ರಾಯನ್ ಸರ್ಜಾ ಹಾಗೂ ಧ್ರುವ ಸರ್ಜಾ ಕರಾಬು ಹಾಡಿನ ಡ್ಯಾನ್ಸ್ ವಿಡಿಯೋ ವೈರಲ್…..!

Follow Us :

ಕನ್ನಡ ಸಿನಿರಂಗದ ಯುವ ನಟ ಚಿರು ಸರ್ಜಾ ಇಹಲೋಕ ತ್ಯೆಜಿಸಿ ಕೆಲವು ವರ್ಷಗಳು ಕಳೆದಿದ್ದು, ಅವರನ್ನು ಇಂದಿಗೂ ಸಹ ಚಿತ್ರರಂಗ ಮರೆತಿಲ್ಲ. ಧ್ರುವ ಹಾಗೂ ಚಿರು ಸರ್ಜಾ ಇಬ್ಬರು ಅಣ್ಣ ತಮ್ಮ ಎನ್ನುವುದಕ್ಕಿಂತ ಒಳ್ಳೆಯ ಸ್ನೇಹಿತರಾಗಿದ್ದರು ಎಂದರೇ ತಪ್ಪಾಗಲಾರದು. ಅನೇಕ ಬಾರಿ ಚಿರು ನಿಧನದ ಬಗ್ಗೆ ಹಾಗೂ ಅವನೊಂದಿಗಿನ ನೆನಪುಗಳ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ಇದೀಗ ಚಿರು ಹಾಗೂ ಮೇಘನಾ ಸರ್ಜಾರವರ ಪುತ್ರ ರಾಯನ್ ಜೊತೆಗೆ ಧ್ರುವ ಸರ್ಜಾ ಕರಾಬು ಹಾಡಿಗೆ ಹೆಜ್ಜೆ ಹಾಕಿದ್ದು, ವಿಡಿಯೋ ವೈರಲ್ ಆಗಿದೆ.

ದಿವಂಗತ ನಟ ಚಿರು ಸರ್ಜಾ ಹಾಗೂ ಮೇಘನಾ ರಾಜ್ ರವರ ಮಗ ರಾಯನ್ ಸರ್ಜಾ ಎಂದರೇ ಧ್ರುವ ಸರ್ಜಾಗೆ ತುಂಬಾನೆ ಪ್ರೀತಿ ಅದೇ ರೀತಿ ಧ್ರುವ ರವರನ್ನು ಕಂಡರೂ ರಾಯನ್ ಗೆ ತುಂಬಾನೆ ಇಷ್ಟ. ಇನ್ನೂ ಶೂಟಿಂಗ್ ನಿಂದ ಸಮಯ ಸಿಕ್ಕಾಗಲೆಲ್ಲಾ ಧ್ರುವ ಹಾಗೂ ರಾಯನ್ ಸರ್ಜಾ ಒಟ್ಟಿಗೆ ಸಮಯ ಕಳೆಯುತ್ತಿರುತ್ತಾರೆ. ಇದೀಗ ಧ್ರುವ ಸರ್ಜಾ ತಮ್ಮ ಸಿನೆಮಾದ ಕರಾಬು ಹಾಡಿಗೆ ರಾಯನ್ ಗೆ ಸ್ಟೆಪ್ಸ್ ಹಾಕುವುದನ್ನು ಹೇಳಿಕೊಟ್ಟಿದ್ದಾರೆ. ರಾಯನ್ ಜೊತೆಗೆ ಮಗುವಿನಂತೆ ಧ್ರುವ ಸಹ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋದಲ್ಲಿ ರಾಯನ್ ತುಂಬಾ ಕ್ಯೂಟ್ ಆಗಿ ಹೆಜ್ಜೆ ಹಾಕಿದ್ದಾನೆ. ರಾಯನ್ ತಾತ ನಟ ಸುಂದರ್‍ ರಾಜ್ ಸಹ ಇದ್ದು, ಮೊಮ್ಮಗನ ನೃತ್ಯ ಕಂಡು ಪುಲ್ ಖುಷಿಯಾಗಿದ್ದಾರೆ. ಇನ್ನೂ ಈ ವಿಡಿಯೋ ವನ್ನು ಧ್ರುವ ಸರ್ಜಾ ಹುಟ್ಟುಹಬ್ಬದ ನಿಮಿತ್ತ ಮೇಘನಾ ರಾಜ್ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನೂ ರಾಯನ್ ಸರ್ಜಾ ತಮ್ಮ ಚಿಕ್ಕಪ್ಪನ ಹುಟ್ಟುಹಬ್ಬಕ್ಕೆ ಸ್ಪೇಷಲ್ ಆಗಿ ಶುಭಾಷಯ ಸಹ ಕೋರಿದ್ದಾರೆ. ಇನ್ನೂ ಅ.6 ರಂದು ಚಿರು ಸರ್ಜಾ ಅಭಿನಯದ ಕೊನೆಯ ಸಿನೆಮಾ ರಾಜಮಾರ್ತಾಂಡ ಸಿನೆಮಾ ಬಿಡುಗಡೆಯಾಗಿದೆ. ಈ ಸಿನೆಮಾ ಕಾರ್ಯಕ್ರಮವೂ ಸಹ ದೊಡ್ಡ ಮಟ್ಟದಲ್ಲೇ ನಡೆಯಿತು. ಸಿನೆಮಾ ಬಿಡುಗಡೆಯ ಅಂಗವಾಗಿ ಚಿತ್ರತಂಡ ವಿಶೇಷ ಪೂಜೆ ಸಹ ಸಲ್ಲಿಸಿತ್ತು. ಇನ್ನೂ ರಾಯನ್ ಸರ್ಜಾ ಕಟೌಟ್ ಸಹ ಚಿರು ಸರ್ಜಾ ಕಟೌಟ್ ಪಕ್ಕದಲ್ಲಿ ಹಾಕಲಾಗಿತ್ತು. ಸಿನೆಮಾ ನೋಡಿದ ಮೇಘನಾ ಸರ್ಜಾ ಸಹ ಭಾವುಕರಾಗಿದ್ದರು. ಸದ್ಯ ಮೇಘನಾ ಸರ್ಜಾ ಕುಟುಂಬದ ನಿರ್ವಹಣೆಯ ಜೊತೆಗೆ ಸಿನೆಮಾಗಳಲ್ಲಿ ನಟಿಸುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ.