Film News

ನಟ ನರೇಶ್ ಅಫೈರ್ ಬಗ್ಗೆ ರಮ್ಯ ರಘುಪತಿ ಗಂಭೀರ ಆರೋಪಗಳು, ಆ ಕಾರಣದಿಂದಲೇ ನಾನು ವಿಚ್ಚೇದನಕ್ಕೆ ಒಪ್ಪುತ್ತಿಲ್ಲ ಎಂದರು…!

ಇಡೀ ಸೌತ್ ಸಿನಿರಂಗದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾದ ವಿಚಾರ ಅದು ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ರವರ ಡೇಟಿಂಗ್ ಸುದ್ದಿ. ಈ ಸುದ್ದಿ ಇಂದಿಗೂ ಸಹ ಸಖತ್ ಸದ್ದು ಮಾಡುತ್ತಿದೆ. ಇನ್ನೂ ಕಳೆದ ವರ್ಷದ ಡಿ.31 ರಂದು ನರೇಶ್ ಹಾಗೂ ಪವಿತ್ರಾ ಮದುವೆಯಾಗುತ್ತಿರುವುದಾಗಿ ತಿಳಿಸಿದ್ದಾರೆ. ಇನ್ನೂ ಈ ವಿಚಾರಕ್ಕಾಗಿ ನರೇಶ್ ಮೂರನೇ ಪತ್ನಿ ರಮ್ಯ ರಘುಪತಿ ಕೆಲವೊಂದು ಶಾಕಿಂಗ್ ಹೇಳಿಕೆಗಳನ್ನು ನೀಡಿದ್ದಾರೆ. ನರೇಶ್ ಮೇಲೆ ಗಂಭೀರವಾದ ಅನೇಕ ಆರೋಪಗಳನ್ನು ಮಾಡಿದ್ದಾರೆ.

ನರೇಶ್ ಹಾಗೂ ಪವಿತ್ರಾ ಮದುವೆಯಾಗುವ ಬಗ್ಗೆ ಪ್ರಕಟಣೆ ಹೊರಬಂದ ಕೆಲವು ದಿನಗಳ ಬಳಿಕ ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಅನೇಕ ಆರೋಪಗಳನ್ನು ಮಾಡಿದ್ದಾರೆ. ಈ ಹಿಂದೆ ಎಂದೂ ಇಲ್ಲದ ಮಾದರಿಯಲ್ಲಿ ಆರೋಪಗಳನ್ನು ಮಾಡಿದ್ದಾರೆ. ನರೇಶ್ ಕಾಮಾಂಧ, ವುಮೆನೈಜರ್‍, ಪಾರ್ನ್ ವಿಡಿಯೋಗಳನ್ನು ನೋಡುತ್ತಾರೆ. ನನ್ನನ್ನು ಬಿಟ್ಟುಬಿಡಲು ನನಗೆ ಅಕ್ರಮ ಸಂಬಂಧವಿದೆ ಎಂದು ಆರೋಪಗಳನ್ನು ಮಾಡುತ್ತಾರೆ. ದಿವಂಗತ ಕೃಷ್ಣ ಹಾಗೂ ನನಗೆ ಅಕ್ರಮ ಸಂಬಂಧವಿದೆ ಎಂದು ಆರೋಪಗಳನ್ನು ಮಾಡಿದ್ದಾರೆ. ನರೇಶ್ ವಿಚ್ಚೇದನಕ್ಕಾಗಿ ಪಿಟಿಷನ್ ಹಾಕಿದ್ದಾರೆ. ಜೊತೆಗೆ ನನ್ನ ಮೇಲೆ ಅನೇಕ ಆರೋಪಗಳನ್ನು ಹೊರೆಸಿದ್ದಾರೆ. ನರೇಶ್ ಹಾಕಿರುವ ಎಲ್ಲ ಕೇಸ್ ಗಳನ್ನು ನಾನು ಸಮರ್ಥವಾಗಿ ಎದುರಿಸುತ್ತೇನೆ. ನನ್ನ ಮೇಲೆ ನರೇಶ್ ಹೊರೆಸಿರುವ ಆರೋಪಗಳು ಆರು ತಿಂಗಳಾದರೂ ಇನ್ನೂ ನಿರೂಪಿಸಲು ವಿಫಲರಾಗಿದ್ದಾರೆ ಎಂದು ಇತ್ತೀಚಿಗೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಇನ್ನೂ ನಾನು ಡೊಮೆಸ್ಟಿಕ್ ವೈಲೆನ್ಸ್ ಪ್ರಕರಣವನ್ನು ಮಾತ್ರ ದಾಖಲು ಮಾಡಿದ್ದೇನೆ. ಜೊತೆಗೆ ನನಗೆ ಹಾಗೂ ನನ್ನ ಮಗನಿಗೆ ಮೈಂಟೆನೆನ್ಸ್ ಬೇಕಿದೆ. ನನ್ನ ಮೇಲೆ ಅನೇಕ ಆರೋಪಗಳು ಬಂದಿವೆ. ನಾನು ನರೇಶ್ ಆಸ್ತಿಗಾಗಿ ಇದೆಲ್ಲಾ ಮಾಡುತ್ತಿದ್ದೇನೆ ಎಂದು ಆರೋಪ ಕೇಳಿಬರುತ್ತಿದೆ. ನನಗೆ ನರೇಶ್ ಆಸ್ತಿ ಬೇಕಾಗಿಲ್ಲ. ನನ್ನ ಮಗನ ಭವಿಷ್ಯ ಮುಖ್ಯ. ಅವನಿಗಾಗಿಯೇ ನಾನು ವಿಚ್ಚೇದನಕ್ಕೆ ಒಪ್ಪುತ್ತಿಲ್ಲ, ನಾನು ಕಾನೂನಿನಂತೆ ಹೋರಾಟ ಮಾಡುತ್ತೇನೆ. ಇನ್ನೂ ಪವಿತ್ರಾ ಲೋಕೇಶ್ ನರೇಶ್ ಗೆ ಹತ್ತಿರವಾಗಲು ಆರ್ಥಿಕ ಸ್ಥಿತಿಗಳು ಕಾರಣ. ಅಂದಕ್ಕಿಂತ ಬೇರೆ ಏನು ಇಲ್ಲ. ನರೇಶ್ ಗೆ ಈ ಹಿಂದೆಯೂ ಅನೇಕ ಅಪೈರ್‍ ಗಳಿವೆ. ಯಾರಾದರೂ ಹುಡುಗಿ ಸಿಕ್ಕರೇ ಸಾಕು ಕೆಲವು ದಿನಗಳ ಕಾಲ ಆಕೆಯೊಂದಿಗೆ ಒಳ್ಳೆಯ ಪತಿಯಂತೆ ಪ್ರೀತಿಯಲ್ಲಿರುವಂತೆ ನಟಿಸುತ್ತಾನೆ ಎಂದು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಅಷ್ಟೇ ಅಲ್ಲದೇ ನರೇಶ್ ಅಕ್ರಮ ಸಂಬಂಧಗಳ ಬಗ್ಗೆ ವಿಜಯ ನಿರ್ಮಲಾ ರವರಿಗೂ ತಿಳಿದಿದೆ. ನರೇಶ್ ಬದಲಾಗುತ್ತಾನೆ ಎಂದು ನನಗೆ ಹೇಳುತ್ತಿದ್ದರು. ಆಕೆಯ ಮರಣದ ನಂತರ ನರೇಶ್ ಗೆ ಮತಷ್ಟು ಫ್ರಿಡಂ ಸಿಕ್ಕಂತಾಗಿದೆ. ವಿಜಯ ನಿರ್ಮಲ ರವರು ಜೀವಂತವಾಗಿ ಇದಿದ್ದರೇ ನನಗೆ ಈ ಸ್ಥಿತಿ ಬರುತ್ತಿಲ್ಲ ಎಂಬೆಲ್ಲಾ ಮಾತುಗಳನ್ನು ಆಕೆ ಹಂಚಿಕೊಂಡಿದ್ದಾರೆ. ನರೇಶ್ ವಿರುದ್ದ ನಾನು ಕಾನೂನು ರೀತ್ಯಾ ಹೋರಾಟ ಮುಂದುವರೆಸುತ್ತೇನೆ ಎಂದಿದ್ದಾರೆ.

Most Popular

To Top