ನನ್ನ ನಾಲ್ಕನೇ ಪತ್ನಿ ನೀನೆ ಜಗನ್ ಎಂದ ಪವನ್ ಕಲ್ಯಾಣ್, ಆಂಧ್ರ ಸಿಎಂ ಜಗನ್ ಗೆ ವಾರ್ನಿಂಗ್ ಕೊಟ್ಟ ಜನಸೇನಾನಿ…..!

Follow Us :

ಆಂಧ್ರಪ್ರದೇಶದ ವಿಧಾನಸಭಾ ಚುವಾವಣೆ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದ್ದು, ದಿನೇ ದಿನೇ ರಾಜಕೀಯ ರಂಗೇರುತ್ತಿದೆ. ಇದೇ ಸಮಯದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವಣ ಟಾಕ್ ವಾರ್‍ ಸಹ ಜೋರಾಗಿದೆ. ಅದರಲ್ಲೂ ಪವನ್ ಕಲ್ಯಾಣ್ ರವರ ವೈಯುಕ್ತಿಕ ವಿಚಾರಗಳ ಆಡಳಿತ ಪಕ್ಷದ ಮುಖಂಡರು ಬಗ್ಗೆ ಹೆಚ್ಚಾಗಿ ಮಾತನಾಡುತ್ತಿರುತ್ತಾರೆ. ಇದೀಗ ಸಿಎಂ ಜಗನ್ ಮೋಹನ್ ರೆಡ್ಡಿಯವರ ವಿರುದ್ದ ಪವನ್ ಕಲ್ಯಾಣ್ ಗುಡುಗಿದ್ದು, ಜಗನ್ ನೀನು ನನ್ನ ನಾಲ್ಕನೇ ಹೆಂಡತಿ ಎಂದು ಫೈರ್‍ ಆಗಿದ್ದಾರೆ.

ಸದ್ಯ ಆಂಧ್ರದ ಮುಂದಿನ ವಿಧಾನಸಭಾ ಚುವಾವಣೆಯಲ್ಲಿ ಟಿಡಿಪಿ ಹಾಗೂ ಜನಸೇನಾ ಮೈತ್ರಿ ಮಾಡಿಕೊಂಡಿದ್ದು, ಇದೀಗ ಸಮಾವೇಶದ ನಿಮಿತ್ತ ತೆಲುಗು ಜನ ವಿಜಯಕೇತನ ಸಭೆಯಲ್ಲಿ ಪವನ್ ಕಲ್ಯಾಣ್ ಮಾತನಾಡುತ್ತಾ, ಜಗನ್ ಮೋಹನ್ ರೆಡ್ಡಿ ವಿರುದ್ದ ಕಿಡಿಕಾರಿದ್ದಾರೆ. ಇಲ್ಲಿಯವರೆಗೂ ನನ್ನ ಶಾಂತಿ, ಒಳ್ಳೆತನದ ಮುಖವನ್ನು ಮಾತ್ರ ನೋಡಿದ್ದೀಯಾ, ಮುಂದೆ ಬೇರೆ ಪವನ್ ಕಲ್ಯಾಣ್ ನೋಡಬೇಕಾಗುತ್ತದೆ, ನಿಮ್ಮ ವೈ.ಎಸ್.ಆರ್‍.ಸಿ.ಪಿ. ಪಕ್ಷದ ಗೂಂಡಾಗಿರಿಯನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಇದೇ ಸಮಯದಲ್ಲಿ ಮದುವೆ ವಿಚಾರದ ಬಗ್ಗೆ ಪದೇ ಪದೇ ಟೀಕೆ ಮಾಡುವ ಬಗ್ಗೆ ಮಾತನಾಡಿದ್ದಾರೆ. ಮಾತನಾಡಿದರೇ ಸಾಕು ಎರಡು-ಮೂರು ಮದುವೆ ಅಂತಾ ಹೇಳ್ತೀರಾ ಆದರೆ ಜಗನ್ ಮಾತ್ರ ನಾಲ್ಕನೇ ಮದುವೆ ಅಂತಾ ಹೇಳ್ತಾರೆ. ನಾಲ್ಕನೇ ಹೆಂಡತಿ ಅಂದ್ರೇ ಯಾರು ಗೊತ್ತಿಲ್ಲ. ನನಗೆ ನಾಲ್ಕನೇ ಹೆಂಡತಿ ನೀನೇ ಇರಬೇಕು. ನಾನು ಎಂದೂ ಎದುರಾಳಿಯ ವೈಯುಕ್ತಿಕ ಜೀವನದ ಬಗ್ಗೆ ಮಾತನಾಡಿಲ್ಲ. ನಾನು ತೆಲುಗು ಮಿಡೀಯಂ ನಲ್ಲಿ ಓದಿಕೊಂಡಿದ್ದೇನೆ. ನನಗೂ ಭಾಷೆ ಗೊತ್ತು ಆದರೆ ನಿನ್ನಂತೆ ಮಾತನಾಡೋಕೆ ಇಷ್ಟವಾಗೊಲ್ಲ ಎಂದು ಕಿಡಿಕಾರಿದ್ದಾರೆ.

ಮುಂದುವರೆದು ಪವನ್ ಕಲ್ಯಾಣ್ ಎಂದರೇ ಆಂಧ್ರಪ್ರದೇಶದ ಯುವಕರ ಭವಿಷ್ಯನಾನು. ನಿನ್ನನ್ನು ಪಾತಾಳ ಲೋಕಕ್ಕೆ ತುಳಿಯುವಂತಹ ವಾಮನ ಪಾದ ನಾನು. ಜಗನ್ ನಿನ್ನನ್ನು ಪಾತಾಳಕ್ಕೆ ತುಳಿಯದಿದ್ದರೇ ನನ್ನ ಹೆಸರು ಪವನ್ ಕಲ್ಯಾಣ್ ಅಲ್ಲ ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಇನ್ನೂ ಈ ಭಾರಿಯ ಆಂಧ್ರಪ್ರದೇಶದ ಚುನಾವಣೆಯಲ್ಲಿ ಜನಸೇನಾ ಹಾಗೂ ಟಿಡಿಪಿ ಮೈತ್ರಿ ಮಾಡಿಕೊಂಡಿದ್ದು, ಮೈತ್ರಿಯಂತೆ 24 ಕ್ಷೇತ್ರಗಳಲ್ಲಿ ಜನಸೇನಾ ಪಕ್ಷ ಸ್ಫರ್ಧೆ ಮಾಡಲಿದೆ.