ಕೇರಳದಲ್ಲಿ ಪತ್ತೆಯಾಯ್ತು ಕೋವಿಡ್ ಓಮಿಕ್ರಾನ್ ಉಪತಳಿ JN1, ಆತಂಕ ಬಿಡಿ, ಎಚ್ಚರಿಕೆ ತೆಗೆದುಕೊಳ್ಳಿ ಎಂದ ತಜ್ಞರು……!

Follow Us :

ಇಡೀ ವಿಶ್ವವನ್ನೇ ತಲ್ಲಣಗೊಳಿಸಿದಂತಹ ಕೋವಿಡ್ ಮಹಾಮಾರಿ ಇನ್ನೂ ಜೀವಂತವಾಗಿಯೇ ಇದೆ. ಕೋವಿಡ್ ಹಾವಳಿ ಕಡಿಮೆಯಾಗಿದ್ದು, ಜನರ ನಿಟ್ಟಿಸಿರು ಬಿಟ್ಟಿದ್ದಾರೆ. ಆದರೆ ಇದೀಗ ಮತ್ತೆ ಕೋವಿಡ್ ಪಾಸಿಟೀವ್ ಪ್ರಕರಣಗಳು ಹೆಚ್ಚಾಗುತ್ತಿದೆ. ಕೇರಳದಲ್ಲಿ ಓಮಿಕ್ರಾನ್ ಉಪ ತಳಿ ಜೆಎನ್-1 ತಳಿ ಪತ್ತೆಯಾಗಿದ್ದು, ಹೊಸ ಆತಂಕ ಶುರುವಾಗುತ್ತದೆಯೇ ಎಂಬ ಆತಂಕ ಮೂಡಿದೆ. ಆದರೆ ಈ ಬಗ್ಗೆ ಯಾವುದೇ ಭಯ ಬೇಡ, ಈ ಬಗ್ಗೆ ಎಚ್ಚರಿಕೆಯಿಂದರಬೇಕು ಎಂದು ತಜ್ಞರು ತಿಳಿಸಿದ್ದಾರೆ ಎನ್ನಲಾಗಿದೆ.

ಐ.ಎನ್.ಎಸ್.ಸಿ.ಒ.ಜಿ (ಭಾರತೀಯ ಸಾರ್ಸ್-ಕೋವ್-2 ಜಿನೋಮಿಕ್ ಕಾನ್ ಸೋರ್ಟಿಯಂ) ನೀಡಿದ ಹೊಸ ದತ್ತಾಂಶದಂತೆ ಕೇರಳದಲ್ಲಿ ಜಿ.ಎನ್-1 ತಳಿ ಇರುವುದು ಖಚಿತಪಡಿಸಿದೆ. ಇದು ಕೋವಿಡ್ ಪ್ರಕರಣಗಳ ಏರಿಕೆಗೆ ಕಾರಣವಾಗಬಹುದಾಗಿದೆ. ಬಿಎ.2.68 ಓಮಿಕ್ರಾನ್ ತಳಿಯ ವಂಶಾವಳಿಯೇ ಜಿ.ಎನ್.-1 ಆಗಿದೆ. ಮೊದಲ ಬಾರಿಗೆ ಆಗಸ್ಟ್ ಮಾಹೆಯಲ್ಲಿ ಇದು ಲಕ್ಸಂ ಬರ್ಗ್ ಎಂಬಲ್ಲಿ ಕಂಡುಬಂದಿತ್ತು. ನವೆಂಬರ್‍ ನಲ್ಲಿ ಅಮೇರಿಕಾದ ರೋಗ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕೇಂದ್ರ ಈ ವೈರಸ್ ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿತ್ತು.

ಇನ್ನೂ ಇದು ಹೊಸ ತಳಿಯಲ್ಲ ಆದರೆ ಭಾರತಕ್ಕೆ ಹೊಸದು ಎನ್ನಲಾಗಿದೆ. ಈಗಾಗಲೇ ಈ ವೈರಸ್ ತಳಿ 38 ದೇಶದಲ್ಲಿ ಅಸ್ತಿತ್ವ ಹೊಂದಿದೆ. ಈ ತಳಿಯು ಶ್ವಾಸಕೋಶದ ಮೇಲೆ ಕೆಲವೊಂದು ಪರಿಣಾಮಗಳನ್ನು ಬೀರಲಿದೆ. ಆದರೆ ಮೂಗು ಸೋರುವಿಕೆ, ಕೆಮ್ಮು, ಚಳಿ ಸೇರಿದಂತೆ ಕೆಲವೊಮ್ಮೆ ಉಸಿರಾಟದ ಸಮಸ್ಯೆ ಆಗಬಹುದು. ಆದರೆ ಈ ವೈರಸ್ ಗೆ ಐಸಿಯು ಬೆಡ್, ವೆಂಟಿಲೇಟರ್‍ ಬೇಕು ಎಂಬ ಸ್ಥಿತಿ ಉದ್ಬವವಾಗಿಲ್ಲ. ಇದರಿಂದ ಸಾವು ಸಹ ಸಂಭವಿಸಿಲ್ಲ. ಆದ್ದರಿಂದ ಈ ವೈರಸ್ ತಳಿಯ ಬಗ್ಗೆ ಹೆಚ್ಚಿನ ಆತಂಕ ಬೇಡ ಎಂದು ತಜ್ಞರು ತಿಳಿಸಿದ್ದಾರೆ ಎನ್ನಲಾಗಿದೆ. ಇನ್ನೂ ಈ ಬಗ್ಗೆ ಭಾರತದ ಆರೋಗ್ಯ ಸಚಿವಾಲಯ ವರದಿಯಂತೆ ದೇಶದಲ್ಲಿ 1185 ಹೊಸ ಕರೋನಾ ವೈರಸ್ ಸೋಂಕು ಪತ್ತೆಯಾಗಿದೆ. ಅದರಲ್ಲೂ ಕೇರಳದಲ್ಲಿ 1039 ಪ್ರಕರಣ ದಾಖಲಾಗಿದ್ದು, ಗಣನೀಯವಾಗಿ ಏರಿಕೆ ಕಂಡಿದೆ. ಈ ಬಗ್ಗೆ ಜನತೆ ಎಚ್ಚರಿಕೆಯಿಂದ ಇರಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.