Film News

ಹುಟ್ಟುಹಬ್ಬದಂದು ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿದ ಸೂಪರ್ ಸ್ಟಾರ್ ರಜನಿಕಾಂತ್, ಸಂತ್ರಸ್ತರ ಪಾಲಿಗೆ ದೇವರಾದ ತಲೈವಾ….!

ಸೌತ್ ಸಿನಿರಂಗದ ಸ್ಟಾರ್‍ ನಟ ಸೂಪರ್‍ ಸ್ಟಾರ್‍ ರಜನಿಕಾಂತ್ ರವರು ಡಿ.12 ರಂದು ತಮ್ಮ 73ನೇ ಜನ್ಮದಿನಾಚರಣೆಯನ್ನು ಆಚರಿಸಿಕೊಂಡರು. ಅವರ ಹುಟ್ಟುಹಬ್ಬದಂದು ಅಭಿಮಾನಿಗಳು, ಸೆಲೆಬ್ರೆಟಿಗಳು ಸೇರಿದಂತೆ ಅನೇಕರು ಶುಭಾಷಯಗಳನ್ನು ಕೋರಿದ್ದರು. ತಮ್ಮ ಹುಟ್ಟುಹಬ್ಬದ ಅಂಗವಾಗಿ ರಜನಿಕಾಂತ್ ರವರು ಮೈಚಾಂಗ್ ಚಂಡಮಾರುತದ ದಾಳಿಗೆ ತುತ್ತಾಗಿದ್ದ ಸಂತ್ರಸ್ತರಿಗೆ ಸಹಾಯಹಸ್ತ ನೀಡಿದ್ದಾರೆ. 15ಕ್ಕೂ ಹೆಚ್ಚು ಟ್ರಕ್ ಗಳಲ್ಲಿ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿಕೊಟ್ಟಿದ್ದಾರೆ.

ತಲೈವಾ ರಜನಿಕಾಂತ್ ರವರು ಸ್ವಂತ ಪ್ರತಿಭೆಯಿಂದ ಸೂಪರ್‍ ಸ್ಟಾರ್‍ ಆದವರು. ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್‍ ಆಗಿ ಕೆರಿಯರ್‍ ಆರಂಭಿಸಿದ ರಜನಿಕಾಂತ್ ರವರು ಸಿನೆಮಾಗಳ ಮೇಲಿನ ಆಸೆಯಿಂದ ಚೆನೈಗೆ ತಲುಪಿ ಅಲ್ಲಿ ಸಿನೆಮಾಗಳಲ್ಲಿ ನಟಿಸಲು ಶುರು ಮಾಡಿದರು. ಬಳಿಕ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ನಟಿಸುತ್ತಾ ಸ್ಟಾರ್‍ ಡಂ ಗಿಟ್ಟಿಸಿಕೊಂಡರು. ಇನ್ನೂ ರಜನಿಕಾಂತ್ ರವರು ಕಳೆದೆರಡು ದಿನಗಳ ಹಿಂದೆಯಷ್ಟೆ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಮತಷ್ಟು ವಿಶೇಷವಾಗಿಸಿದ್ದಾರೆ. ಇತ್ತಿಚಿಗೆ ಮೈಚಾಂಗ್ ಚಂಡಮಾರುತ ಅಬ್ಬರಿಸಿದ ವಿಚಾರ ತಿಳಿದೇ ಇದೆ. ಈ ಚಂಡಮಾರುತದ ಕಾರಣದಿಂದ ಚೆನೈ ಜಲಾವೃತವಾಗಿತ್ತು. ತಮಿಳುನಾಡಿದ ಅನೇಕ ಕಡೆ ನೀರು ಆವರಿಸಿಕೊಂಡು ಜನಜೀವನ ಅಸ್ತವ್ಯಸ್ಥವಾಗಿತ್ತು. ರಜನಿಕಾಂತ್ ರವರ ಮನೆ ಸಹ ನೀರಿನಿಂದ ಆವೃತವಾಗಿತ್ತು. ಆದರೆ ಆ ಸಮಯದಲ್ಲಿ ಅವರು ಶೂಟಿಂಗ್ ನಲ್ಲಿದ್ದರು ಎನ್ನಲಾಗಿತ್ತು.

ಇನ್ನೂ ಮೈಚಾಂಗ್ ಚಂಡಮಾರುತದಿಂದ ನಾಲ್ಕು ಜಿಲ್ಲೆಗಳು ತುಂಬಾ ಸಮಸ್ಯೆಗೆ ಸಿಲುಕಿತ್ತು. ಚೆನೈ. ತಿರುವಳ್ಳೂರು, ಕಾಂಚೀಪುರಂ, ಚೆಂಗಲ್ಪಟ್ಟು ಎಂಬ ನಾಲ್ಕು ಜಿಲ್ಲೆಗಳಲ್ಲಿ ಚಂಡಮಾರುತದ ಅಬ್ಬರಕ್ಕೆ ಜನ ಜೀವನ ಅಸ್ತವ್ಯಸ್ಥವಾಗಿತ್ತು. ಜನರು ನೀರು ಆಹಾರವಿಲ್ಲದೇ ಪರದಾಡುವಂತಾಗಿತ್ತು. ಚೆನೈ ಸಂಪೂರ್ಣ ನೀರಿನಿಂದ ಆವೃತವಾಗಿತ್ತು. ಇದೀಗ ಸಂತ್ರಸ್ತ ಪ್ರದೇಶಗಳಿಗೆ ನಟ ರಜನಿಕಾಂತ್ ರವರ ಫೌಂಡೇಷನ್ ಮೂಲಕ ಸುಮಾರು 15 ಕ್ಕೂ ಹೆಚ್ಚು ಟ್ರಕ್ ಗಳಲ್ಲಿ 20 ಕ್ಕೂ ಹೆಚ್ಚು ಪರಿಹಾರ ಸಾಮಾಗ್ರಿಗಳನ್ನು ಜಿಲ್ಲೆಗಳಿಗೆ ರವಾನಿಸುತ್ತಿದ್ದಾರೆ. ಜನರಿಗೆ ಅಗತ್ಯವಾಗಿ ಬೇಕಾಗಿರುವಂತಹ ಅಕ್ಕಿ, ರವೆ, ಎಣ್ಣೆ, ಗೋಧಿ, ಚಾಪೆ, ಬೆಡ್ ಶೀಟ್ ಸೇರಿದಂತೆ ಅಗತ್ಯ ವಸ್ತುಗಳನ್ನು ಕಳುಹಿಸಲಾಗಿದೆ. ರಾಘವೇಂದ್ರ ಮಂಟಪದಿಂದ ಈ ಪರಿಹಾರ ಸಾಮಾಗ್ರಿಗಳನ್ನು ಟ್ರಕ್, ಟೆಂಪೊ, ಮಿನಿ ಡೋರ್‍ ಮೂಲಕ ಕಳುಹಿಸಲಾಗುತ್ತಿದೆ.

ಇನ್ನೂ ರಜನಿಕಾಂತ್ ರವರು ಮಾಡಿದ ಈ ಕಾರ್ಯಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಜನಿಕಾಂತ್ ರವರ ಮಾದರಿಯಲ್ಲೇ ತಮಿಳಿನ ಅನೇಕ ನಟರು ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಿದ್ದಾರೆ. ಇನ್ನೂ ರಜನಿಕಾಂತ್ ರವರು ಕೊನೆಯದಾಗಿ ಜೈಲರ್‍ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಭಾರಿ ಕಲೆಕ್ಷನ್ ಮಾಡಿದೆ.

Most Popular

To Top