ಅಲೆಮಾರಿ ಜನಾಂಗದ ಬಾಲಕಿಯ ಕನಸನ್ನು ಈಡೇರಿಸಲು ಮುಂದಾದ ಕ್ರಿಕೆಟಿಗ, ಡಾಕ್ಟರ್ ಆಗಬೇಕೆಂಬ ಬಾಲಕಿಗೆ ನೆರವಾದ ರಾಹುಲ್…..!

Follow Us :

ಟೀಂ ಇಂಡಿಯಾ ಆಟಗಾರ ಕೆ.ಎಲ್.ರಾಹುಲ್ ಅಲೆಮಾರಿ ಜನಾಂಗಕ್ಕೆ ಸೇರಿದಂತಹ ಬಾಲಕಿಯೊಬ್ಬಳ ಕನಸನ್ನು ಈಡೇರಿಸಲು ಮುಂದಾಗಿದ್ದಾರೆ. ಸುಡುಗಾಡು ಸಿದ್ದರ ಎಂಬ ಜನಾಂಗದ ಕುಟುಂಬವೊಂದಕ್ಕೆ ಜೀವನ ನಡೆಸಲು ಸಹ ಕಷ್ಟವಾಗಿತ್ತ. ಆದರೆ ಈ ಕುಟುಂಬದಲ್ಲಿ ಜನಿಸಿದ ಬಾಲಕಿಗೆ ಡಾಕ್ಟರ್‍ ಆಗಬೇಕೆಂಬ ಕನಸು ಇತ್ತು. ಆದರೆ ಬಡತನದ ಕಾರಣದಿಂದ ವಿದ್ಯಾಭ್ಯಾಸ ಕೊಡಿಸಲು ಕಷ್ಟಕರವಾಗಿತ್ತು. ಈ ವಿಚಾರವನ್ನು ತಿಳಿದ ಕ್ರಿಕೆಟಿಗ ಕೆ.ಎಲ್.ರಾಹುಲ್ ಬಡ ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕೆ ನೆರವಾಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಧಾರವಾಡದ ಸಿದ್ದೇಶ್ವರ ಕಾಲೋನಿಯಲ್ಲಿ ವಾಸವಿರುವ ಹನುಮಂತಪ್ಪ ಹಾಗೂ ಸುಮಿತ್ರಾ ದಂಪತಿಗೆ ಸೃಷ್ಟಿ ಕುಲಾವಿ ಎಂಬ ಮಗಳಿದ್ದಾರೆ. ಬಾಲ್ಯದಿಂದಲೇ ಸೃಷ್ಟಿಗೆ ಡಾಕ್ಟರ್‍ ಆಗುವಂತಹ ಮಹದಾಸೆಯಿತ್ತು. ಆದರೆ ಬಡ ಸುಡಗಾಡು ಸಿದ್ದರ ಜನಾಂಗದಲ್ಲಿ ಹುಟ್ಟಿರುವ ಇವಳಿಗೆ ಬಡತನ ದೊಡ್ಡ ಶಾಪವಾಗಿತ್ತು. ಆದ್ದರಿಂದ ಬಾಲಕಿ ವಿದ್ಯಾಬ್ಯಾಸಕ್ಕೆ ತುಂಭಾ ತೊಂದರೆಯಾಗಿತ್ತು. ಇನ್ನೂ ಈ ವಿಚಾರ ತಿಳಿದ ಸ್ಥಳೀಯ ಬಿಜೆಪಿ ಮುಖಂಡ ಮಂಜುನಾಥ ಹೆಬಸೂರು ಎಂಬಾತ ಕ್ರಿಕೆಟಿಗ ಕೆ.ಎಲ್.ರಾಹುಲ್ ರವರನ್ನು ಸಂಪರ್ಕ ಮಾಡಿದ್ದಾರೆ.

ಈ ವೇಳೆ ರಾಹುಲ್ ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯ ಮಾಡಿದ್ದಾರೆ. ಶಾಲೆಯ ಖಾತೆಗೆ 21 ಸಾವಿರ ಹಣ ವರ್ಗಾವಣೆ ಮಾಡಿ ಆರ್ಥಿಕ ನೆರವು ಮಾಡಿದ್ದಾರೆ. ಆಕೆಯ ವಿದ್ಯಾಭ್ಯಾಸಕ್ಕೆ ಮುಂದಿನ ದಿನಗಳಲ್ಲೂ ಸಹ ಆರ್ಥಿಕ ನೆರವು ನೀಡುವ ಭರವಸೆ ಸಹ ಸಿಕ್ಕಿದೆ ಎನ್ನಲಾಗಿದೆ.