ಬ್ರೈನ್ ಲೆಸ್ ಗಂಡ ಬೇಕು ಎಂದ ಸ್ಟಾರ್ ನಟಿ ಶ್ರೀಲೀಲಾ, ವೈರಲ್ ಆದ ಕಾಮೆಂಟ್ಸ್….!

Follow Us :

ಅತೀ ಕಡಿಮೆ ಸಮಯದಲ್ಲೇ ಫೇಮಸ್ ಆದಂತಹ ನಟಿಯರಲ್ಲಿ ಶ್ರೀಲೀಲಾ ಸಹ ಒಬ್ಬರು ಎಂದು ಹೇಳಬಹುದು. ಕನ್ನಡ ಸಿನೆಮಾಗಳ ಮೂಲಕ ಫೇಂ ಪಡೆದುಕೊಂಡ ಶ್ರೀಲೀಲಾ, ಸದ್ಯ ಟಾಲಿವುಡ್ ನಲ್ಲಿ ಸ್ಟಾರ್‍ ಹಿರೋಯಿನ್ ಗಳಿಗೂ ದೊಡ್ಡ ಪೈಪೋಟಿಯಾಗಿದ್ದಾರೆ. ಸೌತ್ ನಲ್ಲಿ ಸ್ಟಾರ್‍ ಡಂ ಗಿಟ್ಟಿಸಿಕೊಳ್ಳಲು ತುಂಬಾನೆ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಕೊನೆಯದಾಗಿ ಆಕೆ ಪ್ರಿನ್ಸ್ ಮಹೇಶ್ ಬಾಬು ಜೊತೆಗೆ ಗುಂಟೂರು ಖಾರಂ ಸಿನೆಮಾದ ಮೂಲಕ ಒಳ್ಳೆಯ ಸಕ್ಸಸ್ ಪಡೆದುಕೊಂಡರು. ಇದೀಗ ಆಕೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದು, ಈ ವೇಳೆ ಆಕೆ ನೀಡಿದ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ.

ತೆಲುಗು ಸಿನಿರಂಗಕ್ಕೆ ನಟಿ ಶ್ರೀಲೀಲಾ ಸುನಾಮಿಯಂತೆ ಎಂಟ್ರಿ ಕೊಟ್ಟರು ಎಂದೇ ಹೇಳಬಹುದು. ಎಂಟ್ರಿ ಕೊಟ್ಟ ಮೊದಲ ಸಿನೆಮಾ ಫ್ಲಾಪ್ ಆದರೂ ಸಹ ಆಕೆ ಭಾರಿ ಆಫರ್‍ ಗಳನ್ನು ಪಡೆದುಕೊಳ್ಳುವ ಮೂಲಕ ಸ್ಟಾರ್‍ ನಟರ ಸಿನೆಮಾಗಳಲ್ಲಿ ನಟಿಸುತ್ತಾ ಕ್ರೇಜಿ ನಟಿಯಾಗಿದರು. ಜೊತೆಗೆ ಅನೇಕರ ನಟಿಯರಿಗೆ ಬಂದಂತಹ ಅವಕಾಶಗಳನ್ನು ಸಹ ಆಕೆ ತನ್ನ ತೆಕ್ಕೆಗೆ ಹಾಕಿಕೊಂಡರು ಎಂದೂ ಸಹ ಹೇಳಲಾಗುತ್ತಿದೆ. ಮೊದಲಿಗೆ ಒಳ್ಳೆಯ ಸಕ್ಸಸ್ ಕಂಡುಕೊಂಡ ಶ್ರೀಲೀಲಾ ಬ್ಯಾಕ್ ಟು ಬ್ಯಾಕ್ ಸೋಲುಗಳನ್ನು ಸಹ ಕಾಣುತ್ತಿದ್ದಾರೆ. ನಟ ನಿತಿನ್, ರಾಮ್, ವೈಷ್ಣವ್ ತೇಜ್ ಜೊತೆಗೆ ಆಕೆ ನಟಿಸಿದ್ದ ರೀಸೆಂಟ್ ಸಿನೆಮಾಗಳು ಡಿಜಾಸ್ಟರ್‍ ಆಗಿದೆ. ಈ ವೇಳೆ ಮಹೇಶ್ ಬಾಬು ಜೊತೆಗೆ ನಟಿಸಿದ ಗುಂಟೂರು ಖಾರಂ ಸಿನೆಮಾದ ಮೂಲಕ ಸಕ್ಸಸ್ ಕಂಡುಕೊಂಡರು.

ಇನ್ನೂ ಇತ್ತೀಚಿಗೆ ಪೀಪುಲ್ ಮಿಡಿಯಾ ಎಂಟರ್‍ ಟೈನ್ ಮೆಂಟ್ ನಿರ್ಮಾಣ ಸಂಸ್ಥೆ ಒರಿಜಿನಲ್ ಎಂಬ ಸಂದರ್ಶನ ಕಾರ್ಯಕ್ರಮವೊಂದನ್ನು ಶುರು ಮಾಡಿದೆ. ಈ ಸಂದರ್ಶನವನ್ನು ಸೌಮ್ಯ ಹೋಸ್ಟ್ ಮಾಡುತ್ತಿದ್ದು, ಈ ಶೋ ನಲ್ಲಿ ಅನೇಕ ಸೆಲೆಬ್ರೆಟಿಗಳು ಭಾಗಿಯಾಗುತ್ತಿದ್ದಾರೆ. ಈ ಒರಿಜಿನಲ್ ಇಂಟರ್‍ ವ್ಯೂನ ಮೊದಲ ಎಪಿಸೋಡ್ ಗೆ ಶ್ರೀಲೀಲಾ ಬಂದಿದ್ದು, ಈ ವೇಳೆ ಕೆಲವೊಂದು ಕ್ಯೂಟ್, ಫನ್ನಿ ಪ್ರಶ್ನೆಗಳು ಶ್ರೀಲೀಲಾ ರವರಿಗೆ ಎದುರಾಗಿವೆ. ಈ ಎಪಿಸೋಡ್ ನ ಪ್ರೊಮೋ ಒಂದು ರಿಲೀಸ್ ಆಗಿದ್ದು, ಈ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ಪ್ರೊಮೋ ಸಂಪೂರ್ಣವಾಗಿ ಫನ್ನಿಯಾಗಿದೆ ಎನ್ನಲಾಗಿದೆ. ಈ ಸಂದರ್ಶನದಲ್ಲಿ ಆಂಕರ್‍ ಸೌಮ್ಯ ನಿಮಗೆ ಬ್ರೈನ್ ಇರುವ ಹುಡುಗ ಬೇಕಾ, ಅಥವಾ ಫನ್ನಿ, ಜಾವಿಯಲ್ ಆಗಿರುವಂತಹ ಹುಡುಗ ಬೇಕಾ ಎಂದು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಶ್ರೀಲೀಲಾ, ಫನ್ನಿ, ಜೋವಿಯಲ್ ಆಗಿರುವ ಹುಡುಗನೇ ಬೇಕು. ಬ್ರೈನ್ ನಿಂದ ಮಾಡುವಂತಹ ಕೆಲಸಗಳನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಪರೋಕ್ಷವಾಗಿ ಬ್ರೈನ್ ಲೆಸ್ ಹುಡುಗ ಆದರೂ ಪರವಾಗಿಲ್ಲ, ನಗಿಸುವಂತಹ ಹುಡುಗ ಬೇಕು ಎಂದು ಹೇಳಿದ್ದಾರೆ. ಇನ್ನೂ ಈ ಪ್ರೊಮೋ ತುಂಬಾನೆ ಫನ್ನಿಯಾಗಿದ್ದು, ಇಡೀ ಎಪಿಸೋಡ್ ಯಾವ ರೀತಿಯಲ್ಲಿ ಇರಲಿದೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ. ಶೀಘ್ರದಲ್ಲೇ ಸಂಪೂರ್ಣ ಸಂದರ್ಶನ ಬಿಡುಗಡೆಯಾಗಲಿದೆ.