಮಾಡಿತ್ತು. ಇದೀಗ ಈ ಪ್ರಕರಣದ FSL ವರದಿ ಬಂದಿದ್ದು, ಈ ವರದಿಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ ಎನ್ನಲಾಗಿದೆ.

ವಿಧಾನಸೌಧದಲ್ಲಿ ಪಾಕಿಸ್ತಾನ್ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ FSL ರಿಪೋರ್ಟ್ ಬಂದಿದೆ ಎನ್ನಲಾಗಿದೆ. ಈ ವರದಿಯಲ್ಲಿ ವಿಡಿಯೋ ತಿರುಚಿದ ವಿಡಿಯೋ ಅಲ್ಲ ಎಂದು ಹೇಳಲಾಗಿದೆ. ವಿಡಿಯೋದಲ್ಲಿ ನಾಸೀರ್‍ ಸಾಬ್ ಜಿಂದಾಬಾದ್ ಹಾಗೂ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿರುವ ಮಾಃಇತಿ ಲಭ್ಯವಾಗಿದ್ದು, ಪರಿಶೀಲನೆಯ ವೇಳೆ ಆಡಿಯೋ ಹಾಗೂ ವಿಡಿಯೋ ಸಹ ಪರಿಶೀಲನೆ ನಡೆಸಿದ್ದು, ಇದರಲ್ಲಿ ಎಡಿಟ್ ಮಾಡಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಇದೀಗ FSL ವರದಿ ಬರುತ್ತಿದ್ದಂತೆ ವರದಿಯ ಅನ್ವಯ ಪೊಲೀಸರು ತನಿಖೆ ಸಹ ಚುರುಕುಗೊಳಿಸಿದ್ದಾರೆ. ಪೊಲೀಸರ ತನಿಖೆಯ ವೇಳೆ ಕೆಲ ಅನುಮಾನಿತ ವ್ಯಕ್ತಿಗಳ ಧ್ವನಿ ಸಹ ರವಾನಿಸಲಾಗಿತ್ತು. ಅನುಮಾನಿತರ ಪೈಕಿ ಒರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಸದ್ಯ FSL ವರದಿಯ ಧ್ವನಿ ಮ್ಯಾಚ್ ಮಾಡುವಂತಹ ಪ್ರಕ್ರಿಯೆ ನಡೆಯುತ್ತಿದೆ. ಒಂದು ವೇಳೆ ವಾಯ್ಸ್ ಹೊಂದಾಣಿಕೆಯಾದರೇ ಅಧಿಕೃತವಾಗಿ ಆರೋಪಿಯನ್ನು ಬಂಧನ ಮಾಡಲು ಪೊಲೀಸರು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.

Most Popular

To Top