Film News

ದೀಪಿಕಾ ರಣವೀರ್ ವಿಚ್ಚೇದನ ಪಡೆದುಕೊಳ್ಳಲಿದ್ದಾರಂತೆ, ಮತ್ತೊಮ್ಮೆ ವೈರಲ್ ಆದ ರೂಮರ್…..!

ಸಿನಿರಂಗದಲ್ಲಿ ಲವ್, ಬ್ರೇಕಪ್, ಮದುವೆ ವಿಚ್ಚೇದನ ಎಲ್ಲವೂ ಸಾಮಾನ್ಯವಾಗಿರುತ್ತದೆ. ಅದರಲ್ಲೂ ಇದು ಬಾಲಿವುಡ್ ನಲ್ಲಿ ಕೊಂಚ ಹೆಚ್ಚಾಗಿಯೇ ಇರುತ್ತದೆ ಎಂದು ಹೇಳಬಹುದಾಗಿದೆ. ಇದೀಗ ಬಾಲಿವುಡ್ ಸ್ಟಾರ್‍ ಜೋಡಿಯಾದ ರಣವೀರ್‍ ಹಾಗೂ ದೀಪಿಕಾ ನಡುವೆ ವಿಬೇದಗಳು ಹುಟ್ಟಿಕೊಂಡಿದೆ. ಅವರಿಬ್ಬರ ನಡುವೆ ವಿಬೇದಗಳು ಹುಟ್ಟಿಕೊಂಡಿವೆ. ಇಬ್ಬರೂ ವಿಚ್ಚೇದನ ಪಡೆದುಕೊಳ್ಳಲಿದ್ದಾರೆ ಎಂಬ ರೂಮರ್‍ ಹರಿದಾಡುತ್ತಿದೆ. ಇನ್ನೂ ಈ ಸುದ್ದಿ ನಿಜನಾ ಸುಳ್ಳಾ ಎಂಬುದನ್ನು ಪಕ್ಕಕ್ಕಿಟ್ಟರೇ ಸುದ್ದಿ ಮಾತ್ರ ಬಿರುಗಾಳಿಯಂತೆ ಹರಿದಾಡುತ್ತಿದೆ.

ಸ್ಟಾರ್‍ ನಟಿ ದೀಪಿಕಾ ಪಡುಕೋಣೆ ಕಳೆದ 2018 ರಲ್ಲಿ ಬಾಲಿವುಡ್ ಸ್ಟಾರ್‍ ರಣವೀರ್‍ ಸಿಂಗ್ ಜೊತೆಗೆ ಸುಮಾರು ಆರು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದರು. ಬಾಲಿವುಡ್ ನ ರೊಮ್ಯಾಂಟಿಕ್ ಜೋಡಿಯಾಗಿದ್ದಾರೆ. ಮದುವೆಯ ಬಳಿಕ ಇಬ್ಬರೂ ವೈವಾಹಿಕ ಜೀವನದ ಜೊತೆಗೆ ಸಿನೆಮಾ ಕೆರಿಯರ್‍ ಅನ್ನೂ ಸಹ ಸಾಗಿಸುತ್ತಿದ್ದಾರೆ. ಸಿನೆಮಾ ಶೂಟಿಂಗ್ ಗಳಿಂದ ಬಿಡುವು ಸಿಕ್ಕಾಗ ಅನೇಕ ವೆಕೇಷನ್ ಗಳಿಗೆ ಹಾರುತ್ತಾ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಜೊತೆಗೆ ಸಿನೆಮಾ ಫಂಕ್ಷನ್ ಗಳೂ, ಪಾರ್ಟಿಗಳೂ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಹಾಜರಾಗುತ್ತಾ ಕ್ರೇಜಿ ಜೋಡಿಯಾಗಿದ್ದಾರೆ. ಸದ್ಯ ಫ್ಯಾಮಿಲಿ ಜೊತೆಗೆ ಸಿನೆಮಾ ಕೆರಿಯರ್‍ ಸಹ ಸಕ್ಸಸ್ ಪುಲ್ ಆಗಿ ಸಾಗಿಸುತ್ತಿರುವ ಈ ಜೋಡಿ ಬಗ್ಗೆ ಅನೇಕ ರೂಮರ್‍ ಗಳು ಹರಿದು ಬರುತ್ತಿವೆ. ಈಗಾಗಲೇ ಅನೇಕ ಬಾರಿ ಈ ಜೋಡಿಯ ಬಗ್ಗೆ ಇಂತಹುದೇ ರೂಮರ್‍ ಗಳು ಹರಿದಾಡಿತ್ತು. ಇದೀಗ ಮತ್ತೊಂದು ರೂಮರ್‍ ಹರಿದಾಡುತ್ತಿದೆ.

ಸದ್ಯ ಸಿನೆಮಾಗಳ ಜೊತೆಗೆ ವೈಯುಕ್ತಿಕವಾಗಿ ಸಹ ಸಂತೋಷದಿಂದ ಜೀವನ ಸಾಗಿಸುತ್ತಿರುವ ದೀಪಿಕಾ ಅಂಡ್ ರಣವೀರ್‍ ರವರ ನಡುವೆ ವಿಬೇದಗಳು ಸೃಷ್ಟಿಯಾಗಿದೆ. ಅವರಿಬ್ಬರೂ ಬೇರೆಯಾಗಲಿದ್ದಾರೆ ಎಂಬ ರೂಮರ್‍ ಗಳು ಕೇಳಿಬರುತ್ತಿವೆ. ಈ ರೂಮರ್‍ ಗಳು ಜೋರಾಗಿ ಹರಿದಾಡುತಿದ್ದಂತೆ. ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ದೀಪಿಕಾ ಪಡುಕೋಣೆ ಈ ಸುದ್ದಿಗಳನ್ನು ತಳ್ಳಿಹಾಕಿದರು. ತಾನು ರಣವೀರ್‍ ಜೊತೆಗೆ ಸಂತೋಷದಿಂದ ಸಮಯ ಕಳೆಯುತ್ತಿದ್ದೇನೆ ಎಂದು ವಿಚ್ಚೇದನದ ಸುದ್ದಿಗೆ ಚೆಕ್ ಇಟ್ಟರು. ಆದರೂ ಸಹ ರೂಮರ್‍ ಗಳು ಮಾತ್ರ ನಿಂತಿಲ್ಲ. ಬಳಿಕವೂ ಸಹ ದೊಡ್ಡ ದೊಡ್ಡ ಮಟ್ಟದಲ್ಲೇ ರೂಮರ್‍ ಗಳೇ ಶುರುವಾದವು. ಆಕೆ ತನ್ನ ಪತಿಯೊಂದಿಗೆ ತುಂಬಾ ರೊಮ್ಯಾಂಟಿಕ್ ಆಗಿರುವ ಪೊಟೋ ಶೇರ್‍ ಮಾಡಿ ರೂಮರ್‍ ಗಳಿಗೆ ನಾಂದಿ ಹಾಡಿದರು.

ಇಬ್ಬರೂ ಒಂದೇ ರೀತಿಯ ಪೊಟೋ ಶೇರ್‍ ಮಾಡಿ ತಮ್ಮ ವಿಚ್ಚೇದನದ ಸುದ್ದಿಗೆ ಕ್ಲಾರಿಟಿ ಕೊಟ್ಟರು. ಇನ್ನೂ ಅಂತಹ ರೂಮರ್‍ ಗಳನ್ನು ಹರಿಬಿಡಬೇಡಿ ಎಂದು ಸಹ ಹೇಳಿದರು. ಇನ್ನೂ ಈಗಲಾದರೂ ಅವರ ವಿಚ್ಚೇದನದ ಸುದ್ದಿಗೆ ಬ್ರೇಕ್ ಬೀಳುತ್ತಾ ಅಥವಾ ಇನ್ನೂ ಮುಂದುವರೆಯುತ್ತಾ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top