ಬಾಲಿವುಡ್ ಸಿನಿರಂಗದ ಕುರಿತು ಹಾಟ್ ಕಾಮೆಂಟ್ಸ್ ಮಾಡಿದ ಸೀತಾರಾಮಂ ಬ್ಯೂಟಿ ಮೃಣಾಲ್, ಆಕೆ ಹೇಳಿದ್ದು ಏನು?

Follow Us :

ಸ್ಟಾರ್‍ ನಟಿ ಮೃಣಾಲ್ ಠಾಕೂರ್‍ ಸೀತಾರಾಮಂ ಎಂಬ ಸಿನೆಮಾದ ಮೂಲಕ ಓವರ್‍ ನೈಟ್ ಸ್ಟಾರ್‍ ಆದರು. ಈ ಸಿನೆಮಾದಲ್ಲಿ ಆಕೆಯ ನಟನೆ ಹಾಗೂ ಟ್ರೆಡಿಷನಲ್ ಲುಕ್ಸ್ ಮೂಲಕ ಎಲ್ಲರನ್ನೂ ಫಿದಾ ಆಗುವಂತೆ ಮಾಡಿದರು. ಆದರೆ ಆಕೆ ಸೊಷಿಯಲ್ ಮಿಡಿಯಾದಲ್ಲಿ ಮಾತ್ರ ಸದಾ ಬೋಲ್ಡ್ ಆಗಿಯೇ ಕಾಣಿಸಿಕೊಳ್ಳುತ್ತಿರುತ್ತಾರೆ. ಜೊತೆಗೆ ಆಕೆ ನಟಿಸಿದ ಲಸ್ಟ್ ಸ್ಟೋರೀಸ್-2 ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದರು. ಸೌತ್ ಸಿನೆಮಾಗಳಲ್ಲೇ ಬ್ಯುಸಿಯಾಗಿರುವ ಮೃಣಾಲ್ ಇದೀಗ ಬಾಲಿವುಡ್ ಸಿನಿರಂಗದ ಕುರಿತು ಹಾಟ್ ಕಾಮೆಂಟ್ಸ್ ಮಾಡಿದ್ದಾರೆ. ಅಷ್ಟಕ್ಕೂ ಆಕೆ ಮಾಡಿದ ಕಾಮೆಂಟ್ ಏನು ಎಂಬ ವಿಚಾರಕ್ಕೆ ಬಂದರೇ,

ಮರಾಠಿ ಮೂಲದ ಯಂಗ್ ಬ್ಯೂಟಿ ಮೃಣಾಲ್ ಠಾಕೂರ್‍ ಸೀತಾರಾಮಂ ಸಿನೆಮಾದ ಮೂಲಕ ಸೌತ್ ಪ್ರೇಕ್ಷಕರಿಗೆ ಪರಿಚಯವಾದರು. ಮೊದಲನೇ ಸಿನೆಮಾದ ಮೂಲಕವೇ ತೆಲುಗು ಪ್ರೇಕ್ಷರನ್ನು ಫಿದಾ ಮಾಡಿದರು. ನಟನೆ ಹಾಗೂ ಸೌಂದರ್ಯದ ಮೂಲಕ ಅನೇಕ ಯುವಕರ ಕನಸಿನ ರಾಣಿಯಾದರು. ಮೊದಲನೇ ಸಿನೆಮಾದ ಮೂಲಕವೇ ಕ್ರೇಜಿ ಹಿರೋಯಿನ್ ಆದ ಮೃಣಾಲ್ ಬಾಲಿವುಡ್ ಜೊತೆಗೆ ಟಾಲಿವುಡ್ ನಲ್ಲೂ ಸಹ ಒಳ್ಳೆಯ ಆಫರ್‍ ಗಳನ್ನು ಪಡೆದುಕೊಂಡು ಕೆರಿಯರ್‍ ಸಾಗಿಸುತ್ತಿದ್ದಾರೆ. ಇನ್ನೂ ಆಕೆ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ನೆವರ್‍ ಬಿಪೋರ್‍ ಎಂಬಂತೆ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಡುತ್ತಲೇ ಇದ್ದಾರೆ. ಸೀತಾರಾಮಂ ಸಿನೆಮಾದಲ್ಲಿ ಪದ್ದತಿಯಾಗಿ ಕಾಣಿಸಿಕೊಂಡ ಮೃಣಾಲ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಬೋಲ್ಡ್ ಬ್ಯೂಟಿಯಾಗಿದ್ದಾರೆ.

ಸದ್ಯ ಮೃಣಾಲ್ ಠಾಕೂರ್‍ ಸದ್ಯ ಸೌತ್ ಸಿನಿರಂಗದಲ್ಲಿ ಬಹುಬೇಡಿಕೆ ನಟಿಯಾಗಿದ್ದಾರೆ. ಒಳ್ಳೆಯ ಪ್ರಾಜೆಕ್ಟ್ ಗಳಲ್ಲಿ ಅವಕಾಶಗಳನ್ನು ಪಡೆದುಕೊಳ್ಳುತ್ತಾ ಸಾಗುತ್ತಿದ್ದಾರೆ. ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಮೃಣಾಲ್ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಬಾಲಿವುಡ್ ಸಿನಿರಂಗದ ಬಗ್ಗೆ ಆಕೆ ಮಾತನಾಡಿದ್ದಾರೆ. ಬಾಲಿವುಡ್ ನಲ್ಲಿ ನನಗೆ ಎಲ್ಲಾ ಗ್ಲಾಮರಸ್ ಪಾತ್ರಗಳ ಮಾತ್ರ ಬರುತ್ತವೇ ವಿನಃ ಒಳ್ಳೆಯ ಲವ್ ಸ್ಟೋರಿಯಂತಹ ಕಥೆಗಳಲ್ಲಿ ಅವಕಾಶಗಳು ಬರುತ್ತಿಲ್ಲ. ಒಳ್ಳೆಯ ಲವ್ ಸ್ಟೋರಿಯಿರುವಂತಹ ಸಿನೆಮಾಗಳಲ್ಲಿ ನಟಿಸಬೇಕೆಂಬ ಬಯಕೆ ಇದೆ. ಬಹುಶಃ ತನಗೆ ಬಾಲಿವುಡ್ ನಲ್ಲಿ ಒಳ್ಳೆಯ ಕ್ರೇಜ್ ಸಿಗಲಿಲ್ಲ ಎಂಬ ಕಾರಣದಿಂದ ಅಂತಹ ಅವಕಾಶಗಳು ಸಿಗುತ್ತಿಲ್ಲವೆನೋ ಎಂದು ಆಕೆ ಅಭಿಪ್ರಾಯಪಟ್ಟಿದ್ದಾರೆ.

ಇನ್ನೂ ಮೃಣಾಲ್ ಕೊನೆಯದಾಗಿ ಲಸ್ಟ್ ಸ್ಟೋರಿಸ್-2, ಆಂಖ್ ಮಿಚೋಲಿ ಎಂಬ ಸಿರೀಸ್ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು. ಸದ್ಯ ಆಕೆ ಹಿಂದಿಯಲ್ಲಿ ಫಿಪ್ಪಾ, ಪೂಜಾ ಮೆರಿಜಾನ್, ತೆಲುಗಿನಲ್ಲಿ ಫ್ಯಾಮಿಲಿ ಸ್ಟಾರ್‍ ಸಿನೆಮಾದಲ್ಲಿ ನಟಿಸುತ್ತಿದ್ದಾರೆ.  ಕೊನೆಯದಾಗಿ ಆಕೆ ಹಾಯ್ ನಾನ್ನ ಎಂಬ ಸಿನೆಮಾದಲ್ಲಿ ನ್ಯಾಚುರಲ್ ಸ್ಟಾರ್‍ ನಾನಿ ಜೊತೆಗೆ ನಟಿಸಿದ್ದರು.