Film News

ನನಗೆ ಪೂರ್ಣ ಜೊತೆಗೆ ಲವ್ ಅಫೈರ್ ಇದೆ ಎಂದ ನಿರ್ದೇಶಕ ರವಿಬಾಬು….!

ತೆಲುಗು ಸಿನಿರಂಗದ ಮಲ್ಟಿ ಟ್ಯಾಲೆಂಟೆಡ್ ನಿರ್ದೇಶಕ ರವಿಬಾಬು ಸಸ್ಪೆನ್ಸ್ ಹಾಗೂ ಥ್ರಿಲ್ಲರ್‍ ಸಿನೆಮಾಗಳನ್ನು ತೆಗೆಯುವುದರಲ್ಲಿ ನಿಸ್ಸೀಮರು. ಅನೇಕ ಸಸ್ಪೆನ್ಸ್, ಹಾರರ್‍ ಹಾಗೂ ಥ್ರಿಲ್ಲರ್‍ ಸಿನೆಮಾಗಳ ಮೂಲಕ ಭಾರಿ ಕ್ರೇಜ್ ಪಡೆದುಕೊಂಡಿದ್ದಾರೆ. ಇನ್ನೂ ಅವರು ತೆಗೆದ ಅನೇಕ ಸಿನೆಮಾಗಳಲ್ಲಿ ಪೂರ್ಣ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ರವಿಬಾಬು ಆಕೆಯೊಂದಿಗೆ ಬ್ಯಾಕ್ ಟು ಬ್ಯಾಕ್ ಸಿನೆಮಾಗಳು ಮಾಡಿದ ಹಿನ್ನೆಲೆಯಲ್ಲಿ ಅವರಿಬ್ಬರ ನಡುವೆ ಅಫೈರ್‍ ಇದೆ ಎಂಬ ರೂಮರ್‍ ಗಳು ಸಹ ಕೇಳಿಬಂದವು. ಇದೀಗ ರವಿಬಾಬು ಈ ರೂಮರ್‍ ಗಳ ಬಗ್ಗೆ ಮಾತನಾಡಿದ್ದಾರೆ.  ಅವರು ನೀಡಿದ ಹೇಳಿಕೆಗಳು ಇದೀಗ ವೈರಲ್ ಆಗುತ್ತಿವೆ.

ರವಿಬಾಬು ಹಾಗೂ ಪೂರ್ಣ ನಡುವೆ ಲವ್ ಅಫೈರ್‍ ಇದೆ ಎಂದು ಅನೇಕ ಬಾರಿ ರೂಮರ್‍ ಗಳು ಕೇಳಿಬರುತ್ತಲೇ ಇದೆ. ಅನೇಕ ಬಾರಿ ಅದೆಲ್ಲಾ ಕೇವಲ ರೂಮರ್‍ ಗಳು ಮಾತ್ರ ಎಂದು ರವಿಬಾಬು ತಳ್ಳಿ ಹಾಕಿದ್ದರು. ಇನ್ನೂ ಇದೀಗ ರವಿಬಾಬು ನಿರ್ದೇಶನದಲ್ಲಿ ತೆರೆಗೆ ಬಂದ ಅಸಲು ಎಂಬ ಸಿನೆಮಾದಲ್ಲೂ ಸಹ ನಟಿ ಪೂರ್ಣ ನಟಿಸಿದ್ದಾರೆ. ಈ ಸಿನೆಮಾ ಒಟಿಟಿ ಮೂಲಕ ಸ್ಟ್ಟೀಮಿಂಗ್ ಆಗುತ್ತಿದೆ. ಈ ಸಂಬಂಧ ನಿರ್ದೇಶಕ ರವಿಬಾಬು ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದು, ಪೂರ್ಣ ಜೊತೆಗಿನ ರಿಲೇಷನ್ ಶಿಪ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.  ಈ ವೇಳೆ ಮಾತನಾಡಿದ ಅವರು ಪೂರ್ಣ ಜೊತೆಗೆ ನನಗೆ ಲವ್ ಅಫೈರ್‍ ಇದೆ. ಆ ರೀತಿ ನಾನು ಹೇಳಿದ ಕೂಡಲೇ ನೀವು ಬೇರೆ ರೀತಿ ಅಂದುಕೊಳ್ಳಬೇಡಿ. ಪ್ರತಿಯೊಬ್ಬ ನಿರ್ದೇಶಕ ಹಾಗೂ ನಟಿ-ನಟರೊಂದಿಗೆ ಅಂತಹ ಅನುಬಂಧವೇ ಇರುತ್ತದೆ ಎಂದಿದ್ದಾರೆ.

ನಿರ್ದೇಶಕ ಹೇಳಿದಕ್ಕಿಂತ ಪೂರ್ಣ ಡಬಲ್ ಆಗಿ ನಟಿಸುತ್ತಾರೆ. ನನ್ನ ಸಿನೆಮಾಗಳು ಎಂದ ಕೂಡಲೇ ಎಲ್ಲರಿಗೂ ಪೂರ್ಣ ನೆನಪಿಗೆ ಬರುತ್ತಾರೆ. ಆದರೆ ಆಕೆ ಕೆಲವೊಂದು ಸಿನೆಮಾಗಳನ್ನು ಮಾತ್ರ ಒಪ್ಪುತ್ತಾರೆ. ಈ ಹಿಂದೆ ನಾನು ವಾಷಿಂಗ್ ಮಿಷನ್ ಎಂಬ ಸಿನೆಮಾಗಾಗಿ ಆಕೆಯನ್ನು ಸಂಪರ್ಕ ಮಾಡಿದ್ದೆ. ಆಕೆ ಹಿಂದೆ ಮುಂದೆ ನೋಡದೇ ಮಾಡೊಲ್ಲ ಎಂದು ಹೇಳಿದ್ದರು. ತಾನು ಆ ಪಾತ್ರಕ್ಕೆ ಸರಿಹೋಗುತ್ತೇನೆ ಎಂದು ಕೊಂಡರೇ ಮಾತ್ರ ನಟಿಸುತ್ತಾರೆ. ನನಗಾಗಿ ಆಕೆ ಪ್ರತ್ಯೇಕವಾಗಿ ಒಪ್ಪುವುದಿಲ್ಲ. ಆ ರೀತಿಯಲ್ಲಿ ಒಪ್ಪುವುದು ಇಲ್ಲ. ಆಕೆಗೆ ಇಷ್ಟವಾದ ಸಿನೆಮಾಗಳಲ್ಲಿ ಮಾತ್ರ ಪೂರ್ಣ ನಟಿಸಿದ್ದಾರೆ ಎಂದು ಪೂರ್ಣ ಬಗ್ಗೆ ರವಿಬಾಬು ಹೇಳಿದ್ದಾರೆ.

ಇನ್ನೂ ರವಿಬಾಬು ರವರ ಅನಸೂಯ, ಅವುನು, ಅವುನು 2, ಲಡ್ಡು ಬಾಬು ಸಿನೆಮಾಗಳಲ್ಲಿ ಪೂರ್ಣ ನಟಿಸಿದ್ದಾರೆ. ಸದ್ಯ ನಟಿ ಪೂರ್ಣ ಸೆಕೆಂಡ್ ಇನ್ನಿಂಗ್ಸ್ ಸಹ ಶುರು ಮಾಡಿದು, ಅಖಂಡ, ದಸರಾ ಸೇರಿದಂತೆ ಅನೇಕ ಸಿನೆಮಾಗಳಲ್ಲಿ ನಟಿಸಿ ಒಳ್ಳೆಯ ಫೇಂ ಪಡೆದುಕೊಂಡಿದ್ದಾರೆ. ಇನ್ನೂ ಕೆಲವು ದಿನಗಳ ಹಿಂದೆಯಷ್ಟೆ ಆಕೆ ಮುದ್ದಾದ ಗಂಡು ಮಗುವಿಗೆ ಜನ್ಮ ಕೊಟ್ಟರು. ಸದ್ಯ ಆಕೆ ಮಾತೃತ್ವವನ್ನು ಎಂಜಾಯ್ ಮಾಡುತ್ತಿರುವುದಾಗಿ ಇತ್ತಿಚಿಗೆ ವಿಡಿಯೋ ಒಂದರ ಮೂಲಕ ಶೇರ್‍ ಮಾಡಿದ್ದರು.

Most Popular

To Top