ಪ್ರೇಯಸಿ ಮಾಡಿದ ಮೋಸಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಆಟೋ ಚಾಲಕ….!

Follow Us :

ಸುಮಾರು ದಿನಗಳ ಕಾಲ ಪ್ರೇಮ ಪಯಣ ಸಾಗಿಸಿದ ಜೋಡಿಯಲ್ಲಿ ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ನಡೆದಿದೆ. ಅಂತಹುದೇ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಸುಮಾರು ದಿನಗಳಿಂದ ಪ್ರೀತಿ ಮಾಡುತ್ತಿದ್ದ ತನ್ನ ಪ್ರೇಯಸಿ ಆತನನ್ನು ದೂರ ಮಾಡಿದ್ದರಿಂದ ಮನನೊಂದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಬೆಂಗಳೂರಿನ ಕುಡುಬರಹಳ್ಳಿಯ ಜೆ.ಸಿ.ನಗರದ ನಿವಾಸಿ ಯೋಗೇಶ್ (25) ಎಂಬಾತನೇ ಆತ್ಮಹತ್ಯೆಗೆ ಶರಣಾದ ಯುವಕ. ಕಳೆದ ಅ.5 ರಂದು ಯುವಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ, ಬಳಿಕ ಪೋಷಕರು ಆತನನ್ನು ಆಸ್ಪತ್ರೆಗೆ ಸೇರಿಸಿದ್ದರು. ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಯುವಕ ನಿನ್ನೆಯಷ್ಟೆ ಇಹಲೋಕ ತ್ಯೆಜಿಸಿದ್ದಾನೆ ಎಂದು ತಿಳಿದುಬಂದಿದೆ. ಮೃತ ದುರ್ದೈವಿ ನಾಗೇಶ್ ಮೂಲತಃ ನಾಗಮಂಗಲದ ಆಡೇನಹಳ್ಳಿ ಗ್ರಾಮದ ನಿವಾಸಿಯಾಗಿದ್ದಾನೆ. ನಗರದಲ್ಲಿ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ. ನಾಗಮಂಗಲದ ಯುವತಿಯೊಬ್ಬಳನ್ನು ಕಳೆದ ನಾಲ್ಕು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದನಂತೆ. ಇಬ್ಬರೂ ಪರಸ್ಪರ ಪ್ರೀತಿ ಮಾಡಿಕೊಂಡಿದ್ದಾರೆ. ಆದರೆ ಕೆಲವು ದಿನಗಳಿಂದ ಯೋಗೇಶ್ ನಿಂದ ಆ ಯುವತಿ ದೂರವಾಗಿದ್ದಳಂತೆ. ಆದ್ದರಿಂದ ಮನನೊಂದ ಯೋಗೇಶ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಕ್ಕೆ ಯತ್ನಿಸಿದ್ದು, ಈ ಸಂಬಂಧ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ ಎನ್ನಲಾಗಿದೆ.

ಇನ್ನೂ ಮೃತ ಯುವಕ ಯೋಗೇಶ್ ಐದು ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದಾರೆ. ನಾನು ಇಷ್ಟು ವರ್ಷ ಪ್ರೀತಿಸಿದರೂ ನನ್ನ ಬಿಡಲು ಒಂದು ಕಾರಣವನ್ನು ಹೇಳದೇ ಬೇರೆಯವರನ್ನು ಮದುವೆ ಆಗಲು ಸಿದ್ದಳಾಗಿದ್ದಾಳೆ. ಅವಳನ್ನು ತಾನು ಮದುವೆಯಾಗುವುದಾಗಿ ಹೇಳಿದರೂ ಕೇಳಲೇ ಇಲ್ಲ. ಮೊಬೈಲ್ ನಂಬರ್‍ ಗಳನ್ನು ಬ್ಲಾಕ್ ಮಾಡಿದ್ದಾಳೆ. ಪೋನ್ ಕಾಲ್ ಮಾಡದೇ, ಭೇಟಿಯಾಗಲೂ ಸಹ ಸಿಗದೇ ನನ್ನಿಂದ ದೂರವಾದ ಕಾರಣ ನಾನು ಯಾರಿಗೂ ಸಿಗದೇ ದೂರ ಹೋಗುತ್ತಿದ್ದೇನೆ. ನನ್ನ ಸಾವಿಗೆ ಅವಳೇ ಕಾರಣ ಎಂದು ನೋಟ್ ಬರೆದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.