News

ಮದರಸಾದಲ್ಲಿ ರಾಮನ ಕಥೆಯನ್ನು ಕಲಿಸುತ್ತವೇ, ಮಕ್ಕಳು ರಾಮನಂತಾಗಬೇಕೆ ವಿನಃ ಔರಂಗಜೇಬ್ ನಂತಲ್ಲ ಎಂದ ವಕ್ಫ್ ಬೋರ್ಡ್ ಅಧ್ಯಕ್ಷ…..!

ಮುಸ್ಲೀಂ ಮಕ್ಕಳನ್ನು ರಾಮನಂತೆ ಬೆಳೆಸುತ್ತೇವೆ, ಮದರಸಾದಲ್ಲಿ ರಾಮನ ಕಥೆಯನ್ನು ಕಲಿಸುತ್ತೇವೆ, ಮುಂದಿನ ವರ್ಷದಿಂದಲೇ ಈ ಕಾರ್ಯ ನಡೆಯಲಿದೆ ಎಂದು ಡೆಹ್ರಾಡೂನ್ ನ ವಕ್ಫ್ ಬೋರ್ಡ್ ಅಧ್ಯಕ್ಷ ಶಾದಾಬ್ ಶಾಮ್ಸ್ ರವರು ಹೇಳಿದ್ದು, ಈ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಪರ-ವಿರೋಧ ವಾದಗಳೂ ಸಹ ನಡೆಯುತ್ತಿವೆ.

ಡೆಹ್ರಾಡೂನ್ ನ ವಕ್ಫ್ ಬೋರ್ಡ್ ಅಧ್ಯಕ್ಷ ಶಾದಾಬ್ ಶಾಮ್ಸ್ ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಮದರಸಾಗಳಲ್ಲಿ ಓದುತ್ತಿರುವಂತಹ ಮಕ್ಕಳು ಔರಂಗಜೇಬ್ ನಂತೆ ಅಲ್ಲ, ರಾಮನಂತೆ ಆಗಬೇಕು ಎಂದು ಬಯಸುತ್ತೇವೆ. ಅದಕ್ಕಾಗಿಯೇ ವಕ್ಫ್ ಬೋರ್ಡ್‌ನ ಎಲ್ಲಾ ಮದರಸಾಗಳ ಪಠ್ಯಕ್ರಮಗಳಲ್ಲಿ ಭಗವಾನ್ ರಾಮನ ಕಥೆಯನ್ನು ಅಳವಡಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಮುಂದಿನ ಮಾರ್ಚ್ ನಲ್ಲಿ ಆರಂಭವಾಗುವಂತಹ ಹೊಸ ಪಠ್ಯಕ್ರಮದಲ್ಲಿ ಉತ್ತರಾಖಂಡ್ ವಕ್ಫ್ ಮಂಡಳಿಯೊಂದಿಗೆ ಸಂಯೋಜಿತರಾಗಿರುವ ಮದರಸಾಗಳಿಗೆ ಭಗವಾನ್ ರಾಮನ ಕಥೆಯನ್ನು ಹೊಸ ಪಠ್ಯಕ್ರಮವಾಗಿ ಸೇರಿಸಲಾಗುತ್ತದೆ ಎಂದಿದ್ದಾರೆ.

ತಂದೆಗೆ ಕೊಟ್ಟಂತಹ ಮಾತನ್ನು ಉಳಿಸಿಕೊಳ್ಳುವ ಸಲುವಾಗಿ ಅರಸನ ಪಟ್ಟವನ್ನು ಬಿಟ್ಟು ಕಾಡಿಗೆ ಹೋದವನು ಶ್ರೀರಾಮ. ಶ್ರೀರಾಮನಂತಹ ಮಗನನ್ನು ಪಡೆಯಲು ಯಾರು ತಾನೇ ಬಯಸುವುದಿಲ್ಲ. ಈ ಕಾರಣದಿಂದ ಹೊಸ ಪಠ್ಯಕ್ರಮದಲ್ಲಿ ರಾಮ ಕಥೆಯನ್ನು ಅಳವಡಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಜೊತೆಗೆ ಪ್ರವಾದಿ ಮೊಹಮದ್ ರವರ ಕಥೆ ಎಂದಿನಂತೆ ಇರುತ್ತದೆ. ಅನುಭವಿ ಮುಸ್ಲೀಂ ಧರ್ಮಗುರುಗಳೂ ಸಹ ಈ ನಿರ್ಧಾರ ಅನುಮೋದಿಸಿದ್ದಾರೆ. 20ನೇ ಶತಮಾನದ ಮುಸ್ಲೀಂ ತತ್ವಜ್ಞಾನಿ ಅಲ್ಲಾಂ ಇಕ್ಬಾಲ್ ರವರನ್ನು ಉಲ್ಲೇಖಿಸಿದ ಶಾದಾಮ್, ರಾಮನ ಅಸ್ತಿತ್ವದ ಬಗ್ಗೆ ಭಾರತಕ್ಕೆ ಹೆಮ್ಮೆಯಿದೆ. ಅರಸನಾಗುವ ಸನ್ನಿವೇಶವನ್ನು ತೊರೆದು ಕಾಡಿಗೆ ಹೋದ ರಾಮ, ಅವರೊಂದಿಗೆ ಲಕ್ಷ್ಮಣ ಹಾಗೂ ಸೀತಾ ದೇವಿಯವರುಗಳು ಸ್ಪೂರ್ತಿದಾಯಕ ಎಂದು ಹೇಳಿದ್ದಾರೆ. ಇದೀಗ ಅವರು ನೀಡಿರುವ ಹೇಳಿಕೆಗಳು ಮಾತ್ರ ಭಾರಿ ಚರ್ಚೆಗೆ ಕಾರಣವಾಗಿದೆ ಎನ್ನಲಾಗುತ್ತಿದೆ.

Most Popular

To Top