113 ರೂಪಾಯಿಗಳ ರೀಫಂಡ್ ಗಾಗಿ ಬರೊಬ್ಬರಿ 4.9 ಲಕ್ಷ ಕಳೆದುಕೊಂಡ ಡಾಕ್ಟರ್….!

ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿದ್ದಂತೆ ಸೈಬರ್‍ ಅಪರಾಧಗಳ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ನಿಮಗೆ ಆ ಆಫರ್‍ ಬಂದಿದೆ, ಈ ಆಫರ್‍ ಬಂದಿದೆ, ಕಾರು ಬಂದಿದೆ, ಲಕ್ಷ ಲಕ್ಷ ಪ್ರೈಜ್ ಮನಿ ಬಂದಿದೆ ಎಂಬೆಲ್ಲಾ ಕರೆಗಳನ್ನು ಮಾಡುತ್ತಾ…

ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿದ್ದಂತೆ ಸೈಬರ್‍ ಅಪರಾಧಗಳ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ನಿಮಗೆ ಆ ಆಫರ್‍ ಬಂದಿದೆ, ಈ ಆಫರ್‍ ಬಂದಿದೆ, ಕಾರು ಬಂದಿದೆ, ಲಕ್ಷ ಲಕ್ಷ ಪ್ರೈಜ್ ಮನಿ ಬಂದಿದೆ ಎಂಬೆಲ್ಲಾ ಕರೆಗಳನ್ನು ಮಾಡುತ್ತಾ ಲಕ್ಷಾಂತರ ರೂಪಾಯಿಗಳನ್ನು ಸೈಬರ್‍ ಕಳ್ಳರು ದೋಚುತ್ತಿದ್ದಾರೆ. ಈ ರೀತಿ ಮೋಸ ಹೋದವರಲ್ಲಿ ಬಹುತೇಕರು ವಿದ್ಯಾವಂತರೇ ಆಗಿದ್ದಾರೆ ಎಂದರೇ ತಪ್ಪಾಗಲಾರದು. ಇದಕ್ಕೆ ಮತ್ತೊಂದು ಪ್ರಕರಣ ಸೇರಿಕೊಂಡಿದೆ. ವೈದ್ಯರೊಬ್ಬರಿಂದ ಬರೊಬ್ಬರಿ 4.9 ಲಕ್ಷ ವನ್ನು ಸೈಬರ್‍ ಕಳ್ಳರು ವಂಚಿಸಿದ ಘಟನೆಯೊಂದು ನಡೆದಿದೆ.

ಗೂಗಲ್ ನಲ್ಲಿ ಕಸ್ಟಮರ್‍ ಕೇರ್‍ ಸಂಖ್ಯೆಯ ಹೆಸರಿನಲ್ಲಿ ನೊಂದಾಯಿಸಿಕೊಳ್ಳುವಂತಹ ಸೈಪರ್‍ ಕಳ್ಳರು ಆ ಮೊಬೈಲ್ ಸಂಖ್ಯೆಯ ಮೂಲಕ ಅಮಾಯಕರಿಗೆ ಬಲೆ ಬೀಸುತ್ತಾರೆ. ಈ ರೀತಿಯ ಸೈಬರ್‍ ಕಳ್ಳರ ಬಲೆಗೆ ಬಿದ್ದ ವೈದ್ಯ ಲಕ್ಷಾಂತರ ಹಣ ಕಳೆದುಕೊಂಡಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೆಲಸ ಮಾಡುವಂತಹ ವೈದ್ಯ ಪ್ರದೀಪ್ ಚೌಧರಿ ವಂಚನೆಗೆ ಬಲಿಯಾದವರು. ಕೆಲಸದ ನಿಮಿತ್ತ ಪ್ರದೀಪ್ ಚೌಧರಿ ಕ್ಯಾಬ್ ಬುಕ್ ಮಾಡಿದ್ದರು. ಬುಕ್ಕಿಂಗ್ ವೇಳೆ ಅವರಿಗೆ 205 ರೂಪಾಯಿ ಬಾಡಿಗೆ ವಿಧಿಸಲಾಗಿತ್ತು. ಆದರೆ ವೈದ್ಯನ ಖಾತೆಯಿಂದ 318 ರೂಪಾಯಿಗಳನ್ನು ಡೆಬಿಟ್ ಮಾಡಲಾಗಿತ್ತು. ಈ ಬಗ್ಗೆ ಡ್ರೈವರ್‍ ಬಳಿ ಹಣ ಹಿಂದಿರುಗಿಸುವಂತೆ ಕೇಳಿದ್ದಾರೆ. ಗೂಗಲ್ ಕ್ಯಾಬ್ ಕಂಪನಿಗೆ ದೂರು ನೀಡಿ ಹಣ ವಾಪಸ್ ಬರುತ್ತದೆ ಎಂದು ಕ್ಯಾಬ್ ಚಾಲಕ ಹೇಳಿದ್ದಾರೆ. ಬಳಿಕ ವೈದ್ಯರು ಗೂಗಲ್ ಸರ್ಚ್ ಮಾಡಿದ್ದಾರೆ.

ಈ ವೇಳೆ ಗೂಗಲ್ ನಲ್ಲಿ ಕ್ಯಾಬ್ ಕಂಪನಿಯ ಗ್ರಾಹಕ ಸೇವೆ ಸಂಖ್ಯೆಯನ್ನು ಹುಡುಕಿದಾಗ ವೈದ್ಯನಿಗೆ ಒಂದು ಸಂಖ್ಯೆ ಸಿಕ್ಕಿದೆ. ಆ ಸಂಖ್ಯೆಗೆ ಕರೆ ಮಾಡಿದಾಗ ತಾನು ಕ್ಯಾಬ್ ಕಂಪನಿಯ ಸಂತ್ರಸ್ತ ಎಂದು ಸೈಬರ್‍ ವಂಚಕ ಹೇಳಿಕೊಂಡಿದ್ದಾನೆ. ಈ ವೇಳೆ ವೈದ್ಯ ತನಗೆ ಬರಬೇಕಿದ್ದ 113 ರೂಪಾಯಿಯನ್ನು ಮರುಪಾವತಿ ಮಾಡುವಂತೆ ಕೇಳಿದ್ದಾರೆ. ಈ ವೇಳೆ ಸೈಬರ್‍ ವಂಚಕ ರಿಮೋಟ್ ಅಪ್ಲಿಕೇಷನ್ ಮೂಲಕ ಅರ್ಜಿ ತುಂಬುವಂತೆ ತಿಳಿಸಿದ್ದಾನೆ. ವೈದ್ಯ ಬ್ಯಾಂಕ್ ಖಾತೆ ವಿವರಗಳನ್ನು ದಾಖಲಿಸಿದ್ದಾನೆ. ಬಳಿಕ ಸೈಬರ್‍ ವಂಚಕ OTP ಕೇಳಿದ್ದಾನೆ. ಒಟಿಪಿ ಬಂದ ತಕ್ಷಣ ವೈದ್ಯನ ಖಾತೆಯಿಂದ ಬರೊಬ್ಬರಿ 4.9 ಲಕ್ಷ ವರ್ಗಾಯಿಸಿಕೊಂಡಿದ್ದಾರೆ. ಬಳಿಕ ತಾನು ಮೋಸ ಹೋಗಿದ್ದಾಗಿ ವೈದ್ಯನಿಗೆ ಮನವರಿಕೆ ಯಾಗಿದ್ದು, ತಕ್ಷಣ ಸೈಬರ್‍ ಪೊಲೀಸರನ್ನು ಸಂಪರ್ಕ ಮಾಡಿದ್ದಾರೆ. ಗೂಗಲ್ ನಲ್ಲಿ ಸಿಗುವಂತಹ ಗ್ರಾಹಕ ಸೇವಾ ಸಂಖ್ಯೆಯನ್ನು ನಂಬಬೇಡಿ ಎಂದು ಸಲಹೆ ನೀಡಿದ್ದಾರೆ.