ಸ್ಟಾರ್ ನಟರ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ಐಶ್ವರ್ಯ ರಾಜೇಶ್, ಅವರು ಅದನ್ನೆಲ್ಲಾ ನೋಡಿ ಆಫರ್ ಕೊಡ್ತಾರೆ ಎಂದ ನಟಿ…..!

Follow Us :

ಖ್ಯಾತ ಸೀನಿಯರ್‍ ನಟಿ ಶ್ರೀಲಕ್ಷ್ಮಿ ಯವರ ಕುಟುಂಬಕ್ಕೆ ಸೇರಿದ ಐಶ್ವರ್ಯ ರಾಜೇಶ್ ವಿಭಿನ್ನ ಸಿನೆಮಾಗಳ ಮೂಲಕ ತನ್ನದೇ ಆದ ಕ್ರೇಜ್ ಪಡೆದಕೊಂಡಿದ್ದಾರೆ. ಆಕೆ ತೆಲುಗು ನಟಿಯಾದರೂ ಸಹ ಆಕೆ ತಮಿಳು ಸಿನಿರಂಗದಲ್ಲಿ ಸ್ಟಾರ್‍ ನಟಿಯಾಗಿ ಸಕ್ಸಸ್ ಪುಲ್ ಕೆರಿಯರ್‍ ಸಾಗಿಸುತ್ತಿದ್ದಾರೆ. ಇದೀಗ ಆಕೆ ಸ್ಟಾರ್‍ ನಟರ ಸಿನೆಮಾಗಳಲ್ಲಿನ ಚಾನ್ಸ್ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಇತ್ತಿಚಿಗೆ ನಡೆದ ಸಂದರ್ಶನವೊಂದರಲ್ಲಿ ಆಕೆ ಸ್ಟಾರ್‍ ನಟರ ಬಗ್ಗೆ ಕಾಮೆಂಟ್ಸ್ ಮಾಡಿದ್ದು, ಚರ್ಚೆಗೆ ಕಾರಣವಾಗಿದೆ.

ತೆಲುಗು ಮೂಲದ ನಟಿ ಐಶ್ವರ್ಯ ರಾಜೇಶ್ ಕಾಲಿವುಡ್ ನಲ್ಲಿ ಸಕ್ಸಸ್ ಕಂಡುಕೊಂಡರು. ವಿಭಿನ್ನ ಸಿನೆಮಾಗಳ ಮೂಲಕ ತನ್ನದೇ ಆದ ಕ್ರೇಜ್ ಪಡೆದುಕೊಂಡಿದ್ದಾರೆ. ಆಕೆ ಸಿನಿರಂಗದಲ್ಲಿ ತುಂಬಾನೆ ಕಷ್ಟಪಟ್ಟು ಬಂದಿದ್ದಾರೆ. ಆಕೆಯ ತಂದೆ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದ್ದರು. ಆಕೆಯ ಬಾಲ್ಯದಲ್ಲೇ ತಂದೆ ಅನಾರೋಗ್ಯದ ಕಾರಣದಿಂದ ಮೃತಪಟ್ಟರು. ಇನ್ನೂ ತಂದೆಯ ಮರಣದ ಬಳಿಕ ಆಕೆಯ ಕುಟುಂಬದಲ್ಲೂ ಸಹ ಅನೇಕ ಕಷ್ಟಗಳು ಎದುರಾದವು. ತುಂಬಾ ಸಮಸ್ಯೆಗಳನ್ನು ಎದುರಿಸಿ ಸಿನಿರಂಗದಲ್ಲಿ ಸಕ್ಸಸ್ ಆದರು. ಸಿನಿರಂಗದಲ್ಲಿ ಆಕೆ ಸ್ಟಾರ್‍ ನಟಿಯಾಗಿ ಹೆಸರು ಗಳಿಸಿಕೊಳ್ಳಲು ತುಂಬಾನೆ ಕಷ್ಟಪಟ್ಟರು. ತಮಿಳು ಹಾಗೂ ತೆಲುಗಿನಲ್ಲಿ ಸಾಲು ಸಾಲು ಸಿನೆಮಾಗಳನ್ನು ಮಾಡುತ್ತಾ, ಹಿರೋಯಿನ್ ಆಗಿ, ಸ್ಪೇಷಲ್ ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ ತನ್ನದೇ ಆದ ಅಭಿಮಾನಿ ಬಳಗವನ್ನು ಸಹ ಪಡೆದುಕೊಂಡಿದ್ದಾರೆ. ಹೆಚ್ಚಾಗಿ ಆಕೆ ಲೇಡಿ ಓರಿಯೆಂಟೆಡ್ ಸಿನೆಮಾಗಳಲ್ಲಿಯೇ ಕಾಣಿಸಿಕೊಳ್ಳುತ್ತಿರುತ್ತಾರೆ.

ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಐಶ್ವರ್ಯ ಕೆಲವೊಂದು ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಕಾಕಾ ಮುಟ್ಟೈ ಸಿನೆಮಾದ ಬಳಿಕ ನನಗೆ ಯಾರೂ ಆಫರ್‍ ಗಳನ್ನು ಕೊಡಲಿಲ್ಲ. ಅದಕ್ಕೆ ನಾನು ಸಹ ಶಾಕ್ ಆದೆ. ದುಲ್ಕಾರ್‍ ಸಲ್ಮಾನ್, ವಿಜಯ್ ಸೇತುಪತಿ, ಧನುಷ್, ಶಿವಕಾರ್ತಿಕೇಯನ್ ರವರನ್ನು ಬಿಟ್ಟರೇ ಬೇರೆ ಹಿರೋಗಳು ನನಗೆ ಅವಕಾಶ ಕೊಡಲಿಲ್ಲ. ಸ್ಟಾರ್‍ ಹಿರೋಗಳು ಹಿರೋಯಿನ್ ಆಯ್ಕೆ ಮಾಡಿಕೊಳ್ಳುವ ವೇಳೆ ಅನೇಕ ಲೆಕ್ಕಾಚಾರಗಳನ್ನು ಹಾಕುತ್ತಾರೆ. ಹಿರೋಯಿನ್ ಮಾರ್ಕೆಟ್, ಒಟಿಟಿ, ಡಿಜಿಟಲ್, ಸ್ಟಾಟಲೈಟ್ ರೇಟ್ಸ್ ಎಲ್ಲವನ್ನೂ ಪರಿಗಣಿಸುತ್ತಾರೆ. ಸಕ್ಸಸ್ ಕಾಣಬೇಕಾದರೇ ಅದಕ್ಕಾಗಿ ಕಠಿಣ ಶ್ರಮ ಪಡಬೇಕು. ಅದಕ್ಕಾಗಿ ನಾನು ಲೇಡಿ ಓರಿಯೆಂಟೆಡ್ ಸಿನೆಮಾಗಳಲ್ಲಿ ನಟಿಸುತ್ತಿದ್ದೇನೆ. ಆದರೆ ಸ್ಟಾರ್‍ ಗಳು ನನಗೆ ಅವಕಾಶ ನೀಡುತ್ತಿಲ್ಲ. ಅದಕ್ಕೆ ಕಾರಣ ಏನು ಎಂಬುದು ಸಹ ನನಗೆ ತಿಳಿಯದು. ಆದರೂ ನಾನು ಚಿಂತೆ ಮಾಡೊಲ್ಲ. ನನ್ನ ಸಿನೆಮಾಗೆ ನಾನೇ ಹಿರೋ. ನನಗೂ ಸಹ ಅಭಿಮಾನಿಗಳಿದ್ದಾರೆ ಎಂದು ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ಇನ್ನೂ ಐಶ್ವರ್ಯ ರಾಜೇಶ್ ಹಂಚಿಕೊಂಡ ಈ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಜೊತೆಗೆ ವಿವಿಧ ರೀತಿಯ ಚರ್ಚೆಗಳಿಗೂ ಸಹ ಕಾರಣವಾಗಿದೆ. ಇನ್ನೂ ಐಶ್ವರ್ಯ ತನ್ನ ಪ್ರತಿಭೆಯಿಂದಲೇ ಒಳ್ಳೆಯ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇನ್ನೂ ಆಕೆಯ ಕೈಯಲ್ಲಿ ಹಲವು ಸಿನೆಮಾಗಳಿದ್ದು, ಸಕ್ಸಸ್ ಪುಲ್ ಆಗಿ ಕೆರಿಯರ್‍ ಸಾಗಿಸುತ್ತಿದ್ದಾರೆ.