Film News

ಸಾಮಾನ್ಯ ಪ್ರಯಾಣಿಕನಂತೆ ವಿಮಾನದಲ್ಲಿ ಪ್ರಯಾಣಿಸಿದ ಸೂಪರ್ ಸ್ಟಾರ್ ರಜನಿಕಾಂತ್, ವೈರಲ್ ಆದ ವಿಡಿಯೋ……!

ದೇಶದ ಸಿನಿರಂಗದ ಸ್ಟಾರ್‍ ನಟರಲ್ಲೊಬ್ಬರಾದ ಸೂಪರ್‍ ಸ್ಟಾರ್‍ ರಜನಿಕಾಂತ್ ರವರು ವಯಸ್ಸಾದರೂ ಸಹ ಭಾರಿ ಬಜೆಟ್ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಭಾರಿ ಸಂಭಾವನೆಯನ್ನು ಪಡೆದುಕೊಳ್ಳಯತ್ತಾ ಟಾಪ್ ನಟರ ಸಾಲಿನಲ್ಲಿ ಸಹ ಇದ್ದಾರೆ. ಇನ್ನೂ ರಜನಿಕಾಂತ್ ರವರ ಬಹುನಿರೀಕ್ಷಿತ ಜೈಲರ್‍ ಹಾಗೂ ಲಾಲ್ ಸಲಾಮ್ ಎಂಬ ಸಿನೆಮಾದಲ್ಲಿ ನಟಿಸಿದ್ದು, ಜೈಲರ್‍ ಸಿನೆಮಾ ಬ್ಲಾಕ್ ಬ್ಲಸ್ಟರ್‍ ಹಿಟ್ ಹೊಡೆದಿದ್ದು, ಲಾಲ್ ಸಲಾಮ್ ಬಾಕ್ಸ್ ಆಫೀಸ್ ನಲ್ಲಿ ಸೋತಿದೆ. ಇನ್ನೂ ಸ್ಟಾರ್‍ ನಟರಾದರೂ ಸಹ ರಜನಿಕಾಂತ್ ರವರು ತುಂಬಾ ಸರಳತೆಯಿಂದ ಇರುತ್ತಾರೆ. ಇದೀಗ ವಿಮಾನದಲ್ಲಿ ಸಾಮಾನ್ಯ ಪ್ರಯಾಣಿಕನಂತೆ ಪ್ರಯಾಣಿಸಿದ್ದು, ಈ ಸಂಬಂಧ ವಿಡಿಯೋ ವೈರಲ್ ಆಗುತ್ತಿದೆ.

ಸೂಪರ್‍ ಸ್ಟಾರ್‍ ರಜನಿಕಾಂತ್ ರವರು ಸಿನಿರಂಗದಲ್ಲಿ ಸ್ಟಾರ್‍ ಆಗಿದ್ದರೂ ಸಹ ರಿಯಲ್ ಲೈಫ್ ನಲ್ಲಿ ಆದಷ್ಟೂ ಸರಳವಾಗಿಯೇ ಇರಲು ಬಯಸುತ್ತಾರೆ. ಅವರ ಸರಳತೆಗೆ ಅನೇಕ ನಿರ್ದಶನಗಳೂ ಸಹ ಉದಾಹರಣೆಯಾಗಿದೆ. ಇದೀಗ ಅವರ ಸರಳತೆಗೆ ಮತ್ತೊಂದು ಉದಾಹರಣೆ ಸಿಕ್ಕಿದೆ. ಆಂಧ್ರದ ಕಡಪದಿಂದ ಇಂಡಿಗೋ ವಿಮಾನದಲ್ಲಿ ಸಾಮಾನ್ಯ ದರ್ಜೆಯಲ್ಲಿ ಅವರು ಪ್ರಯಾಣಿಸಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಸದ್ಯ ರಜನಿಕಾಂತ್ ರವರಿಗೆ 73 ವರ್ಷ ವಯಸ್ಸಾಗಿದ್ದು, ಕೆಲವೊಂದು ಆರೋಗ್ಯ ಸಮಸ್ಯೆಗಳನ್ನು ಸಹ ಎದುರಿಸುತ್ತಿದ್ದಾರೆ. ಸಾಮಾನ್ಯವಾಗಿ ಸಿನೆಮಾ ಸೆಲೆಬ್ರೆಟಿಗಳು ಕಾಣಿಸಿಕೊಂಡರೇ ಸೆಲ್ಫಿಗಾಗಿ ಮುಗಿಬೀಳುವುದು ಸಾಮಾನ್ಯ. ಆದರೂ ಸಹ ರಜನಿಕಾಂತ್ ರವರು ವಿಮಾನದಲ್ಲಿ ಸಾಮಾನ್ಯ ದರ್ಜೆಯಲ್ಲಿ ಇತರೆ ಪ್ರಯಾಣಿಕರ ಜೊತೆ ಸಾಮಾನ್ಯರಂತೆ ಕುಳಿತುಕೊಂಡಿದ್ದಾರೆ. ಅಲ್ಲಿರುವ ಕೆಲ ಸಹ ಪ್ರಯಾಣಿಕರ ಜೊತೆಗೆ ಮಾತುಕತೆ ನಡೆಸಿದ್ದಾರೆ. ಹತ್ತಿರದಿಂದ ಸೂಪರ್‍ ಸ್ಟಾರ್‍ ರನ್ನು ನೋಡಿ ಅನೇಕರು ಖುಷಿ ಪಟ್ಟಿದ್ದಾರೆ.

ಸೂಪರ್‍ ಸ್ಟಾರ್‍ ರಜನಿಕಾಂತ್ ರವರು ಮನಸ್ಸು ಮಾಡಿದರೇ ಪ್ರತ್ಯೇಕ ವಿಮಾನದಲ್ಲೇ ಹೋಗಬಹುದು. ನಿರ್ಮಾಪಕರು ಅವರಿಗೆ ಪ್ರವೈಟ್ ಜೆಟ್ ಬೇಕಾದರೂ ವ್ಯವಸ್ಥೆ ಮಾಡುತ್ತಾರೆ. ಆದರೆ ಎಕಾನಮಿ ಕ್ಲಾಸ್ ನಲ್ಲಿ ರಜನಿಕಾಂತ್ ರವರು ಪ್ರಯಾಣಿಸಿದ್ದಾರೆ. ಈ ಸಂಬಂಧ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ರಜನಿಕಾಂತ್ ರವರ ಸರಳತೆಯನ್ನು ಮನಸಾರೆ ಹೊಗಳುತ್ತಿದ್ದಾರೆ. ಇನ್ನೂ ಕಳೆದ ವರ್ಷ ರಜನಿಕಾಂತ್ ರವರು ಜೈಲರ್‍ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಈ ಸಿನೆಮಾದ ಬಳಿಕ ಲಾಲ್ ಸಲಾಂ ಎಂಬ ಸಿನೆಮಾದಲ್ಲಿ ಸ್ಪೇಷಲ್ ಪಾತ್ರ ಪೋಷಣೆ ಮಾಡಿದ್ದರು. ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು. ಇದೀಗ ಜೈ ಭೀಮ್ ಸಿನೆಮಾ ಖ್ಯಾತಿಯ ಟಿ.ಜೆ.ಜ್ಞಾನವೇಲ್ ನಿರ್ದೇಶನಲ್ಲಿ ವೆಟ್ಟೈಯಾನ್ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾ ದೈತ್ಯ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ.

Most Popular

To Top