ರಾಮ ದೇವರಲ್ಲ ಎಂದು ರಾಮನ ಬಗ್ಗೆ ಮಾತನಾಡಿದ ಕಾಂಗ್ರೇಸ್ ನಾಯಕ ಉಗ್ರಪ್ಪ….!

Follow Us :

ಕೆಲವು ದಿನಗಳ ಹಿಂದೆಯಷ್ಟೆ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಬಾಲರಾಮನ ವಿಗ್ರಹ ಪ್ರತಿಷ್ಪಾಪನೆ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದ್ದು, ಈ ಐತಿಹಾಸಿಕ ದಿನದಂದು ಅನೇಕ ಹಿಂದೂಗಳು ಹಬ್ಬದಂತೆ ಸಂಭ್ರಮಾಚರಿಸಿದರು. ಈ ಬಗ್ಗೆ ಅನೇಕ ನಾಯಕರುಗಳು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಈಗಲೂ ಸಹ ಕೆಲ ಕಾಂಗ್ರೇಸ್ ನಾಯಕರು ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ಇದೀಗ ಕಾಂಗ್ರೇಸ್ ಹಿರಿಯ ನಾಯಕ ವಿ.ಎಸ್.ಉಗ್ರಪ್ಪ ಶ್ರೀರಾಮನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕರ್ನಾಟಕದ ರಾಜ್ಯದ ಹಿರಿಯ ಕಾಂಗ್ರೇಸ್ ನಾಯಕ ಹಾಗೂ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ವಿಜಯನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಕೆಲವೊಂದು ಸ್ಪೋಟಕ ಹೇಳಿಕೆಗಳನ್ನು ನೀಡಿದ್ದಾರೆ. ರಾಮ ದೇವರಲ್ಲ, ರಾಮ ದೇವರಲ್ಲ, ರಾಮ ಮನುಷ್ಯ, ಆತ ರಾಜ, ರಾಜಕುಮಾರ ಎಂದು ಉಗ್ರಪ್ಪ ಹೇಳಿದ್ದಾರೆ. ನಿಮಗೇನಾದರೂ ಭಕ್ತಿ ಇದೆಯಾ ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ. ಶ್ರೀರಾಮ ತನ್ನ ಆದರ್ಶಗಳ ಮೂಲಕ ದೈವತ್ವನ್ನು ಪಡೆದುಕೊಂಡಿದ್ದಾರೆ. ರಾಮನ ಆದರ್ಶಗಳು ಇಲ್ಲದಿದ್ದರೇ ನೀನು ಹೇಗೆ ರಾಮನ ಭಕ್ತನಾಗುತ್ತಿಯಾ ಎಂದು ಪ್ರಶ್ನೆ ಮಾಡಿದ್ದಾರೆ. ಪಾಪ ನಿಮ್ಮ ಪತ್ನಿ ಇಲ್ಲಿನ ಅಂಜನಾದ್ರಿಗೆ, ಹಂಪಿಗೆ ಬಂದು ಹೋಗಿದ್ದಾರೆ. ಮೊದಲು ರಾಮಭಕ್ತನಾಗಿ ಆ ಹೆಣ್ಣು ಮಗಳ ರಕ್ಷಣೆ ಮಾಡಪ್ಪ ಎಂದು ಪ್ರಧಾನಿಯ ಬಗ್ಗೆ ಏಕವಚನದಲ್ಲಿ ಸಂಬೋಧಿಸಿದ್ದರು.

ರಾಮಾಯಣದಲ್ಲಿ ಅಶ್ವಮೇಧ ಯಾಗ ಮಾಡಬೇಕಾದರೆ ವಶಿಷ್ಟರು ಹಾಗೂ ವಿಶ್ವಾಮಿತ್ರರು ಸತಿಪತಿ ಇಬ್ಬರೂ ಸೇರಬೇಕು ಎಂದು ಹೇಳುತ್ತಾರೆ. ಆದ್ದರಿಂದ ಚಿನ್ನದ ಸೀತೆಯನ್ನು ಮಾಡಿ ರಾಮ ಪೂಜೆ ಮಾಡುತ್ತಾರೆ. ಆದರೆ ಮೊನ್ನೆ ನೀನೇನು ಮಾಡಿದ್ಯಪ್ಪಾ, ಧರ್ಮವಿರೋಧಿ, ರಾಮನ ವಿಚಾರಕ್ಕೆ ವಿರೋಧಿ ಅಲ್ವಾ ಎಂದು ಮೋದಿಯವರನ್ನು ಪ್ರಶ್ನೆ ಮಾಡಿದ್ದಾರೆ. ಮುಂಬರು ಲೋಕಸಭಾ ಚುನಾವಣೆಯಲ್ಲಿ 400 ಸೀಟ್ ಗೆಲ್ಲುತ್ತೇವೆ ಎಂಬ ಮಾತಿಗೂ ಸಹ ಟಾಂಗ್ ಕೊಟ್ಟ ಉಗ್ರಪ್ಪ ಯಾವ ಪುರುಷಾರ್ಥಕ್ಕೆ ನಿಮಗೆ 400 ಸೀಟ್ ಕೊಡಬೇಕು ಎಂದು ಪ್ರಶ್ನೆ ಮಾಡಿದ್ರು. ಕಳೆದ ವರ್ಷ ಪುಲ್ವಾಮಾ ಹೆಸರಲ್ಲಿ ಚುನಾವಣೆ ಮಾಡಿದ್ರೀ, ಇದೀಗ ರಾಮನ ಹೆಸರಲ್ಲಿ ಚುನಾವಣೆ ಮಾಡುತ್ತಿದ್ದೀರಾ. ರಾಮನ ಹೆಸರು ಹೇಳೋಕೆ ಯೋಗ್ಯತೆ ಸಹ ನಿಮಗಿಲ್ಲ. ರಾಮನ ಹೆಸರು ಹೇಳೋ ಯೋಗ್ಯತೆ ಇರೋದು ಕಾಂಗ್ರೇಸ್ ನವರಿಗೆ ಮಾತ್ರ ಎಂದು ಹೇಳಿದ್ದಾರೆ.