ಮೊದಲ ಬಾರಿಗೆ ವಿಚ್ಚೇದನಕ್ಕೆ ಕಾರಣ ತಿಳಿಸಿದ ಮೆಗಾ ಡಾಟರ್, ಬಹಿರಂಗವಾಗಿಯೇ ಕಾರಣ ಹೇಳಿದ ನಿಹಾರಿಕಾ….!

Follow Us :

ಕೆಲವು ದಿನಗಳ ಹಿಂದೆಯಷ್ಟೆ ಮೆಗಾ ಡಾಟರ್‍ ನಿಹಾರಿಕಾ ಕೊಣಿದೆಲಾ ಚೈತನ್ಯ ಜೊನ್ನಲಗಡ್ಡ ರಿಂದ ವಿಚ್ಚೇದನ ಪಡೆದುಕೊಂಡು ಎಲ್ಲರಿಗೂ ಶಾಕ್ ನೀಡಿದ್ದರು. ವಿಚ್ಚೇದನದ ಬಳಿಕ ಆಕೆ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ವಿಚ್ಚೇದನದ ಬಳಿಕ ಫ್ರೀ ಬರ್ಡ್ ಆಗಿ ವಿಹರಿಸುತ್ತಿದ್ದಾರೆ. ಇದೀಗ ತನಗೆ ಇಷ್ಟಬದಂತೆ ಜೀವನ ಸಾಗಿಸುತ್ತಿದ್ದು, ಆಕೆ ಹಂಚಿಕೊಳ್ಳುವ ಪೋಸ್ಟ್ ಗಳು ಸಖತ್ ವೈರಲ್ ಆಗುತ್ತಿರುತ್ತವೆ. ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲಿ ಮತಷ್ಟು ಬೋಲ್ಡ್ ಆಗುತ್ತಿದ್ದಾರೆ. ಇದೀಗ ಆಕೆ ವಿಚ್ಚೇದನ ಪಡೆದುಕೊಂಡ ಕಾರಣವನ್ನು ಬಹಿರಂಗವಾಗಿ ಹೇಳಿದ್ದು, ಆಕೆಯ ಕಾಮೆಂಟ್ ಗಳು ಇದೀಗ ಭಾರಿ ಸದ್ದು ಮಾಡುತ್ತಿವೆ.

ಕಳೆದ ಡಿಸೆಂಬರ್‍ 2020ರ ಡಿಸೆಂಬರ್‍ 9 ರಂದು ರಾಜಸ್ಥಾನದ ಜೈಪುರದಲ್ಲಿ ಚೈತನ್ಯ ಹಾಗೂ ನಿಹಾರಿಕಾ ರವರ ಮದುವೆ ತುಂಬಾ ಅದ್ದೂರಿಯಾಗಿ ನಡೆಯಿತು. ಡೆಸ್ಟಿನೇಷನ್ ವೆಡ್ಡಿಂಗ್ ಎಂಬ ಹೆಸರಿನಲ್ಲಿ ಈ ಜೋಡಿ ಸಪ್ತಪದಿ ತುಳಿಯಿತು. ಮದುವೆಯಾದ ಬಳಿಕ ಈ ಜೋಡಿ ಸಂತೋಷದಿಂದ ಜೀವನ ಸಾಗಿಸುತ್ತಿದ್ದರು. ಆದರೆ ಕೆಲವು ದಿನಗಳಿಂದ ಅವರಿಬ್ಬರ ನಡುವೆ ವಿಬೇದಗಳು ಉಂಟಾಗಿದ್ದು, ಇಬ್ಬರೂ ದೂರವಾಗಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಇಬ್ಬರೂ ಅಧಿಕೃತವಾಗಿ ವಿಚ್ಚೇದನ ಸಹ ಪಡೆದುಕೊಂಡಿದ್ದಾರೆ. ಇನ್ನೂ ನಿಹಾರಿಕಾ ವಿಚ್ಚೇದನ ಪಡೆದುಕೊಳ್ಳುವುದಕ್ಕೂ ಮುಂಚೆಯೇ ಆತನಿಂದ ದೂರವಾಗಿದ್ದರು. ಬಳಿಕ ತಾವಿಬ್ಬರು ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಚೇದನ ಪಡೆದುಕೊಂಡಿದ್ದಾಗಿ ತಮಗೆ ಪ್ರವೈಸಿ ಬೇಕೆಂದು ಎಮೋಷನಲ್ ನೋಟ್ ಹಂಚಿಕೊಂಡಿದ್ದರು.  ಇದೀಗ ಆಕೆ ಸಂದರ್ಶನವೊಂದರಲ್ಲಿ ವಿಚ್ಚೇದನ ಪಡೆದುಕೊಂಡ ಕಾರಣದ ಬಗ್ಗೆ ಬಹಿರಂಗವಾಗಿಯೇ ಮಾತನಾಡಿದ್ದಾರೆ.

ಇನ್ನೂ ನಟಿ ನಿಹಾರಿಕಾ ಲೇಟೆಸ್ಟ್ ಸಂದರ್ಶನದಲ್ಲಿ ಮಾತನಾಡುತ್ತಾ, ಇನ್ನು ಮುಂದೆ ಆತುರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಸ್ಲೋ ಆಗಿ ಸ್ಟಡಿಯಾಗಿ ಹೋಗುತ್ತೇನೆ. ಸದ್ಯ ತಮಿಳಿನಲ್ಲಿ ಒಂದು ಸಿನೆಮಾ ಮಾಡುತ್ತಿದ್ದೇನೆ. ನಿರ್ಮಾಪಕಿಯಾಗಿ ಸಹ ವ್ಯವಹರಿಸುತ್ತಿದ್ದೇನೆ. ನನ್ನನ್ನು ದೊಡ್ಡ ಪರದೆಯ ಮೇಲೆ ನೋಡಿಕೊಂಡು ಐದು ವರ್ಷ ಆಗುತ್ತಿದೆ. ಈ ಗ್ಯಾಪ್ ಬರೋದಿಕ್ಕೆ ಮದುವೆ ಕಾರಣ ಮದುವೆಯಾದ ಬಳಿಕ ನಾನು ನಟನೆಯಿಂದ ದೂರವಾಗಬೇಕೆಂದು ಅನೇಕರು ಭಾವಿಸಿದ್ದರು. ನಮ್ಮ ಅತ್ತಿಗೆ ಲಾವಣ್ಯಗೂ ಇದೇ ಪ್ರಶ್ನೆ ಕೇಳಿದರು. ಅಷ್ಟಕ್ಕೂ ಮದುವೆ ಹಾಗೂ ಪ್ರೊಫೆಷನ್ ಗೂ ಏನು ಸಂಬಂಧ, ಮದುವೆಯಾದರೇ ನಟಿಸಬಾರದೇ, ನನಗೆ ಆಕ್ಟಿಂಗ್ ಅಂದರೇ ಇಷ್ಟ. ಆಗಿದ್ದು ಏನೋ ಆಗೋಗಿದೆ. ನನಗೆ ಇಷ್ಟವಾದಂತೆ ಬದುಕುವುದೇ ಸಂತೋಷ. ಇನ್ನು ಮುಂದೆ ಎರಡು ಪಟ್ಟು ಎನರ್ಜಿಯಿಂದ ಮುಂದೆ ಹೋಗುತ್ತೇನೆ ಎಂದು ನಿಹಾರಿಕಾ ಹೇಳಿದ್ದಾರೆ.

ಆಕೆಯ ಹೇಳಿಕೆಗಳನ್ನು ಗಮನಿಸಿದರೇ ಮದುವೆ ಕಾರಣದಿಂದ ಸಿನೆಮಾಗಳಿಂದ ದೂರವಾಗಿದ್ದಾಗಿ, ಆದ್ದರಿಂದ ಅತ್ತೆ ಮನೆಯಲ್ಲಿ ನಿಹಾರಿಕಾ ನಟಿಸಲು ಇಷ್ಟವಿಲ್ಲವೆಂದು ಈ ಕಾರಣದಿಂದಲೇ ಆಕೆ ವಿಚ್ಚೇದನ ಪಡೆದುಕೊಂಡಿದ್ದಾರೆ ಎಂಬ ಚರ್ಚೆ ಸಹ ಶುರುವಾಗಿದೆ. 2023ರ ಆರಂಭದಲ್ಲಿ ಈ ಜೋಡಿ ಅಧಿಕೃತವಾಗಿ ವಿಚ್ಚೇದನ ಪಡೆದುಕೊಂಡರು.