ಕುಡಿದ ಅಮಲಿನಲ್ಲಿ ಆತ ಮಾಡಿದ ಕೆಲಸಕ್ಕೆ ಶಾಕ್, ಹೆವಿ ಟ್ಯಾಲೆಂಟೆಡ್ ಕುಡುಕ ಕೊನೆಗೆ?

Follow Us :

ಸಾಮಾನ್ಯವಾಗಿ ನಾವು ಕುಡುಕರು ಮಾಡುವ ವಿನ್ಯಾಸಗಳನ್ನು ನೋಡಿಯೇ ಇರುತ್ತೇವೆ. ಕುಡಿತದ ಅಮಲಿನಲ್ಲಿ ಅದರ ನಶೆಯಲ್ಲಿ ಅನೇಕರು ವಿವಿಧ ರೀತಿಯ ಕೆಲಸಗಳನ್ನು ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಕುಡಿದ ಯುವಕನೋರ್ವ ಮದ್ಯದ ನಶೆಯಲ್ಲಿ ಮಾಡಿದ ಕೆಲಸಕ್ಕೆ ಎಲ್ಲರೂ ಶಾಕ್ ಆಗಿದ್ದಾರೆ. ಅಷ್ಟಕ್ಕೂ ಆತ ಮಾಡಿದ್ದು, ಏನು, ಕೊನೆಗೆ ಏನಾಯ್ತು ಎಂಬ ವಿಚಾರಕ್ಕೆ ಬಂದರೇ,

ಆದಿಲಾಬಾದ್ ಎಂಬ ಪ್ರದೇಶದಲ್ಲಿ ಮದ್ಯದ ಅಮಲಿನಲ್ಲಿ ಯುವಕನೋರ್ವ ಸಮೀಪದಲ್ಲಿಯೇ ಇದ್ದ ವಿದ್ಯುತ್ ಸ್ತಂಭ ಏರಿದ್ದಾನೆ. ಅದು ಸಾಲದು ಎಂಬಂತೆ ವಿದ್ಯುತ್ ತಂತಿಗಳನ್ನು ಹಿಡಿದುಕೊಂಡು ನೇತಾಡಿದ್ದಾನೆ. ಆದರೇ ಆತನ ಅದೃಷ್ಟ ಚೆನ್ನಾಗಿದ್ದು, ಆ ತಂತಿಗಳಲ್ಲಿ ವಿದ್ಯುತ್ ಪೂರೈಕೆ ಆಗಿರಲಿಲ್ಲ. ಆದರೂ ಸಹ ಆತನನ್ನು ದುರದೃಷ್ಟ ಬೆನ್ನ ಹಿಂದೆ ಬಿದ್ದಿದೆ ಎಂದೇ ಹೇಳಬಹುದು. ಕುಡಿದ ನಶೆಯಲ್ಲಿ ಕಂಭ ಏರಿದ ಆತ ಕಾಲು ಜಾರಿ ಕೆಳಗೆ ಬಿದಿದ್ದಾನೆ. ಕೆಳಗೆ ಬಿದ್ದ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಈ ಘಟನೆ ಆದಿಲಾಬಾದ್ ಜಿಲ್ಲೆಯ ಕೆ.ಆರ್‍.ಕೆ. ಕಾಲನಿಯಲ್ಲಿ ನಡೆದಿದೆ ಎನ್ನಲಾಗಿದೆ.

ಕುಡಿದ ವ್ಯಕ್ತಿ ಬಾಲು ಎಂಬ ಟ್ರಾಕ್ಟರ್‍ ಡ್ರೈವರ್‍ ಎನ್ನಲಾಗಿದೆ. ಕುಡಿದ ಅಮಲಿನಲ್ಲಿ ಆತ ಅಲ್ಲಿ ನಾನಾ ರಾದ್ದಾಂತ ಮಾಡಿದ್ದಾನೆ. ಸ್ಥಳೀಯರು ಸಹ ಆತನಿಗೆ ಬುದ್ದಿವಾದ ಸಹ ಹೇಳಿದ್ದರಂತೆ. ಆದರೆ ಅವರ ಮಾತುಗಳನ್ನು ಕೇಳದ ಆತ ಹತ್ತಿರದಲ್ಲೇ ಇದ್ದ ವಿದ್ಯುತ್ ಕಂಭ ಏರಿದ್ದಾನೆ. ವಿದ್ಯುತ್ ತಂತಿಗಳನ್ನು ಹಿಡಿದು ನೇತಾಡುತ್ತಾ ವಿವಿಧ ವಿನ್ಯಾಸಗಳನ್ನು ಮಾಡಿದ್ದಾನಂತೆ. ಆತ ಕಂಭ ಏರುವುದಕ್ಕೂ ಮುಂಚೆಯೇ ಅಲ್ಲಿನ ಸ್ಥಳೀಯರು ವಿದ್ಯುತ್ ಇಲಾಖೆಗೆ ಕರೆ ಮಾಡಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಕರೆಂಟ್ ಸ್ಥಗಿತಗೊಳಿಸಿದ್ದಾರೆ. ಇದರಿಂದ ಆತನಿಗೆ ವಿದ್ಯುತ್ ಶಾಕ್ ತಗುಲಿಲ್ಲ.

ಇಷ್ಟಾದರೂ ಸಹ ಆ ಯುವಕ ಮಾತ್ರ ಯಾರ ಮಾತು ಕೇಳದೇ ವಿದ್ಯುತ್ ತಂತಿಗಳನ್ನು ಹಿಡಿದು ಸರ್ಕಸ್ ಮಾಡಲು ಮುಂದಾಗಿದ್ದಾನೆ. ಆದರೆ ದುರದೃಷ್ಟಾವಶಾತ್ ಹಿಡಿತ ತಪ್ಪಿ ಕೆಳಗೆ ಬಿದ್ದಿದ್ದಾನೆ. ತೀವ್ರ ಗಾಯಗೊಂಡಿದ್ದಾನೆ. ಕೂಡಲೇ ಸ್ಥಳೀಯರು ಆತನನ್ನು ಹತ್ತಿರದ ಆಸ್ಪತ್ರೆಗೆ ಸಹ ದಾಖಲು ಮಾಡಿದ್ದಾರೆ. ತಲೆಗೆ ತೀವ್ರವಾದ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಆತನಿಗೆ ವೆಂಟಿಲೇಟರ್‍ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.