ಮಕ್ಕಳಿಗಾಗಿ ಪಾಕಿಸ್ತಾನದಿಂದ ಬಂದ ಅಂಜು ನಾಪತ್ತೆ, ನಮಗೆ ತಾಯಿ ಬೇಡ ಎಂದ ಮಕ್ಕಳು?

ಸೋಷಿಯಲ್ ಮಿಡಿಯಾ ಮೂಲಕ ಪರಿಚಯವಾಗಿ, ಪರಿಚಯ ಪ್ರೀತಿಯಾಗಿ ಭಾರತದಿಂದ ಪಾಕಿಸ್ತಾನಕ್ಕೆ ತೆರಳಿ ಅಂಜು ಎಂಬಾಕೆ ಮದುವೆಯಾಗಿದ್ದ ವಿಚಾರ ತಿಳಿದೇ ಇದೆ. ಇದೀಗ ಆಕೆ ಭಾರತಕ್ಕೆ ತನ್ನ ಮಕ್ಕಳಿಗಾಗಿ ವಾಪಸ್ಸಾಗಿದ್ದಾರೆ. ಆದರೆ ಆಕೆಯ ಮಕ್ಕಳು ನಮಗೆ…

ಸೋಷಿಯಲ್ ಮಿಡಿಯಾ ಮೂಲಕ ಪರಿಚಯವಾಗಿ, ಪರಿಚಯ ಪ್ರೀತಿಯಾಗಿ ಭಾರತದಿಂದ ಪಾಕಿಸ್ತಾನಕ್ಕೆ ತೆರಳಿ ಅಂಜು ಎಂಬಾಕೆ ಮದುವೆಯಾಗಿದ್ದ ವಿಚಾರ ತಿಳಿದೇ ಇದೆ. ಇದೀಗ ಆಕೆ ಭಾರತಕ್ಕೆ ತನ್ನ ಮಕ್ಕಳಿಗಾಗಿ ವಾಪಸ್ಸಾಗಿದ್ದಾರೆ. ಆದರೆ ಆಕೆಯ ಮಕ್ಕಳು ನಮಗೆ ತಾಯಿ ಬೇಡ ಆಕೆಯನ್ನು ನಮ್ಮ ಬಳಿಕೆ ಕಳುಹಿಸಬೇಡಿ ಎಂದು ನಿರಾಕರಸಿದ್ದಾರೆ ಎಂದು ಹೇಳಲಾಗುತ್ತಿದೆ.

ಸುಮಾರು ಐದು ತಿಂಗಳ ಹಿಂದೆಯಷ್ಟೆ ತನ್ನ ಫೇಸ್ ಬುಕ್ ಸ್ನೇಹಿತನನ್ನು ಭೇಟಿ ಮಾಡಲು ಪಾಕಿಸ್ತಾನಕ್ಕೆ ಹೋಗಿದ್ದ ವಿವಾಹಿತ ಮಹಿಳೆ ಅಂಜು ಸುದ್ದಿ ಇಡೀ ದೇಶದಾದ್ಯಂತ ಭಾರಿ ಚರ್ಚೆಯಾಗಿತ್ತು. ಪಾಕಿಸ್ತಾನಕ್ಕೆ ಭೇಟಿ ನೀಡಿದ ಬಳಿಕ ಆಕೆ ಇಸ್ಮಾಂ ಧರ್ಮಕ್ಕೆ ಮತಾಂತರಗೊಂಡು ಫಾತಿಮಾ ಎಂದು ಹೆಸರು ಬದಲಿಸಿಕೊಂಡು ಪಾಕಿಸ್ತಾನದ ಪ್ರಜೆ ನಸ್ರುಲ್ಲಾ ಎಂಬಾತನನ್ನು ಮದುವೆಯಾದರು. ಅಂಜು ಹಾಗೂ ನಸ್ರುಲ್ಲಾ ಹಾಗೂ ಆತನ ಕುಟುಂಬಸ್ಥರು ಪೊಲೀಸ್ ಹಾಗೂ ವಕೀಲರ ಸಮ್ಮುಖದಲ್ಲಿ ದಿರ್‍ ಬಾಲಾ ಎಂಬಲ್ಲಿರುವ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿ ಮದುವೆಯಾಗಿದ್ದರು ಎನ್ನಲಾಗಿತ್ತು. ಈ ಸುದ್ದಿ ಭಾರಿ ಕೋಲಾಹಲ ಸಹ ಸೃಷ್ಟಿಸಿತ್ತು. ಒಂದು ವಾರದಲ್ಲಿ ಮರಳಿ ಬರುತ್ತೇನೆ ಎಂದು ಹೇಳಿದ್ದ ಆಕೆ ನಸ್ರುಲ್ಲಾನನ್ನು ಮದುವೆಯಾದರು. ಇದೀಗ ಆಕೆ ತನ್ನ ಮಕ್ಕಳನ್ನು ನೋಡಲು ಭಾರತಕ್ಕೆ ವಾಪಾಸ್ಸಾಗಿದ್ದಾರೆ ಎನ್ನಲಾಗಿದೆ.

ರಾಜಸ್ಥಾನದ ಭಿವಾಡಿಯ ವಾಸಿಯಾಗಿದ್ದ ಅಂಜು ಮಕ್ಕಳನ್ನು ನೋಡಲು ವಾಪಸ್ಸಾಗಿದ್ದಾಳೆ. ಆದರೆ ದೆಹಲಿ ವಿಮಾನ ನಿಲ್ದಾಣದಿಂದ ಬಂದಂತಹ ಅಂಜು ನಾಪತ್ತೆಯಾಗಿದ್ದಾಳೆ. ಆಕೆ ಮಕ್ಕಳ ಬಳಿಗೂ ಹೋಗಿಲ್ಲ, ತಂದೆಯ ಮನೆಗೂ ಹೋಗಿಲ್ಲ. ಸದ್ಯ ಅಂಜು ಎಲ್ಲಿ ಹೋದಳು ಎಂಬ ಪ್ರಶ್ನೆ ಎದುರಾಗಿದೆ. ಇನ್ನೂ ಆಕೆಯ ಮಕ್ಕಳು ಹಾಗೂ ಪತಿ ಅರವಿಂದ್ ತಮ್ಮನ್ನು ಭೇಟಿಯಾಗಲು ಅಂಜುಗೆ ಅವಕಾಶ ನೀಡಬಾರದೆಂದು ತಿಳಿಸಿದ್ದಾರಂತೆ. ಅಂಜುಳನ್ನು ಭಿವಾಡಿಯ ಸೊಸೈಟಿಗೆ ಬರಲು ಬಿಡಬೇಡಿ ಎಂದು ಅಂಜು ಮಕ್ಕಳು ಕೇಳಿಕೊಂಡಿದ್ದಾರಂತೆ. ಈ ಹಿನ್ನೆಲೆಯಲ್ಲಿ ಸೊಸೈಟಿ ಗೇಟ್ ಬಳಿ ಭದ್ರತಾ ವ್ಯವಸ್ಥೆಯನ್ನು ಸಹ ಹೆಚ್ಚಿಸಲಾಗಿದೆ. ಜೊತೆಗೆ ಅರವಿಂದ್ ಪ್ಲಾಟ್ ಗೆ ಯಾರಿಗೂ ಪ್ರವೇಶ ನೀಡುತ್ತಿಲ್ಲ. ಸೊಸೈಟಿಗೆ ಬರುವಂತಹ ಪ್ರತಿಯೊಂದು ವಾಹವನ್ನು ತಪಾಸಣೆ ನಡೆಸಿ, ಜನರನ್ನು ಪ್ರಶ್ನೆ ಮಾಡಿದ ಬಳಿಕ ಸೊಸೈಟಿಗೆ ಬಿಡಲಾಗುತ್ತಿದೆ ಎನ್ನಲಾಗಿದೆ.

ಮೂಲಗಳ ಪ್ರಕಾರ ಅಂಜು ಭಾರತಕ್ಕೆ ಬರಲು ಕೇವಲ ಒಂದು ತಿಂಗಳ NOC ಮಾತ್ರ ಪಡೆದುಕೊಂಡಿದ್ದು, ವಿಚ್ಚೇದನ ಪಡೆದುಕೊಂಡ ಬಳಿಕವಷ್ಟೆ ಮಕ್ಕಳ ಪಾಲನೆಯನ್ನು ಪಡೆಯಬಹುದಾಗಿದೆ ಎನ್ನಲಾಗುತ್ತಿದೆ. ಇದೀಗ ಅಂಜು ದೆಹಲಿಗೆ ಬಂದ ಬಳಿಕ ನಾಪತ್ತೆಯಾಗಿದ್ದು, ದೇಶದ ಭದ್ರತಾ ಸಂಸ್ಥೆಗಳ ಆಕೆಯನ್ನು ವಿಚಾರಣೆ ನಡೆಸುತ್ತಿದ್ದಾರೆಯೇ ಎಂಬ ಪ್ರಶ್ನೆಗಳು ಕೇಳಿಬರುತ್ತಿದೆ.