News

ಕೊನೆಗೂ ಬಿಡುಗಡೆಯಾದ ನಿಗಮ ಮಂಡಳಿ ಪಟ್ಟಿ, 34 ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ….!

ಸುಮಾರು ದಿನಗಳಿಂದ ಕರ್ನಾಟಕ ಸರ್ಕಾರ ನಿಗಮ ಮಂಡಳಿ ನೇಮಕಾತಿಗೆ ಸಂಬಂಧಿಸಿದಂತೆ ತುಂಬಾನೆ ಕಸರತ್ತು ನಡೆಸಿತ್ತು. ನಿಗಮ ಮಂಡಳಿ ನೇಮಕಾತಿಗೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‍ ನಡುವೆ ಹಗ್ಗಜಗ್ಗಾಟ ಸಹ ನಡೆಯುತ್ತಿತ್ತು ಎನ್ನಲಾಗಿದೆ. ಸದ್ಯ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದ್ದು, 34 ಶಾಸಕರಿಗೆ ನಿಮಗ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಆದೇಶ ಹೊರಡಿಸಲಾಗಿದೆ.

ಕರ್ನಾಟಕದಲ್ಲಿ ಕಾಂಗ್ರೇಸ್ ಸರ್ಕಾರ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಬಳಿಕ ಸಚಿವ ಸ್ಥಾನಗಳಿಗಾಗಿ ದೊಡ್ಡ ಪೈಪೋಟಿ , ಲಾಬಿಗಳು ನಡೆದಿತ್ತು. ಸಚಿವ ಸ್ಥಾನ ಸಿಗದ ಸಚಿವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಶಾಸಕರನ್ನು ಸಮಾಧಾನ ಮಾಡುವ ಪ್ಲಾನ್ ಮಾಡಿತ್ತು. ಅದರಂತೆ ಸುಮಾರು ದಿನಗಳಿಂದ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ ನೇಮಕಾತಿಗಾಗಿ ಸಹ ಕಸರತ್ತುಗಳು ನಡೆದಿತ್ತು. ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ್‍ ನಡುವೆ ಹಗ್ಗಜಗ್ಗಾಟ ಸಹ ನಡೆಯುತ್ತಿತ್ತು. ಇದೀಗ ನಿಗಮ ಮಂಡಳಿ ಆಯ್ಕೆ ಪಟ್ಟಿ ಸರ್ಕಾರ ಬಿಡುಗಡೆಗೊಳಿಸಿ ಆದೇಶಿಸಿದೆ. ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ಮೂರು ಭಾರಿ ಸಚಿವರಾಗಿ ಆಯ್ಕೆಯಾದ ಎಸ್.ಎನ್.ಸುಬ್ಬಾರೆಡ್ಡಿಯವರೂ ಸಹ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಇದೀಗ ಅವರಿಗೆ ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತದ ಅಧ್ಯಕ್ಷ ಸ್ಥಾನ ನೀಡಿದೆ. ಈ ಪಟ್ಟವನ್ನು ಸ್ವೀಕರಿಸುತ್ತಾರಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top