Film News

ಮದುವೆಯಾದ ಹಿರೋ ನನ್ನ ಕನಸಿನ ರಾಜ ಎಂದ ಸ್ಟಾರ್ ನಟಿ ಶ್ರೀಲೀಲಾ, ಆತ ಯಾರು ಗೊತ್ತಾ?

ಕನ್ನಡ ಮೂಲದ ಯಂಗ್ ನಟಿ ಶ್ರೀಲೀಲಾ ಸದ್ಯ ತೆಲುಗು ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಪೆಳ್ಳಿಸಂದD ಎಂಬ ತೆಲುಗು ಸಿನೆಮಾದ ಮೂಲಕ ಟಾಲಿವುಡ್ ರಂಗಕ್ಕೆ ಎಂಟ್ರಿ ಕೊಟ್ಟ ಶ್ರೀಲೀಲಾ ಇತ್ತೀಚಿಗೆ ತೆರೆಕಂಡ ಧಮಕಾ ಸಿನೆಮಾದ ಮೂಲಕ ಭರ್ಜರಿ ಹಿಟ್ ಪಡೆದುಕೊಂಡರು. ಭಾರಿ ಪ್ರಾಜೆಕ್ಟ್ ಗಳಲ್ಲಿ ಅವಕಾಶಗಳನ್ನು ಪಡೆದುಕೊಳ್ಳುತ್ತಾ ಅನೇಕ ನಟಿಯರಿಗೆ ಪೈಪೋಟಿಯಾಗಿದ್ದಾರೆ. ಇದೀಗ ಮದುವೆಯಾದ ಹಿರೋ ಒಬ್ಬರನ್ನು ಆಕೆ ತನ್ನ ಕನಸಿನ ರಾಜ ಎಂದು ಕರೆದಿದ್ದು, ಆಕೆಯ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ಸದ್ಯ ಕನ್ನಡ ನಟಿ ಶ್ರೀಲೀಲಾ ಹೆಸರು ತೆಲುಗಿನಲ್ಲಿ ಜೋರಾಗಿಯೇ ಕೇಳಿಬರುತ್ತಿದೆ. ಸ್ಟಾರ್‍ ನಟರ ಸಿನೆಮಾಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾ ಸ್ಟಾರ್‍ ನಟಿಯರಿಗೆ ಪೈಪೋಟಿಯಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಆಕೆ ಕೊನೆಯದಾಗಿ ಧಮಾಕಾ ಎಂಬ ಸಿನೆಮಾದಲ್ಲಿ ಮಾಸ್ ಮಹಾರಾಜ ರವಿತೇಜ ಜೊತೆಗೆ ನಟಿಸಿದ್ದರು. ಈ ಸಿನೆಮಾದಲ್ಲಿ ಆಕೆ ತುಂಬಾ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದು, ಆಕೆಯ ಗ್ಲಾಮರ್‍ ಹಾಗೂ ನಟನಗೆ ಅನೇಕರು ಫಿದಾ ಆಗಿದ್ದರು. ಬಳಿಕ ಆಕೆ ಸಿಕ್ಕಾಪಟ್ಟೆ ಕ್ರೇಜ್ ಪಡೆದುಕೊಂಡರು. ಅನೇಕ ಸಿನೆಮಾಗಳಲ್ಲಿ ನಟಿಸುವ ಮೂಲಕ ಪುಲ್ ಬ್ಯುಸಿಯಾಗಿದ್ದಾರೆ. ಇದೀಗ ಸಿನೆಮಾ ಒಂದರ ಕಾರ್ಯಕ್ರಮವೊಂದರಲ್ಲಿ ಆಕೆ ನೀಡಿದ ಹೇಳಿಕೆಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ.

ಸಿತಾರಾ ಎಂಟರ್‍ ಟ್ರೈನ್ ಮೆಂಟ್ ಬ್ಯಾನರ್‍ ನಡಿ ನಾಗವಂಶಿ ನಿರ್ಮಾಣದ ಮ್ಯಾಡ್ ಎಂಬ ಸಿನೆಮಾದ ಫ್ರೀ ರಿಲೀಸ್ ಈವೆಂಟ್ ನಲ್ಲಿ ಶ್ರೀಲಿಲಾ ಸಹ ಹಾಜರಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಶ್ರೀಲೀಲಾ ಮಾಡಿದ ಕಾಮೆಂಟ್ ಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಮ್ಯಾಡ್ ಸಿನೆಮಾದಲ್ಲಿ ಶ್ರೀಲೀಲಾ ಜೊತೆಗೆ ದುಲ್ಕರ್‍ ಸಲ್ಮಾನ್ ಸಹ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ದುಲ್ಕರ್‍ ಸಲ್ಮಾನ್ ಬಗ್ಗೆ ಶ್ರೀಲೀಲಾ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದು, ಅವು ವೈರಲ್ ಆಗಿದೆ. ಶ್ರೀಲೀಲಾ ಮಾತನಾಡುತ್ತಾ ಸರ್‍ ನೀವು ಈ ಕಾರ್ಯಕ್ರಮಕ್ಕೆ ಬರುತ್ತಿರುವುದು ತಿಳಿಯುತ್ತಿದ್ದಂತೆ ನನಗಿಂತ ನಮ್ಮ ತಾಯಿ ತುಂಬಾನೆ ಖುಷಿ ಪಟ್ಟರು. ಆಕೆ ನಿಮಗೆ ದೊಡ್ಡ ಅಭಿಮಾನಿ, ನಿಮ್ಮನ್ನು ಕೇಳಿದೆ ಎಂದು ಹೇಳು ಎಂದು ಹೇಳೀದ್ದಾರೆ ಎಂದರು.

ಮುಂದುವರೆದು ನನಗೆ ಚಿಕ್ಕಂದಿನಿಂದ ಒಂದು ಕನಸು ಬರುತ್ತಿತ್ತು. ನಮ್ಮ ಅಜ್ಜಿ ಹೇಳಿದ ಕಥೆಗಳನ್ನು ಕೇಳಿದಾಗ ಕುದುರೆ ಏರಿ ರಾಜಕುಮಾರನ್ನು ಊಹೆ ಮಾಡಿಕೊಳ್ಳುತ್ತಿದೆ. ಬಳಿಕ ನಾನು ಯಾವಾಗ ನಿಮ್ಮ ಹಿರಾಯಿ ಎಂಬ ಹಾಡು ನೋಡಿದೆನೋ ಅಂದೇ ನನ್ನ ಕನಸ್ಸಿನಲ್ಲಿ ಬರುವಂತಹ ರಾಜಕುಮಾರ್‍ ನೀವೆ ಎಂದು ಫಿಕ್ಸ್ ಆಗಿಬಿಟ್ಟೆ ಎಂದು ಕಾಮೆಂಟ್ ಮಾಡಿದ್ದಾರೆ. ಇಂದಿಗೂ ಸಹ ನೀವು ಆಗಾಗ ನನ್ನ ಕನಸಿನಲ್ಲಿ ಬರುತ್ತಿರಾ ಎಂದು ಹೇಳಿದ್ದಾರೆ. ಇನ್ನೂ ಶ್ರೀಲೀಲಾ ಈ ರೀತಿ ಹೇಳುತ್ತಿದ್ದಂತೆ ದುಲ್ಕರ್‍ ಸಹ ಕ್ಯೂಟ್ ಆಗಿ ನಕ್ಕಿದ್ದಾರೆ. ಇನ್ನೂ ಆಕೆಯ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

Most Popular

To Top