Film News

ಬೆತ್ತಲೆಯಾಗಿ ಕಾಣಿಸಿಕೊಂಡ ಬಾಲಿವುಡ್ ನಟ ವಿದ್ಯುತ್ ಜಮ್ವಾಲ್, ನಿನ್ನಲ್ಲಿನ ಮೃಗ ಹೊರಬಂತು ಎಂದ ನಿರ್ದೆಶಕ ವರ್ಮಾ……!

ಕೆಲವು ದಿನಗಳ ಹಿಂದೆಯಷ್ಟೆ ಬಾಲಿವುಡ್ ಖ್ಯಾತ ನಟ ವಿದ್ಯುತ್ ಜಾಮ್ವಾಲ್ ಬೆತ್ತಲೆ ಪೊಟೋ ಹಂಚಿಕೊಂಡು ಭಾರಿ ಸುದ್ದಿಯಾಗಿದ್ದರು. ಹಿಂದಿ ಸಿನೆಮಾಗಳ ಮೂಲಕ ಭಾರಿ ಸದ್ದು ಮಾಡಿರುವಂತಹ ವಿದ್ಯುತ್ ಕಳೆದ ಡಿ.10 ರಂದು ತಮ್ಮ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡರು. ಅದೇ ದಿನ ಅವರು ತಮ್ಮ ಬೆತ್ತಲೆ ಪೊಟೋಗಳನ್ನು ಶೇರ್‍ ಮಾಡಿದ್ದರು. ಇದೀಗ ಆತನ ಪೊಟೋಗಳಿಗೆ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕಾಮೆಂಟ್ ಮಾಡಿದ್ದು, ಆತನ ಕಾಮೆಂಟ್ ವೈರಲ್ ಆಗುತ್ತಿದೆ.

ನಟ ವಿದ್ಯುತ್ ಜಾಮ್ವಾಲ್ ಹಿಂದಿ ಸಿನೆಮಾಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ತನ್ನದೇ ಆದ ರೀತಿಯಲ್ಲಿ ಫೇಂ ಪಡೆದುಕೊಂಡಿದ್ದಾರೆ. ಎರಡು ದಿನಗಳ ಹಿಂದೆಯಷ್ಟೆ ಅವರು ತಮ್ಮ 43ನೇ ಜನ್ಮದಿನವನ್ನು ಹಿಮಾಲಯದಲ್ಲಿ ಆಚರಿಸಿಕೊಂಡಿದ್ದಾರೆ. ಸಂಪೂರ್ಣವಾಗಿ ಬೆತ್ತಲೆಯಾಗಿ ನದಿಯಲ್ಲಿ ಮುಳುಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಈ ಪೊಟೋಗಳನ್ನು ಆತ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ಇನ್ನೂ ಆತ ಹಂಚಿಕೊಂಡ ಪೊಟೋಗಳು ಕಡಿಮೆ ಸಮಯದಲ್ಲೇ ಭಾರಿ ವೈರಲ್ ಆಗಿತ್ತು. ಅಭಿಮಾನಿಗಳು ನೆಟ್ಟಿಗರು ತಮ್ಮದೇ ಆದ ಶೈಲಿಯಲ್ಲಿ ವಿಭಿನ್ನ ಕಾಮೆಂಟ್ ಗಳನ್ನು ಸಹ ಮಾಡಿದ್ದರು. ಇದೀಗ ಸದಾ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗುವಂತಹ ರಾಮ್ ಗೋಪಾಲ್ ವರ್ಮಾ ತಮ್ಮ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಈ ಪೊಟೋಗಳನ್ನು ಹಂಚಿಕೊಂಡು ತನ್ನ ಸ್ಟೈಲ್ ನಲ್ಲೇ ರಿಯಾಕ್ಟ್ ಆಗಿದ್ದಾರೆ.

ಆರ್‍.ಜಿ.ವಿ ನಟ ವಿದ್ಯುತ್ ಜಾಮ್ವಾಲ್ ಪೊಟೋಗಳನ್ನು ಹಂಚಿಕೊಂಡು ಕಾಮೆಂಟ್ ಮಾಡಿದ್ದಾರೆ. ವಿದ್ಯುತ್ ಜಾಮ್ವಾಲ್ ರವರೇ ನೀವು ಸರಿಯಾದ ಸಮಯದಲ್ಲಿ ನಿಮ್ಮೊಳಗಿನ ಅನಿಮಲ್ ಹೊರಗೆ ತಂದಿದ್ದೀರಿ. ನೀವು ನಿಜವಾಗಿಯೂ ಗ್ರೀಕ್ ಗಾಡ್ ರಂತೆ ಕಾಣುತ್ತಿದ್ದೀರಾ. ನಿಮಗೆ ಮಿಲಿಯನ್ ಸೆಲ್ಯೂಟ್ ಎಂದು ಆರ್‍.ಜಿ.ವಿ ಪೋಸ್ಟ್ ಮಾಡಿದ್ದಾರೆ. ಇನ್ನೂ ರಣಬೀರ್‍ ಕಪೂರ್‍ ರವರ ಯಾನಿಮಲ್ ಸಿನೆಮಾ ಕಳೆದೆರಡು ದಿನಗಳ ಹಿಂದೆಯಷ್ಟೆ ತೆರೆಕಂಡಿದ್ದು, ಭಾರಿ ಹಿಟ್ ಪಡೆದುಕೊಂಡಿದೆ. ಇದೀಗ ಆ ಸಿನೆಮಾದ ಹೆಸರು ಬರುವಂತೆ ವರ್ಮಾ ವಿದ್ವಾಲ್ ಪೊಟೋಗಳಿಗೆ ಕಾಮೆಂಟ್ ಮಾಡಿದ್ದು, ಪೊಟೋ ಮತಷ್ಟು ವೈರಲ್ ಆಗುತ್ತಿದೆ. ಇನ್ನೂ ವಿದ್ಯುತ್ ಜಾಮ್ವಾಲ್ ಪೊಟೋಗಳು ಕಡಿಮೆ ಸಮಯದಲ್ಲೇ ವೈರಲ್ ಆಗಿದೆ. ಸಾವಿರಾರು ಕಾಮೆಂಟ್ ಗಳು, ಲಕ್ಷಗಟ್ಟಲೇ ಲೈಕ್ ಗಳು ಹರಿದುಬಂದಿದೆ. ಈ ಹಿಂದೆ ರಣಬೀರ್‍ ಕಪೂರ್‍ ಸಹ ಬೆತ್ತಲೆಯಾಗಿ ಪೊಟೋಶೂಟ್ಸ್ ಮಾಡಿಸಿದಾಗ ಭಾರಿ ವಿವಾದ ಸೃಷ್ಟಿಸಿತ್ತು. ಇದೀಗ ವಿದ್ಯುತ್ ಜಾಮ್ವಾಲ್ ಪೊಟೋಗಳಿಗೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

Most Popular

To Top