ಸಲಿಂಗ ಮದುವೆಯ ಬಗ್ಗೆ ವಿವಾದಾತ್ಮಕ ಕಾಮೆಂಟ್ ಮಾಡಿದ ಮಂಚು ಲಕ್ಷ್ಮೀ, ಆ ತೀರ್ಪು ದೇಶಕ್ಕೆ ನಾಚಿಕೆಗೇಡು ಎಂದ ನಟಿ…..!

Follow Us :

ಟಾಲಿವುಡ್ ಸಿನಿರಂಗದ ಮಂಚು ಕುಟುಂಬದ ಮಲ್ಟಿ ಟ್ಯಾಲೆಂಟೆಡ್ ಆಂಕರ್‍ ಕಂ ನಟಿ ಮಂಚು ಲಕ್ಷ್ಮೀ ಸೊಷಿಯಲ್ ಮಿಡಿಯಾದಲ್ಲಿ ಆಗಾಗ ಟ್ರೋಲ್ ಗಳಿಗೆ ಗುರಿಯಾಗುತ್ತಲೇ ಇರುತ್ತಾರೆ. ಆಕೆ ಮಾಡುವ ಕಾಮೆಂಟ್ ಗಳ ಕಾರಣದಿಂದ ದೊಡ್ಡ ಮಟ್ಟದಲ್ಲೇ ಟ್ರೋಲ್ ಎದುರಿಸುತ್ತಿರುತ್ತಾರೆ. ಅದರಲ್ಲೂ ಇತ್ತೀಚಿಗೆ ಆಕೆ ಬೋಲ್ಡ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ನಟಿ ಮಂಚು ಲಕ್ಷ್ಮೀ ಸಲಿಂಗ ಮದುವೆಯ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಕಾಮೆಂಟ್ ಮಾಡಿದ್ದು, ಅದು ವಿವಾದಕ್ಕೆ ಕಾರಣವಾಗಿದೆ. ಜೊತೆಗೆ ಆಕೆಯನ್ನು ಸಿಕ್ಕಾಪಟ್ಟೆ ಟ್ರೋಲ್ ಸಹ ಮಾಡುತ್ತಿದ್ದಾರೆ.

ಮಂಚು ಕುಟುಂಬದ ಮೋಹನ್ ಬಾಬು ರವರ ಏಕೈಕ ಪುತ್ರಿ ಮಂಚು ಲಕ್ಷ್ಮೀ ಸಹ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಆಕೆ ಸಹ ಅಷ್ಟೊಂದು ಸಕ್ಸಸ್ ಕಂಡುಕೊಳ್ಳಲಿಲ್ಲ. ಇನ್ನೂ ಮಂಚು ಲಕ್ಷ್ಮೀ ಸುಮಾರು ವರ್ಷಗಳ ಕಾಲ ಅಮೇರಿಕಾದಲ್ಲೇ ಇದ್ದರು. ಅಲ್ಲೇ ಕೆಲವೊಂದು ಟೆಲಿವಿಷನ್ ಶೋಗಳಿಗೆ ಹೋಸ್ಟ್ ಆಗಿದ್ದರು. ಜೊತೆಗೆ ಕೆಲವೊಂದು ಹಾಲಿವುಡ್ ಸಿನೆಮಾಗಳಲ್ಲೂ ಸಹ ನಟಿಸಿದ್ದರು. ಬಳಿಕ ಅದೇ ಕ್ರೇಜ್ ನಲ್ಲಿ ತೆಲುಗು ಭಾಷೆಯಲ್ಲಿ ಮನರಂಜನೆ ನೀಡಲು ಬಂದರು ಆದರೆ ಆಕೆಗೆ ಅದೂ ಸಹ ಕೂಡಿಬರಲಿಲ್ಲ. ನಟಿಯಾಗಬೇಕು ಎಂದುಕೊಂಡ ಹೈದರಾಬಾದ್ ಗೆ ಕಾಲಿಟ್ಟ ಮಂಚು ಲಕ್ಷ್ಮೀ ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿಯೂ ಸಹ ಕ್ರೇಜ್ ಪಡೆದುಕೊಳ್ಳಲು ವಿಫಲರಾದರು ಎನ್ನಬಹುದು. ಇದೀಗ ಮಂಚು ಲಕ್ಷ್ಮೀ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಬಗ್ಗೆ ಕಾಮೆಂಟ್ ಮಾಡಿದ್ದು, ಟ್ರೋಲ್ ಆಗುತ್ತಿದ್ದಾರೆ.

ಕಳೆದೆರಡು ದಿನಗಳ ಹಿಂದೆಯಷ್ಟೆ ಸುಪ್ರೀಂ ಕೋರ್ಟ್ ಸಲಿಂಗಿಗಳ ಮದುವೆಯ ಬಗ್ಗೆ ಮಹತ್ತರ ತೀರ್ಪು ನೀಡಿತ್ತು. ಸಲಿಂಗಿಗಳ ಮದುವೆಗೆ ಕಾನೂನು ಮಾನ್ಯತೆ ನೀಡಲು ಆಗುವುದಿಲ್ಲ ಎಂದು ಹೇಳಿತ್ತು. ಈ ಬಗ್ಗೆ ಸರ್ಕಾರ ನಿರ್ಣಯ ತೆಗೆದುಕೊಳ್ಳಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು. ಇದೀಗ ಈ ಬಗ್ಗೆ ಸುಪ್ರೀಂ ಕೋರ್ಟ್ ಮಂಚು ಲಕ್ಷ್ಮೀ ವಿವಾದಾತ್ಮಕವಾದ ಕಾಮೆಂಟ್ ಮಾಡಿ ಟ್ವೀಟ್ ಮಾಡಿದೆ. ಸುಪ್ರೀಂ ನಿರ್ಣಯ ಕೇಳಿ ಆಕೆಯ ಹೃದಯ ಬ್ಲಾಸ್ಟ್ ಆಗಿದೆಯಂತೆ. ಸುಪ್ರೀಂ ಕೋರ್ಟ್ ನಿರ್ಣಯ ದೇಶಕ್ಕೆ ನಾಚಿಕೇಗೇಡಿನ ತೀರ್ಪು. ಪ್ರೇಮ ಅಂದರೇ ಏನು ಎಂಬುದನ್ನು ಪ್ರಪಂಚಕ್ಕೆ ಸಾರಿ ಹೇಳಿದ್ದ ದೇಶ ಇದೀಗ ಸ್ವಲಿಂಗಿಗಳ ಬಗ್ಗೆ ನಿರ್ಣಯ ತೆಗೆದುಕೊಂಡಿದ್ದು, ಶೇಮ್ ಎಂದು ಹೇಳಿದ್ದಾರೆ.

ಇನ್ನೂ ಮಂಚು ಲಕ್ಷ್ಮೀ ಕಾಮೆಂಟ್ ಗಳ ಬಗ್ಗೆ ದೊಡ್ಡ ಮಟ್ಟದಲ್ಲೇ ಟ್ರೋಲಿಂಗ್ ಆಗುತ್ತಿದೆ. ಅನೇಕರು ತಮ್ಮದೇ ಆದ ಶೈಲಿಯಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಅದರಲ್ಲಿ ಕೆಲವರು ನಿನ್ನಂತಹವರು ಈ ದೇಶದಲ್ಲಿ ಇರುವುದು ನಾಚಿಕೆಗೇಡು. ನಮ್ಮ ಸಂಸ್ಕೃತಿ ಏನು ಎಂಬುದನ್ನು ಮೊದಲು ತಿಳಿದುಕೊ ಎಂದು ವಿಮರ್ಶೆ ಮಾಡುತ್ತಿದ್ದರೇ, ಮತ್ತೆ ಕೆಲವರು ಆಕೆಯ ಕಾಮೆಂಟ್ ಗಳನ್ನು ಬೆಂಬಲ ಸಹ ಮಾಡುತ್ತಿದ್ದಾರೆ.