ಮುಂಬೈಗೆ ಶಿಫ್ಟ್ ಆಗುವ ಕುರಿತು ರಿಯಾಕ್ಟ್ ಆದ ನಟಿ ಜ್ಯೋತಿಕಾ, ವಿಚ್ಚೇದನದ ರೂಮರ್ ಗೆ ಕ್ಲಾರಿಟಿ ಕೊಟ್ಟ ನಟಿ….!

Follow Us :

ಕಾಲಿವುಡ್ ಸ್ಟಾರ್‍ ಜೋಡಿಗಳಲ್ಲಿ ಒಂದಾದ ನಟ ಸೂರ್ಯ ಹಾಗೂ ಜ್ಯೋತಿಕಾ ರವರು ವಿಚ್ಚೇದನ ಪಡೆದುಕೊಳ್ಳಲಿದ್ದಾರೆ, ಸೂರ್ಯ ಮನೆಯಲ್ಲಿ ಗಲಾಟೆ ನಡೆದಿದೆ, ಈ ಕಾರಣದಿಂದ ಅವರು ಮುಂಬೈಗೆ ಶಿಫ್ಟ್ ಆಗಿದ್ದಾರೆ ಎಂಬೆಲ್ಲಾ ರೂಮರ್‍ ಗಳು ಭಾರಿ ಸದ್ದು ಮಾಡುತ್ತಿದೆ. ಈಗಾಗಲೇ ಈ ಬಗ್ಗೆ ಅವರಿಬ್ಬರು ಕೆಲವೊಮ್ಮೆ ಸ್ಪಷ್ಟನೆ ನೀಡಿದರೂ ಸಹ ರೂಮರ್‍ ಗಳು ಮಾತ್ರ ನಿಂತಿಲ್ಲ. ಇದೀಗ ಜ್ಯೋತಿಕಾ ಮತ್ತೊಮ್ಮೆ ತಾವು ಮುಂಬೈಗೆ ಶಿಫ್ಟ್ ಆಗಿರುವ ಹಿಂದಿನ ಕಾರಣವನ್ನು ತಿಳಿಸಿದ್ದಾರೆ.

ತಮಿಳು ಸಿನಿರಂಗದಲ್ಲಿ ಸೂರ್ಯ ಹಾಗೂ ಜ್ಯೋತಿಕಾ ತುಂಬಾನೆ ಫೇಮಸ್ ಪಡೆದುಕೊಂಡ ಜೋಡಿಯಾಗಿದೆ. ಅವರಿಬ್ಬರದ್ದೂ ಪ್ರೇಮ ವಿವಾಹವಾಗಿದೆ. ಮದುವೆಯಾದಾಗಿನಿಂದಲೂ ಈ ಜೋಡಿ ತುಂಬಾನೆ ಸಂತೋಷದಿಂದ ಕಾಲ ಕಳೆಯುತ್ತಿದ್ದಾರೆ. ಸೂರ್ಯ ರವರ ತಂದೆಗೆ ಜ್ಯೋತಿಕಾ ರನ್ನು ಪ್ರೀತಿಸಿ ಮದುವೆಯಾಗಿದ್ದು, ಇಷ್ಟವಿರಲಿಲ್ಲವಂತೆ ಬಳಿಕ ಅವರ ಪ್ರೀತಿಯನ್ನು ಒಪ್ಪಿ ಮತ್ತೊಮ್ಮೆ ಮದುವೆ ಮಾಡಿದ್ದಾಗಿ ಹೇಳಲಾಗಿದೆ. ಇನ್ನೂ ಮದುವೆಯಾದ ಬಳಿಕ ಜ್ಯೋತಿಕಾ ಸಿನೆಮಾಗಳಿಂದ ದೂರವೇ ಉಳಿದರು. ಸದ್ಯ ಅವರ ಮಕ್ಕಳು ದೊಡ್ಡವರಾಗಿದ್ದು, ಮತ್ತೆ ಸಿನೆಮಾಗಳತ್ತ ಮುಖ ಮಾಡಿದ್ದಾರೆ. ಬಾಲಿವುಡ್ ಸಿನೆಮಾಗಳಲ್ಲೂ ಸಹ ಆಕೆ ನಟಿಸುತ್ತಿದ್ದಾರೆ. ಮೂರು ಹಿಂದಿ ಸಿನೆಮಾಗಳಲ್ಲಿ ಜ್ಯೋತಿಕಾ ನಟಿಸುತ್ತಿದ್ದಾರೆ. ಈ ಕಾರಣದಿಂದ ಅವರಿಬ್ಬರೂ ಮುಂಬೈಗೆ ಶಿಫ್ಟ್ ಆಗಿದ್ದಾರೆ.

ಇನ್ನೂ ಜ್ಯೋತಿಕಾ ಸಿನೆಮಾಗಳ ಕಾರಣದಿಂದ ಮುಂಬೈ ಗೆ ಶಿಫ್ಟ್ ಆಗಿದ್ದಾರೆ. ಆದರೆ ಸೂರ್ಯ ರವರ ತಂದೆಗೆ ಜ್ಯೋತಿಕಾ ಸಿನೆಮಾಗಳಲ್ಲಿ ನಟಿಸುವುದು ಇಷ್ಟವಿಲ್ಲ. ಈ ಕಾರಣದಿಂದಲೇ ಅವರು ಮುಂಬೈಗೆ ಶಿಫ್ಟ್ ಆಗಿದ್ದಾರೆ ಎಂದು ಕೆಲವರು, ಮತ್ತೆ ಕೆಲವರು ಮುಂಬೈಗೆ ಶಿಫ್ಟ್ ಆದ ಜ್ಯೋತಿಕಾ ಹಾಗೂ ಸೂರ್ಯ ಶೀಘ್ರದಲ್ಲೇ ವಿ‌ಚ್ಚೇದನ ಪಡೆದುಕೊಳ್ಳಲಿದ್ದಾರೆ. ಮಕ್ಕಳಿಗಾಗಿ ಜೊತೆಗೆ ವಾಸ ಮಾಡುತ್ತಿದ್ದಾರೆ ಎಂಬೆಲ್ಲಾ ರೂಮರ್‍ ಗಳೂ ಸಹ ಹರಿದಾಡಿದ್ದವು. ಇದೀಗ ಈ ಕುರಿತು ಜ್ಯೋತಿಕಾ ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ಬಾಲಿವುಡ್ ಸಿನೆಮಾಗಳಿಗೆ ಕಮಿಟ್ ಆದ ಕಾರಣದಿಂದ ಹಾಗೂ ಮಕ್ಕಳ ವಿದ್ಯಾಭ್ಯಾಸದ ಕಾರಣದಿಂದ ಮುಂಬೈಗೆ ಶಿಫ್ಟ್ ಆಗಿದ್ದೇವೆ. ಮಕ್ಕಳ ವಿದ್ಯಾಭ್ಯಾಸ ಪೂರ್ಣಗೊಂಡ ಕೂಡಲೇ ಚೆನೈಗೆ ವಾಪಸ್ಸು ಆಗುತ್ತೇವೆ ಎಂದು ಹೇಳಿದ್ದಾರೆ. ಆ ಮೂಲಕ ತಮ್ಮ ಬಗ್ಗೆ ಹರಿದಾಡುತ್ತಿರುವ ಸುಳ್ಳು ರೂಮರ್‍ ಗಳ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ.