ಬ್ಯಾಕ್ ಲೆಸ್, ಶಾರ್ಟ್ ಡ್ರೆಸ್ ನಲ್ಲಿ ಬೋಲ್ಡ್ ಆದ ನಟಿ ಮೌನಿ, ಆ ಬಟ್ಟೆ ಹಾಕೋ ಬದಲು ಹಾಗೇ ಬರೋಬೋದು ಅಲ್ವಾ ಎಂದ ನೆಟ್ಟಿಗರು….!

Follow Us :

ಬೆಂಗಾಲಿ ಮೂಲದ ನಟಿ ಮೌನಿ ರಾಯ್ ನಾಗಿನಿ ಸೀರಿಯಲ್ ಮೂಲಕ ತುಂಬಾ ಕ್ರೇಜ್ ಪಡೆದುಕೊಂಡರು. ನಾಗಿನಿ ಸೀಸನ್ 1,2,3 ರಲ್ಲಿ ನಟಿಸಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡರು. ಮೌನಿ ರಾಯ್ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುತ್ತಾರೆ. ಆಕೆ ಹೆಚ್ಚಾಗಿ ಬಿಕಿನಿಯಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ಕಾರ್ಯಕ್ರಮವೊಂದರಲ್ಲಿ ಆಕೆ ತುಂಬಾನೆ ಕಿರಿದಾದ ಡ್ರೆಸ್ ಧರಿಸಿ ಕಾಣಿಸಿಕೊಂಡಿದ್ದು, ಆಕೆಯನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ.

ನಾಗಿನಿ ಸೀರಿಯಲ್ ಫೇಂ ನ ಮೌನಿ ರಾಯ್ ಬ್ರಹ್ಮಾಸ್ತ್ರ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ನಾಗಿನಿ ಡೈಲಿ ಸೀರಿಯಲ್ ಮೂಲಕ ಕಿರುತೆರೆ ಪ್ರೇಕ್ಷಕರಲ್ಲಿ ದೊಡ್ಡ ಮಟ್ಟದ ಫೇಂ ಸಂಪಾದಿಸಿಕೊಂಡ ಈಕೆ ಬೆಳ್ಳಿತೆರೆಯಲ್ಲೂ ಸಹ ಕಡಿಮೆ ಸಮಯದಲ್ಲಿ ಖ್ಯಾತಿ ಪಡೆದುಕೊಂಡರು. ಸೋಷಿಯಲ್ ಮಿಡಿಯಾದಲ್ಲೂ ಸಹ ಬ್ಯುಸಿಯಾಗಿರುವ ಮೌನಿ ಸದಾ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಾ ಯುವಜನತೆಯ ಹೃದಯ ಗಾಯ ಮಾಡುತ್ತಾರೆ. ತೆರೆದ ಪುಸ್ತಕದಂತೆ ಆಕೆಯ ತನ್ನ ದೇಹದ ಮೈಮಾಟವನ್ನು ಪ್ರದರ್ಶನ ಮಾಡುತ್ತಾರೆ. ಬಿಕಿನಿ, ಶಾರ್ಟ್ ಡ್ರೆಸ್, ಟ್ರಾನ್ಸಫರೆಂಟ್ ಸ್ಯಾರಿ ಸೇರಿದಂತೆ ವಿವಿಧ ರೀತಿಯ ಔಟ್ ಫಿಟ್ ನಲ್ಲಿ ಸದಾ ಸ್ಟನ್ ಆಗುವಂತಹ ಪೋಸ್ ಗಳನ್ನು ಕೊಡುತ್ತಾ ಸೋಷಿಯಲ್ ಮಿಡಿಯಾದಲ್ಲಿ ಬಿಸಿಯನ್ನೇರಿಸುತ್ತಿರುತ್ತಾರೆ.

ಇದೀಗ ಕಾರ್ಯಕ್ರಮವೊಂದರಲ್ಲಿ ಮೌನಿ ರಾಯ್ ಭಾಗಿಯಾಗಿದ್ದರು. ಈ ಪಾರ್ಟಿಗೆ ಆಕೆ ತುಂಬಾನೆ ಚಿಕ್ಕದಾದ ಡ್ರೆಸ್ ನಲ್ಲಿ ಬಂದಿದ್ದರು. ಬ್ಯಾಕ್ ಲೆಸ್ ಆಗಿರುವಂತಹ ಗೋಲ್ಡ್ ಕಲರ್‍ ಡ್ರೆಸ್ ನಲ್ಲಿ ಆಕೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಕೆ ಈ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಆಕೆಯ ಈ ಲೇಟೆಸ್ಟ್ ಲುಕ್ಸ್ ಪೊಟೋಗಳು ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಅನೇಕರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಕೆಲವರು ಆಕೆಯ ಲೇಟೆಸ್ಟ್ ಲುಕ್ಸ್ ಮೆಚ್ಚಿ ಕಾಮೆಂಟ್ ಮಾಡುತ್ತಿದ್ದರೇ, ಮತ್ತೆ ಕೆಲವರು ಆಕೆ ಅವತಾರವನ್ನು ವಿಮರ್ಶೆ ಮಾಡುತ್ತಿದ್ದಾರೆ. ಅದರಲ್ಲೊಬ್ಬ ನೀವು ಉರ್ಫಿಯನ್ನು ನಾಚಿಸುವಂತ ಡ್ರೆಸ್ ಧರಿಸಿದ್ದೀರಾ ಎಂದರೇ, ಮತ್ತೋರ್ವ ಆ ರೀತಿಯ ಡ್ರೆಸ್ ಹಾಕುವ ಬದಲು ಹಾಗೆಯೇ ಬರಬಹುದಲ್ಲವೇ ಎಂದಿದ್ದಾರೆ. ಒಟ್ಟಿನಲ್ಲಿ ಮೌನಿ ಪೊಟೋಗಳು, ವಿಡಿಯೋ ಮಾತ್ರ ಇಂಟರ್‍ ನೆಟ್ ನಲ್ಲಿ ಭಾರಿ ವೈರಲ್ ಆಗುತ್ತಿದೆ.

ಇನ್ನೂ ಮೌನಿರಾಯ್ ಕಿರುತೆರೆಯ ಮೂಲಕ ಫೇಂ ಪಡೆದುಕೊಂಡು ಬಳಿಕ ಸಿನೆಮಾಗಳಲ್ಲಿ ನಟಿಸಿ ಫೇಮ ಪಡೆದುಕೊಂಡರು. ಬಾಲಿವುಡ್ ಸ್ಟಾರ್‍ ಅಕ್ಷಯ್ ಕುಮಾರ್‍ ರವರ ಗೋಲ್ಡ್ ಎಂಬ ಸಿನೆಮಾದ ಮೂಲಕ ನಟಿಯಾಗಿ ಸಿನೆಮಾಗಳಲ್ಲಿ ಎಂಟ್ರಿ ಕೊಟ್ಟರು. ಬಳಿಕ ಆಕೆ ಅನೇಕ ಸಿನೆಮಾಗಳಲ್ಲಿ ನಟಿಸಿ ಬೆಳ್ಳಿತೆರೆಯಲ್ಲೂ ತನ್ನ ಹವಾ ಸೃಷ್ಟಿಸಿದ್ದರು. ಸದ್ಯ ಆಕೆ ವರ್ಜಿನ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.