ಬಹುನಿರೀಕ್ಷಿತ ಸಲಾರ್ ಟ್ರೈಲರ್ ರಿಲೀಸ್, ಉಗ್ರಂ ಹಾಗೂ ಸಲಾರ್ ಸಿನೆಮಾದ ಎರಡೂ ಕತೆಗಳಿಗಿರುವ ಸಾಮ್ಯತೆ ಏನು ಗೊತ್ತಾ?

ಕೆಜಿಎಫ್ ಸಿನೆಮಾದ ಮೂಲಕ ಭಾರತ ಮಾತ್ರವಲ್ಲದೇ ಇಡೀ ವಿಶ್ವದಾದ್ಯಂತ ಕ್ರೇಜ್ ಪಡೆದುಕೊಂಡ ಪ್ರಶಾಂತ್ ನೀಲ್ ಸದ್ಯ ಸಲಾರ್‍ ಸಿನೆಮಾದ ಮೂಲಕ ಮತ್ತೊಂದು ಇತಿಹಾಸ ಸೃಷ್ಟಿಸಲು ಹೊರಟಿದ್ದಾರೆ. ಸಿನೆಮಾ ಘೋಷಣೆಯಾದಾಗಿನಿಂದಲೂ ಭಾರಿ ನಿರೀಕ್ಷೆ ಹುಟ್ಟಿಸಿದ ಈ…

ಕೆಜಿಎಫ್ ಸಿನೆಮಾದ ಮೂಲಕ ಭಾರತ ಮಾತ್ರವಲ್ಲದೇ ಇಡೀ ವಿಶ್ವದಾದ್ಯಂತ ಕ್ರೇಜ್ ಪಡೆದುಕೊಂಡ ಪ್ರಶಾಂತ್ ನೀಲ್ ಸದ್ಯ ಸಲಾರ್‍ ಸಿನೆಮಾದ ಮೂಲಕ ಮತ್ತೊಂದು ಇತಿಹಾಸ ಸೃಷ್ಟಿಸಲು ಹೊರಟಿದ್ದಾರೆ. ಸಿನೆಮಾ ಘೋಷಣೆಯಾದಾಗಿನಿಂದಲೂ ಭಾರಿ ನಿರೀಕ್ಷೆ ಹುಟ್ಟಿಸಿದ ಈ ಸಿನೆಮಾದ ಟ್ರೈಲರ್‍ ಡಿ.1 ರ ಸಂಜೆ ಬಿಡುಗಡೆಯಾಗಿದ್ದು, ಭಾರಿ ಸದ್ದು ಮಾಡುತ್ತಿದೆ. ಮೊದಲಿನಿಂದಲೂ ಈ ಸಿನೆಮಾ ಕನ್ನಡದ ಉಗ್ರಂ ಸಿನೆಮಾದ ರಿಮೇಕ್ ಎಂದು ಹೇಳಲಾಗುತ್ತಿದ್ದು, ಇದೀಗ ಬಿಡುಗಡೆಯಾದ ಟ್ರೈಲರ್‍ ನಿಂದ ಈ ವಿಚಾರಕ್ಕೆ ಸಂಬಂಧಿಸಿದಂತೆ ಬಹುತೇಕ ಉತ್ತರ ದೊರತಂತಾಗಿದೆ ಎನ್ನಲಾಗಿದೆ.

ಸ್ಯಾಂಡಲ್ ವುಡ್ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಯಂಗ್ ರೆಬೆಲ್ ಸ್ಟಾರ್‍ ಪ್ರಭಾಸ್ ರವರ ಕಾಂಬಿನೇಷನ್ ನಲ್ಲಿ ಸಲಾರ್‍ ಸಿನೆಮಾ ಸೆಟ್ಟೇರಿದೆ. ಈ ಸಿನೆಮಾ ಘೋಷಣೆಯಾದಾಗಿನಿಂದಲೂ ಸಲಾರ್‍ ಸಿನೆಮಾ ಕನ್ನಡದ ಉಗ್ರಂ ಸಿನೆಮಾದ ರಿಮೇಕ್ ಎಂದು ಹೇಳಲಾಗುತ್ತಿತ್ತು. ಆದರೆ ನಿರ್ದೇಶಕ ಪ್ರಶಾಂತ್ ಸೇರಿದಂತೆ ಚಿತ್ರತಂಡ ಸಲಾರ್‍ ಹಾಗೂ ಉಗ್ರಂ ಸಿನೆಮಾದ ರಿಮೇಕ್ ಅಲ್ಲ ಎರಡೂ ಬೇರೆಯದ್ದೆ ಕಥೆ ಎಂದು ಸ್ಪಷ್ಟನೆ ನೀಡಿದ್ದರೂ ಸಹ ಈ ಸುದ್ದಿ ಮಾತ್ರ ಅದೇ ರೀತಿಯಲ್ಲಿ ಹರಿದಾಡುತ್ತಿತ್ತು. ಇದೀಗ ಸಲಾರ್‍ ಸಿನೆಮಾದ ಟ್ರೈಲರ್‍ ಬಿಡುಗಡೆಯಾಗಿದ್ದು, 3:46 ಸೆಕೆಂಡ್ ಗಳ ಈ ಟ್ರೈಲರ್‍ ನಲ್ಲಿ ಸಿನೆಮಾದ ಕೆಲವೊಂದು ಪ್ರಮುಖ ವಿಚಾರಗಳನ್ನು ತೋರಿಸಲಾಗಿದೆ. ಟ್ರೈಲರ್‍ ಮೂಲಕ ಉಗ್ರಂ ಸಿನೆಮಾಗೂ ಸಲಾರ್‍ ಸಿನೆಮಾಗೂ ಇರುವಂತ ಸಾಮ್ಯತೆ ಬಗ್ಗೆ ಕೆಲವೊಂದು ಸುದ್ದಿಗಳು ಹರಿದಾಡುತ್ತಿದೆ.

ಇನ್ನೂ ಸಲಾರ್‍ ಸಿನೆಮಾ ಉಗ್ರಂ ಸಿನೆಮಾದ ರಿಮೇಕ್ ಅಲ್ಲ. ಆದರೆ ಉಗ್ರಂ ಸಿನೆಮಾದ ಕತೆಯ ಛಾಯೆ ಸಲಾರ್‍ ಸಿನೆಮಾದ ಮೇಲೆ ಬಿದಿದ್ದೆ. ಉಗ್ರಂ ಸಿನೆಮಾದ ಮೂಲ ಕತೆ ಸಲಾರ್‍ ಸಿನೆಮಾದ ಕತೆಯಲ್ಲಿಯೂ ಇದೆ. ಸಲಾರ್‍ ಸಿನೆಮಾದಲ್ಲಿ ಉಗ್ರಂ ಸಿನೆಮಾದ ಕೆಲವೊಂದು ಸನ್ನಿವೇಶಗಳನ್ನು ಎತ್ತಿಕೊಂಡಂತಿದೆ ಎನ್ನಲಾಗಿದೆ. ಉಗ್ರಂ ಸಿನೆಮಾದಲ್ಲಿ ಶ್ರೀಮುರಳಿ ಹಾಗೂ ತಿಲಕ್ ಇಬ್ಬರೂ ಬಾಲ್ಯದ ಸ್ನೇಹಿತರು. ಈ ಸಿನೆಮಾದಲ್ಲಿ ಮುಘೋರ್‍ ಎಂಬ ಪ್ರದೇಶವನ್ನು ಆಳುತ್ತಿದ್ದಂತಹ ಕುಟುಂಬದವನು ತಿಲಕ್. ಆದರೆ ಅಲ್ಲಿ ಬೇರೆಯವರ ಹಿಡಿತವಿತ್ತು. ಆ ಪ್ರದೇಶವನ್ನು ಮತ್ತೆ ವಶಪಡಿಸಿಕೊಳ್ಳಲು ತಿಲಕ್ ಶ್ರೀಮುರಳಿಯ ಸಹಾಯ ಕೇಳುತ್ತಾರೆ. ಸಲಾರ್‍ ಸಿನೆಮಾಧಲ್ಲೂ ಸಹ ಅದೇ ಮಾದರಿಯ ಕತೆಯಿದೆ. ಉಗ್ರಂ ಸಿನೆಮಾದಲ್ಲಿ ಶ್ರೀಮುರಳಿ, ನಿನಗೆ ಏನೆ ಸಹಾಯ ಬೇಕಾದರು ಕೇಳು ಮಾಡುತ್ತೇನೆ ಎಂದು ತಿಲಕ್ ಗೆ ಬಾಲ್ಯದಲ್ಲಿ ಹೇಳಿರುತ್ತಾನೆ. ಸಲಾರ್‍ ಸಿನೆಮಾದಲ್ಲೂ ಸಹ ಪ್ರಭಾಸ್ ವರದರಾಜ್ ಗೆ ಇದೇ ಮಾದರಿಯ ಭರವಸೆ ನೀಡುತ್ತೇನೆ.

ಉಗ್ರಂ ನಲ್ಲಿ ತಿಲಕ್ ಗೆ ಓರ್ವ ಸಹೋದರನಿರುತ್ತಾನೆ. ಸಲಾರ್‍ ನಲ್ಲೂ ಪೃಥ್ವಿರಾಜ್ ಗೆ ಓರ್ವ ಸಹೋದರನಿರುತ್ತಾನೆ. ಹೀಗೆ ಈ ಎರಡೂ ಸಿನೆಮಾಗಳಲ್ಲಿ ಕೆಲವೊಂದು ಸಾಮ್ಯತೆಗಳಿವೆ. ಕನ್ನಡದ ಉಗ್ರಂ ಸಿನೆಮಾ ಒಂದೇ ಭಾಗದಲ್ಲಿ ಮುಕ್ತಾಯವಾಗುತ್ತದೆ. ಆದರೆ ಸಲಾರ್‍ ಸಿನೆಮಾ ಎರಡು ಭಾಗಗಳಲ್ಲಿ ಬರಲಿದೆ. ಇನ್ನೂ ಈ ಸಿನೆಮಾಗೆ ಹೊಂಬಾಳೆ ಫಿಲಂಸ್ ಬಂಡವಾಳ ಹೂಡಿದ್ದು, ಡಿ.22 ರಂದು ವಿಶ್ವದಾದ್ಯಂತ ಅಬ್ಬರಿಸಲಿದೆ.