Film News

ಬಿಗ್ ಬಾಸ್ ಕನ್ನಡ ಸೀಸನ್ 10 ಫೈನಲ್ ಗೆ ಕಾರ್ತಿಕ್, ಸುದೀಪ್ ಕೊಟ್ರು ಸುಳಿವು, ಪುಲ್ ಖುಷಿಯಲ್ಲಿ ಕಾರ್ತಿಕ್…..!

ಕನ್ನಡದ ರಿಯಾಲಿಟಿ ಶೋಗಳಲ್ಲಿ ಅತ್ಯಂತ ಹೆಚ್ಚು ಖ್ಯಾತಿ ಪಡೆದುಕೊಂಡ ಬಿಗ್ ಬಾಸ್ ಸೀಸನ್ 10 ತುಂಬಾನೆ ಅದ್ಬುತವಾಗಿ ಮೂಡಿಬರುತ್ತಿದೆ. ಮನೆಯಲ್ಲಿ ಸ್ಪರ್ಧಾಳುಗಳು ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಇದೀಗ ಮನೆಯಲ್ಲಿ ಕಂಟೆಂಸ್ಟ್ ಗಳಿಗೆ ಕಿಚ್ಚ ಸುದೀಪ್ ರವರೇ ಸ್ವತಃ ಅಡುಗೆ ತಯಾರಿಸಿ ಕಳುಹಿಸಿದ್ದು, ಮನೆಯಲ್ಲಿನ ಸದಸ್ಯರು ಪುಲ್ ಖುಷಿಯಾಗಿದ್ದಾರೆ. ಈ ನಡುವೆ ಸುದೀಪ್ ರವರು ಬರೆದಿರುವಂತಹ ಪತ್ರದಲ್ಲಿ ಫೈನಲ್ ಗೆ ಕಾರ್ತಿಕ್ ಹೊಗ್ತಾರೆ ಎಂಬ ಸುಳಿವು ಸಿಕ್ಕಿದೆ.

ಬಿಗ್ ಬಾಸ್ ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಶೋ ನಡೆಸಿಕೊಡುತ್ತಾರೆ. ಈ ವಾರದ ಸರ್ಪ್ರೈಸ್ ಎಂಬಂತೆ ಕಿಚ್ಚ ಸುದೀಪ್ ರವರೇ ಸ್ವತಃ ಅಡುಗೆ ಮಾಡಿ ಅದನ್ನು ಮನೆಯಲ್ಲಿರುವ ಸದಸ್ಯರಿಗೆ ಕಳುಹಿಸಿದ್ದಾರೆ. ಊಟದ ಜೊತೆಗೆ ಪ್ರತಿಯೊಬ್ಬರಿಗೂ ಒಂದೊಂದು ಪತ್ರವನ್ನು ತಾವೇ ಕೈಯಾರೆ ಬರೆದು ಕಳುಹಿಸಿಕೊಟ್ಟಿದ್ದಾರೆ. ಈ ಪತ್ರದಲ್ಲಿ ಸ್ಪರ್ಧಾಳುಗಳಿಗೆ ಅತ್ಯಮೂಲ್ಯವಾದ ಸಲಹೆಗಳನ್ನು ನೀಡಿದ್ದಾರೆ. ಇವತ್ತಿನ ಅಡುಗೆ, ಕಿಚ್ಚನ ಕೈಯಡುಗೆ ಎಂಬ ಕಿಚ್ಚ ಹೇಳಿರುವ ಮಾತುಗಳೂ ಪ್ರಮೋದಲ್ಲಿ ನೋಡಬಹುದಾಗಿದೆ. ಇನ್ನೂ ಕಿಚ್ಚನ ಊಟ ಪಡೆದುಕೊಂಡ ಸ್ಪರ್ಧಾಳುಗಳು ಪುಲ್ ಖುಷಿಯಲ್ಲಿ ತೇಲಾಡಿದ್ದಾರೆ.

ಊಟದ ಜೊತೆಗೆ ಸ್ಫರ್ಧಿಗಳಿಗೆ ಪತ್ರವೊಂದು ದೊರೆತಿದೆ ಈ ಪತ್ರದಲ್ಲಿ ಸ್ಪರ್ಧಿಗಳಿಗೆ ಕಿಚ್ಚನ ಕಿವಿ ಮಾತುಗಳಿವೆ. ಇನ್ನೂ ಪ್ರತಿಯೊಬ್ಬರು ಆ ಪತ್ರವನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡು ಓದಿದ್ದಾರೆ. ಈ ಪತ್ರಗಳನ್ನು ಪಡೆದುಕೊಂಡ ಎಲ್ಲರಲ್ಲೂ ಕಾರ್ತಿಕ್ ಪುಲ್ ಖುಷಿಯಾಗಿದ್ದಾರೆ. ಅದಕ್ಕೆ ಪ್ರಮುಖ ಕಾರಣ ಕಿಚ್ಚ ಬರೆದ ಪತ್ರದಲ್ಲಿ ಕಾರ್ತಿಕ್ ನೀವು ಫೈನಲಿಸ್ಟ್ ಎಂದು ಬರೆದಿರುವುದು. ಹೌದು ಕಿಚ್ಚ ಕಳುಹಿಸಿದ ಪತ್ರದಲ್ಲಿ ಹಡ್ ಶೇವ್ ಮಾಡಿ ಆಟದ ಮೇಲಿರೋ ನಿಮ್ಮ ಡಿಸಿಶನ್ ತೊರಿಸಿದ್ದೀರಾ, ಪೋಕಸ್ ಸರಿ ಮಾಡಿ, ಫೈನಲಿಸ್ಟ್ ನಲ್ಲಿ ನಿಮ್ಮ ಹೆಸರು ಸೇವ್ ಮಾಡಿಕೊಳ್ಳಿ ಎಂದು ಬರೆದಿದ್ದಾರೆ. ಇನ್ನೂ ಈ ಪತ್ರ ಓದಿದ ಕಾರ್ತಿಕ್ ಪುಲ್ ಖುಷಿಯಾಗಿದ್ದಾರೆ. ಆ ಪತ್ರವನ್ನು ಮನೆಯ ಎಲ್ಲಾ ಸದಸ್ಯರಿಗೆ ತೋರಿಸಿ ಕುಣಿದು ಕುಪ್ಪಳಿಸಿದ್ದಾರೆ. ಆ ಮೂಲಕ ಕಾರ್ತಿಕ್ ಬಿಗ್ ಬಾಸ್ ಸೀಸನ್ 10 ರ ಫೈನಲಿಸ್ಟ್ ಎಂಬ ಸುಳಿವು ಸಿಕ್ಕಂತಾಗಿದೆ ಎನ್ನಲಾಗಿದೆ.

Most Popular

To Top